Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಾವಿಗೆಯಲ್ಲಿ ಒಮ್ಮೆ ಇಡ್ಲಿ ಮಾಡಿ ನೋಡಿ..! ದಿನ ಇದೇ ತಿಂಡಿ ಖಾಯಂ..!!
ಶಾವಿಗೆಯಲ್ಲಿ ನೀವು ರುಚಿ ರುಚಿಯ ಪಾಯಸ ಮಾಡಿ ಸವಿದಿರಬಹುದು. ಶಾವಿಗೆಯಲ್ಲಿ ನೀವು ಬಾಯಿ ಚಪ್ಪರಿಸಿ ಸವಿಯುವ ಉಪ್ಪಿಟ್ಟನ್ನು ಸಹ ಮಾಡಿ ಸವಿದಿರುತ್ತಿರಿ. ಶಾವಿಗೆಯಲ್ಲಿ ಬಹಳ ರುಚಿಕರ ತಿಂಡಿ ಮಾಡಬಹುದು. ಹಾಗೆ ಶಾವಿಗೆ ಆರೋಗ್ಯದ ದೃಷ್ಟಿಯಲ್ಲೂ ಒಳ್ಳೆಯದು.
ಆದ್ರೆ ಶಾವಿಗೆಯಲ್ಲಿ ಎಂದಾದ್ರು ಇಡ್ಲಿ ಮಾಡಿದ್ದೀರಾ? ಈಗಂತು ಇಡ್ಲಿಯಲ್ಲಿ ಹತ್ತು ಹಲವು ವಿಧಗಳಲ್ಲಿ ಮಾಡುತ್ತಾರೆ. ಹಲವು ಹೋಟೆಲ್‌ಗಳಲ್ಲಿ ವಿಭಿನ್ನ ರೀತಿಯ ಇಡ್ಲಿ ಮಾಡುತ್ತಾರೆ. ಅದ್ರಲ್ಲಿ ಈ ಶಾವಿಗೆ ಇಡ್ಲಿ ಹೆಚ್ಚು ಫೇಮಸ್ ಆಗಿದೆ. ಈ ಶಾವಿಗೆ ಇಡ್ಲಿ ಮಾಡೋದು ತುಂಬಾನೆ ಸುಲಭ. ಹೀಗಾಗಿ ಶಾವಿಗೆ ಇಡ್ಲಿ ಈಗ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ.

ಬೆಳಗಿನ ಹೊತ್ತು ರವೆ, ಅಕ್ಕಿ ಹಿಟ್ಟಿನ ಇಡ್ಲಿಗಿಂತಲೂ ಈ ಶಾವಿಗೆ ಇಡ್ಲಿ ತುಂಬಾನೆ ರುಚಿ ನೀಡುತ್ತೆ. ಹಾಗಾದ್ರೆ ಈ ಶಾವಿಗೆ ಇಡ್ಲಿ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತು ಬೇಕು?, ಮಾಡುವ ವಿಧಾನವೇನು?, ಹೇಗೆ ಮಾಡಬೇಕು ಎಂಬುದನ್ನು ನೋಡಿ.
ಶಾವಿಗೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಶಾವಿಗೆ - 2 ಕಪ್
- ಮೊಸರು
- ಕರಿವೇವು
- ರವೆ
- ಹಸಿ ಮೆಣಸು (ಸಣ್ಣಗೆ ಹೆಚ್ಚಿಕೊಂಡ)
- ಶುಂಠಿ
- ಕಡಲೆ ಬೇಳೆ
- ತೆಂಗಿನಕಾಯಿ ತುರಿ- ಕಾಲು ಕಪ್
- ಇಂಗು
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
ಶಾವಿಗೆ ಇಡ್ಲಿ ಮಾಡುವುದು ಹೇಗೆ?
ನೀವು ಶಾವಿಗೆಯಲ್ಲಿ ಎರಡು ವಿಧ ಇರುತ್ತೆ. ಒಂದು ಹಸಿ ಶಾವಿಗೆ ಇನ್ನೊಂದು ರೋಸ್ಟೆಡ್, ಹಸಿ ಶಾವಿಗೆ ಇದ್ದರೆ ಅದನ್ನು ಒಂದು ಬಾಂಡ್ಲಿಗೆ ಹಾಕಿ ಒಂದು 3 ನಿಮಿಷ ಹುರಿದುಕೊಳ್ಳಬೇಕು. ಆದರೆ ರೋಸ್ಟೆಡ್ ಇದ್ದರೆ ಹಾಗೆಯೇ ಮಾಡಬಹುದು.
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಸಾಸಿವೆ, ಕಡಲೆ ಬೇಳೆ, ಜೀರಿಗೆ ಹಾಕಿ ಫ್ರೈ ಮಾಡಿ ಬಳಿಕ ಇದಕ್ಕೆ ಹಸಿ ಮೆಣಸು, ಕರಿಬೇವು, ಶುಂಠಿ ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷದ ಬಳಿಕ ಹುರಿದಿರುವ ಶಾವಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಇದಕ್ಕೆ ರವೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು, ಇಂಗು ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ. ಬಳಿಕ ತೆಂಗಿನ ಕಾಯಿ ತುರಿ ಹಾಕಿ ಫ್ರೈ ಮಾಡಿ ಇಳಿಸಿಕೊಂಡು ಒಂದು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಡಿ.
ಈಗ ಉಪ್ಪು, ಮೊಸರು, ಅಡುಗೆ ಸೋಡಾ, ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮೊಸರು ಹುಳಿಯಾಗಿರದೆ ಆಗತಾನೆ ತಂದಿರುವ ಮೊಸರು ಬಳಸಿ. ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿಕೊಂಡು ಒಂದು ಪ್ಲೇಟ್ ಮುಚ್ಚಿ ಬಿಡಿ. 10 ನಿಮಿಷದ ಬಳಿಕ ಹಿಟ್ಟನ್ನು ಮತ್ತೆ ಮಿಕ್ಸ್ ಮಾಡಿಕೊಂಡು ಇಡ್ಲಿ ಅಚ್ಚುಗಳಿಗೆ ಎಣ್ಣೆ ಹಚ್ಚಿಕೊಂಡು ಈ ಹಿಟ್ಟನ್ನು ಅದರೊಳಗೆ ಹಾಕಿ ಬೇಯಲು ಇಡಿ. ಸುಮಾರು 20 ರಿಂದ 25 ನಿಮಿಷದಲ್ಲಿ ಈ ಶಾವಿಗೆ ಇಡ್ಲಿ ಬೇಯಲು ಬಿಡಿ.
ಇಷ್ಟಾದರೆ ನಿಮ್ಮ ಮುಂದೆ ಶಾವಿಗೆ ಇಡ್ಲಿ ರೆಡಿಯಾಗಿರುತ್ತದೆ. ಇದರ ಜೊತೆ ಕಾಯಿ ಚಟ್ನಿ ಮಾಡಿದೆ ಸವಿಯಲು ಬೊಂಬಾಟ್ ರುಚಿ ನೀಡಲಿದೆ.
ಗಮನಿಸಿ: ಶಾವಿಗೆ ಹಾಗೂ ರವೆಯನ್ನು ಅಳತೆ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಹುರಿದು ಕೊಂಡು ಮಾಡಿದರೆ ಉತ್ತಮ. ಹುಳಿ ಮೊಸರು ಬಳಸಬಾರದು, ಇದಕ್ಕೆ ಕ್ಯಾರೆಟ್ ಸಹ ಹಾಕಿ ಮಾಡಬಹುದು. ಚೆನ್ನಾಗಿ ತುರಿದು ಹಿಟ್ಟಿನಲ್ಲಿ ಹಾಕಿ ಇಡ್ಲಿ ಮಾಡಬಹುದು.



Click it and Unblock the Notifications