Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಜ್ಜಿ ಮಾಡಿದ ರುಚಿಯಂತೆ ಸಾಂಬಾರ್ ಪುಡಿ ಮಾಡಿ ನೋಡಿ..! ತಿಂಗಳ ಕಾಲ ಇಡುವ ವಿಧಾನವಿದು!
ಮನೆ ರುಚಿ ಅಡುಗೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮನೆ ಊಟ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟವೇ. ಮನೆ ಊಟದ ಮಜವೆ ಹಾಗೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೆ ರಾತ್ರಿಯ ಊಟ ಮನೆಯದ್ದೇ ಆಗಿದ್ದರೆ ಆ ದಿನ ಬಹಳ ಹಿತವಾಗಿರುತ್ತೆ. ಆದ್ರೆ ಕೆಲವರು ಕೆಲಸ, ಮನೆಯಿಂದ ಹೊರಗಿರುವ ಕಾರಣ ಹೋಟೆಲ್, ಕ್ಯಾಂಟೀನ್ ಊಟ ಮಾಡುವುದು ಕೂಡ ನಾವು ನೋಡಬಹುದು.
ಇನ್ನು ಈ ಮನೆಯಲ್ಲೇ ಮಾಡುವ ಅದೇಷ್ಟೋ ಖಾದ್ಯಗಳು ಬಹಳ ರುಚಿಕರವಾಗಿ, ಸವಿಯಲು ಕೂಡ ಅಷ್ಟೇ ಶುಚಿಯಾಗಿರುತ್ತೆ. ಹೀಗಾಗಿ ಮನೆ ಊಟ ಅಂದರೇನೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮನೆಯಲ್ಲಿ ಸಾಂಬಾರ್ ಮಾಡಿದ್ರೆ ಅದರ ರುಚಿ ಮತ್ತಷ್ಟು ಹೆಚ್ಚಾಗಿರುತ್ತೆ, ನಾವು ಮಧ್ಯಾಹ್ನ ಹಾಗೆ ರಾತ್ರಿ ಊಟಕ್ಕೂ ಸಾಂಬಾರ್ ಮಾಡಿ ಸವಿಯುವುದು ಸಾಮಾನ್ಯ.

ಆದ್ರೆ ಸಾಂಬಾರ್‌ಗೆ ಮತ್ತಷ್ಟು ರುಚಿ ನೀಡಬೇಕು ಅಂದ್ರೆ ನಾವು ಮನೆಯಲ್ಲೇ ಅದರ ಮಸಾಲೆಗಳ ಮಾಡಿಕೊಳ್ಳಬೇಕು. ಆದ್ರೆ ಪ್ರತಿ ಬಾರಿ ಮಸಾಲೆಗಳ ಮಾಡಿಕೊಳ್ಳುವುದಕ್ಕಿಂತ ಒಂದೇ ಬಾರಿಗೆ ಸ್ವಲ್ಪ ಜಾಸ್ತಿ ಸಾಂಬಾರ್ ಪುಡಿಯನ್ನು ಮನೆಯಲ್ಲಿ ಮಾಡಿ ಇಟ್ಟರೆ ನಿಮಗೆ ಬೇಕಾದಾಗ ರುಚಿ ರುಚಿಯ ಸುವಾಸನೆಯುಕ್ತ ಸಾಂಬಾರ್ ಮಾಡಿ ಸವಿಯಹುದು.
ಹೀಗಾಗಿ ನಾವಿಂದು ಮನೆಯಲ್ಲೇ ಅತ್ಯಂತ ರುಚಿಕರವಾದ ಸಾಂಬಾರ್ ಪುಡಿ ಮಾಡಿಕೊಳ್ಳುವ ಕುರಿತು ತಿಳಿದುಕೊಳ್ಳೋಣ. ಈ ಸಾಂಬಾರ್ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಈ ಸಾಂಬಾರ್ ಪುಡಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ನಾವಿಂದು ಸುಮಾರು ಕಾಲು ಕೆ.ಜಿ ಸಾಂಬಾರ್ ಪುಡಿ ಮಾಡಲು ಎಷ್ಟು ಪದಾರ್ಥ ಬೇಕು ನೋಡೋಣ.
ಸಾಂಬಾರ್ ಪುಡಿ ಮಾಡಿಕೊಳ್ಳಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕೊತ್ತಂಬರಿ ಕಾಳು -
- ಗುಂಟೂರು ಕೆಂಪು ಮೆಣಸಿನಕಾಯಿ -
- ಬ್ಯಾಡಗಿ ಮೆಣಸು -
- ಉದ್ದಿನ ಬೇಳೆ-50 ಗ್ರಾಂ
- ಹೆಸರು ಕಾಳು
- ಕಡಲೆ ಕಾಳು
- ಚಕ್ಕೆ
- ತೊಗರಿ ಬೇಳೆ- 20 ಗ್ರಾಂ
- ಅಕ್ಕಿ - 50 ಗ್ರಾಂ
- ಅರಿಶಿನ
- ದಾಲ್ಚಿನ್ನಿ
- ಲವಂಗ
- ಜೀರಿಗೆ - 20 ರಾಂ
- ಕಾಳು ಮೆಣಸು
- ಮೆಂತ್ಯ - 20 ಗ್ರಾಂ
- ಸಾಸಿವೆ
- ಇಂಗು
- ಕರಿಬೇವು
- ಉಪ್ಪು
ಸಾಂಬಾರ್ ಪುಡಿ ಮಾಡಿಕೊಳ್ಳುವ ವಿಧಾನ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಕೊತ್ತಂಬರಿ ಅಥವಾ ಧನಿಯಾ ಕಾಳು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಅದನ್ನು ತೆಗೆದು ಬದಿಗಟ್ಟುಕೊಂಡು ನಂತರ ಒಣ ಮೆಣಸು ಕೂಡ ಹಾಕಿಕೊಂಡು ಹುರಿದುಕೊಳ್ಳಬೇಕು. ಹಾಗೆ ನಂತರ ತೊಗರಿ ಬೇಳೆ, ಹೆಸರು ಕಾಲು, ಕಡಲೆ ಕಾಳು, ಮೆಂತ್ಯ ಎಲ್ಲಾ ಹಾಕಿಕೊಂಡು ಹುರಿದುಕೊಳ್ಳಿ. ನಂತರ ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಕಾಳು ಮೆಣಸು, ಜೀರಿಗೆ, ಸಾಸಿವೆ, ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿ. ಇದಕ್ಕೆ ಅರಶಿಣ ಕೂಡ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ ಬದಿಗೆ ತೆಗೆದಿಟ್ಟುಕೊಳ್ಳಿ. ನಂತರ ಕರಿಬೇವು ಹಾಗೂ ಸ್ವಲ್ಪ ಅಕ್ಕಿ ಹಾಕಿ ಹುರಿದು ಬದಿಗಿಟ್ಟುಕೊಳ್ಳಿ. ಈಗ ಎಲ್ಲಾ ವಸ್ತುಗಳನ್ನು ತಣ್ಣಗಾಗಲು ಬಿಡಿ. ತಣ್ಣಗಾದ ವಸ್ತುಗಳನ್ನು ಈಗ ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಮಿಕ್ಸಿ ಜಾರ್ ಒರೆಸಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ, ಇದಕ್ಕೆ ಉಪ್ಪು ಹಾಗೂ ಇಂಗು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು. ಹೀಗೆ ಮಾಡಿದ್ರೆ ಬಹಳ ಕಾಲ ಇಟ್ಟು ಆಗಾಗ ಸಾಂಬಾರ್ ಮಾಡಬಹುದು. ಈ ರೀತಿಯ ಮಸಾಲೆ ನಿಮ್ಮ ಬಾಯಿ ರುಚಿ ಹೆಚ್ಚಿಸಲಿದೆ, ಹಾಗೆ ಸಾಂಬಾರ್‌ಗೆ ಬಳಸಿದರೆ ಮನೆಯಲ್ಲಾ ಘಮಲು ತುಂಬಿಕೊಳ್ಳುತ್ತೆ.



Click it and Unblock the Notifications