Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಟೊಮೆಟೋ, ಈರುಳ್ಳಿ, ತರಕಾರಿ ಬಳಸದೆ ಮಾಡಿ ಸಾಂಬಾರ್ ಗ್ರೇವಿ..! ಹೇಗೆ ಗೊತ್ತಾ?
ಊಟಕ್ಕೂಂದು ಸಾಂಬಾರ್ ಇದ್ದರೇನೆ ಅದರ ರುಚಿ ದುಪ್ಪಟ್ಟಾಗೋದು. ಅದರಲ್ಲೂ ವಿಶೇಷ ಸಾಂಬಾರ್‌ಗಳಂತೂ ಊಟದ ರುಚಿ ಹೆಚ್ಚಿಸಲಿವೆ. ಹಾಗೆ ಎಲ್ಲಾ ರೆಸಿಪಿಗಳಿಗೆ ಹೋಲಿಸಿದರೆ ಸಾಂಬಾರ್ ಅನ್ನು ಎಲ್ಲಾ ಖಾದ್ಯದ ಜೊತೆಗೂ ಬಳಸಬಹುದು. ಅದರಲ್ಲೂ ಬೆಳಗ್ಗೆ ಇಡ್ಲಿ, ದೋಸೆ ಜೊತೆಗೂ ಸಾಂಬಾರ್ ಬಳಕೆ ಮಾಡುವುದು ನೋಡಬಹುದು. ಸಾಂಬಾರ್ ಇಲ್ಲದ ಊಟ ಬಹಳ ಬೇಸರ ತರಿಸಬಹುದು.
ಇನ್ನು ಸಾಂಬಾರ್ ಮಾಡುವುದು ಅಂದ್ರೆ ಹಲವು ವಸ್ತುಗಳು ಬೇಕಾಗಬಹುದು. ಹಲವು ರೀತಿಯ ವಸ್ತುಗಳ ಅಗತ್ಯ ಇರಲಿದೆ ಎಂಬುದು ಎಲ್ಲರ ಭಾವನೆ. ಹೀಗಾಗಿ ಒಂದೇ ಒಂದು ವಸ್ತು ಕಡಿಮೆ ಇದ್ದರೂ ಅಂದು ಸಾಂಬಾರ್ ಮಾಡುವ ಬದಲಾಗಿ ಬೇರೆ ಏನಾದರು ಮಾಡಿ ಸವಿಯಲು ಮುಂದಾಗುವುದು ನೋಡಬಹುದು. ಆದ್ರೆ ನಾವಿಂದು ಅತ್ಯಂತ ಸುಲಭದ ವಿಧಾನದಲ್ಲಿ ಸಾಂಬಾರ್ ಮಾಡುವ ಕುರಿಂತಂತೆ ಹೇಳಲಿದ್ದೇವೆ.

ಹೌದು ಸಾಂಬಾರ್ ಮಾಡಲು ಬಹಳ ಮುಖ್ಯವಾಗಿ ಈರುಳ್ಳಿ, ಟೊಮೆಟೋ, ತರಕಾರಿ ಬೇಕ ಬೇಕು. ಇದ್ಯಾವುದೂ ಇಲ್ಲದೆ ಸಾಂಬಾರ್ ಮಾಡಲು ಸಾಧ್ಯವಿಲ್ಲ ಎಂದು ನೀವು ತಿಳಿದಿರಬಹುದು. ಆದ್ರೆ ಈ ಮೂರು ವಸ್ತು ಇಲ್ಲದೆ ಅದ್ಭುತ ರುಚಿಯ ಸಾಂಬಾರ್ ಮಾಡಬಹುದು. ನಿಮಿಗೆ ಅಚ್ಚರಿ ಎನಿಸಬಹುದು, ಈರುಳ್ಳಿ, ಟೊಮೆಟೋ, ತರಕಾರಿಯೇ ಬಳಸದೆ ಸಾಂಬಾರ್ ಮಾಡುವುದು ಹೇಗೆ ಅನ್ನೋ ಅನುಮಾನ ನಿಮಗೆ ಕಾಡಬಹುದು. ಆದ್ರೆ ಈ ರೀತಿ ವಿಧಾನದಲ್ಲಿ ಮಾಡಿ ಸವಿಯಬಹುದು. ಅದರಲ್ಲೂ ರುಚಿ ಫಸ್ಟ್ ಕ್ಲಾಸ್ ಆಗಿರುತ್ತೆ.
ಹಾಗಾದ್ರೆ ಈರುಳ್ಳಿ, ಟೊಮೆಟೋ, ತರಕಾರಿ ಬಳಸದೆ ಸಾಂಬಾರ್ ಮಾಡುವುದು ಹೇಗೆ? ಮಾಡಲು ಬೇರೆ ಯಾವ ಪದಾರ್ಥಗಳು ಇರಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ನಾವು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಈರುಳ್ಳಿ, ಟೊಮೆಟೋ ಬಳಸದೆ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕೊತ್ತಂಬರಿ ಕಾಳು
- ಒಣ ಮೆಣಸು
- ಹುಣಸೆ ಹುಳಿ
- ಮೆಂತ್ಯ
- ಸಾಸಿವೆ
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಸಾಂಬಾರ್ ಪುಡಿ
- ಕರಿಮೆಣಸು
- ಜೀರಿಗೆ
- ಕರಿಬೇವು
- ಖಾರದ ಪುಡಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ, ಟೊಮೆಟೋ ಬಳಸದೆ ಸಾಂಬಾರ್ ಮಾಡುವ ವಿಧಾನವೇನು?
ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಮೆಂತ್ಯ, ಒಣ ಮೆಣಸು, ಬೆಳ್ಳುಳ್ಳಿ, ಕಾಳು ಮೆಣಸು ಹಾಕಿಕೊಂಡು 1 ನಿಮಿಷಗಳ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಹೆಚ್ಚು ಉರಿ ಇಟ್ಟುಕೊಳ್ಳಬೇಡಿ, ಇದು ಕರಟುವ ಸಾಧ್ಯತೆ ಹೆಚ್ಚು. ನಂತರ ಒಲೆ ಆಫ್ ಮಾಡಿಕೊಂಡು ಈ ವಸ್ತುಗಳು ತಣ್ಣಗಾಗಲು ಬಿಡಿ.
ನಂತರ ಈ ತಣ್ಣಗಾದ ವಸ್ತುಗಳನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಮೊದಲು ತರಿ ತರಿಯಾಗಿ ರುಬ್ಬಿ. ನಂತರ ಮುಚ್ಚಳ ತೆಗೆದು ನೆನೆಸಿಟ್ಟ ಹುಣಸೆ ಹುಳಿ, ಸಾಂಬಾರ್ ಪೌಡರ್, ಸ್ವಲ್ಪ ನೀರು ಹಾಕಿಕೊಂಡು ಮತ್ತೆ ನುಣ್ಣಗೆ ರುಬ್ಬಿಕೊಳ್ಳಬೇಕು. ಹೀಗೆ ರುಬ್ಬಿದ ವಸ್ತುಗಳನ್ನು ಒಂದು ಬೌಲ್‌ಗೆ ಹಾಕಿಡಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಾಸಿವೆ, ಮೆಂತ್ಯ, ಒಣ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿ. ಎಣ್ಣೆ ಸ್ವಲ್ಪ ಹೆಚ್ಚು ಬಳಸಿ. ನಂತರ ಇದಕ್ಕೆ ರುಬ್ಬಿಕೊಂಡಿರುವ ಮಿಶ್ರಣ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ನಿಮಿಷಗಳ ಕಾಲ ಫ್ರೈ ಮಾಡಿ. ಈ ವೇಳೆ ಉಪ್ಪು ಸಹ ಹಾಕಿಕೊಳ್ಳಿ.
ನಂತರ ಇದಕ್ಕೆ ಸ್ವಲ್ಪ ಮಿಕ್ಸಿ ಜಾರ್‌ಗೆ ನೀರು ಹಾಕಿ ಅದನ್ನು ತೊಳೆದು ಇದಕ್ಕೆ ಹಾಕಿಕೊಳ್ಳಿ. ನಂತರ 5 ನಿಮಿಷಗಳ ಕಾಲ ಬಿಟ್ಟು ಕುದಿಯಲು ಬಿಡಿ. ನಂತರ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಸಾಂಬಾರ್ ಅಥವಾ ಗ್ರೇವಿ ರೆಡಿಯಾಗುತ್ತೆ. ಇದನ್ನು ಯಾವುದೇ ತಿಂಡಿ ಅಥವಾ ಊಟದ ಜೊತೆಗೂ ಸವಿಯಬಹುದು.



Click it and Unblock the Notifications