Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್ಪಿ & ಕ್ರೀಮಿ ಕಾಂಬೋ! ಸಬ್ಬಕ್ಕಿ ಮೊಸರು ವಡೆ.. ಬೇಳೆ ಇಲ್ಲದೇ ಹೇಗೆ ಮಾಡೋದು ನೋಡಿ
ವಡೆ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ದಹಿ ವಡೆಗೆ ಒಂದು ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಉದ್ದಿನ ಬೇಳೆಯಿಂದ ತಯಾರಿಸುವ ತಿಂಡಿಯನ್ನು ಎಲ್ಲರೂ ಬಹಳ ಇಷ್ಟಪಡುತ್ತಾರೆ. ಆದರೆ, ಉಪವಾಸದ ಸಮಯದಲ್ಲಿ ಉದ್ದಿನ ಬೇಳೆ ಬಳಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಬ್ಬಕ್ಕಿ ಮೊಸರು ವಡೆ (Sabudana Dahi Vada) ಒಂದು ಆರೋಗ್ಯಕರ ಆಯ್ಕೆ. ಇದು ರುಚಿಯಲ್ಲೂ, ಪೌಷ್ಟಿಕತೆಯಲ್ಲೂ ಕಡಿಮೆಯಿಲ್ಲ. ಸಬ್ಬಕ್ಕಿಯಿಂದ ತಯಾರಿಸಿದ ಈ ವಡೆಗಳು ಮೃದುವಾಗಿ, ಕ್ರೀಮಿಯಾದ ಮೊಸರಿನೊಂದಿಗೆ ಸೇರಿ ತಿನ್ನುವವರಿಗೆ ವಾವ್ ಫೀಲ್ ನೀಡುತ್ತವೆ.
ಸಬ್ಬಕ್ಕಿ (Sabbakki) ಅಥವಾ ಸಾಬುದಾನ ಉಪವಾಸದಲ್ಲಿ ಹೆಚ್ಚು ತಿನ್ನುವ ಆಹಾರ. ಇದರಲ್ಲಿ ಶಕ್ತಿದಾಯಕ ಕಾರ್ಬೋಹೈಡ್ರೇಟ್ಸ್ ಅಧಿಕವಾಗಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದಕ್ಕೆ ಆಲೂಗಡ್ಡೆ ಸೇರಿಸಿದರೆ ತಟ್ಟನೆ ಹೊಟ್ಟೆ ತುಂಬುತ್ತದೆ. ಮೊಸರು ತಂಪಾದ ಗುಣವನ್ನು ನೀಡುವುದರಿಂದ ದೇಹದೊಳಗಿನ ಜೀರ್ಣಕ್ರಿಯೆ ಸುಲಭವಾಗುತ್ತದೆ. ಹಸಿರು ಚಟ್ನಿ ಮತ್ತು ಹುಣಸೆ ಚಟ್ನಿ ಜೊತೆಯಾದರೆ ರುಚಿಗೆ ಹೊಸ ಮೆರುಗು ಸಿಗುತ್ತದೆ. ಬಿಸಿ ಬಿಸಿ ವಡೆ ಮತ್ತು ಅದರ ಮೇಲೆ ಸುರಿಯುವ ತಂಪು ಮೊಸರಿನ ಕಾಂಬಿನೇಷನ್ ನಿಜಕ್ಕೂ ಅದ್ಭುತ. ಸಬ್ಬಕ್ಕಿ ಮೊಸರು ವಡೆಯನ್ನು ಮನೆಯಲ್ಲಿ ಸುಲಭವಾಗಿ ಹೇಗೆ (Sabudana Dahi Vada Recipe) ಮಾಡಬೇಕೆಂದು ತಿಳಿಯೋಣ ಬನ್ನಿ.

ಸಬ್ಬಕ್ಕಿ ಮೊಸರು ವಡೆಗೆ ಬೇಕಾಗುವ ಸಾಮಗ್ರಿಗಳು
• ನೆನೆಸಿದ ಸಬ್ಬಕ್ಕಿ
• ಬೇಯಿಸಿ ಹಿಸುಕಿದ ಆಲೂಗಡ್ಡೆ
• ಹುರಿದ ಕಡಲೆಕಾಯಿ ಪುಡಿ
• ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ
• ತುರಿದ ಶುಂಠಿ
• ಸೈಂಧವ ಲವಣ (ಉಪವಾಸದ ಉಪ್ಪು)
• ಜೀರಿಗೆ ಪುಡಿ
• ಕಡೆದ ಮೊಸರು
• ಹಸಿರು ಚಟ್ನಿ
• ಹುಣಸೆಹಣ್ಣಿನ ಚಟ್ನಿ
• ಕೆಂಪು ಮೆಣಸಿನ ಪುಡಿ
• ಎಣ್ಣೆ

ಸಬ್ಬಕ್ಕಿ ಮೊಸರು ವಡೆ ಮಾಡುವ ವಿಧಾನ
ಮೊದಲು, ನೆನೆಸಿದ ಸಬ್ಬಕ್ಕಿಯಲ್ಲಿರುವ ಹೆಚ್ಚುವರಿ ನೀರನ್ನು ಸಂಪೂರ್ಣವಾಗಿ ಹಿಂಡಿ ತೆಗೆಯಿರಿ. ನಂತರ ಒಂದು ದೊಡ್ಡ ಬಟ್ಟಲಿನಲ್ಲಿ ಸಬ್ಬಕ್ಕಿ, ಬೇಯಿಸಿ ಹಿಸುಕಿದ ಆಲೂಗಡ್ಡೆ, ಹುರಿದ ಕಡಲೆಕಾಯಿ ಪುಡಿ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ತುರಿದ ಶುಂಠಿ ಮತ್ತು ಸೈಂಧವ ಲವಣವನ್ನು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವು ಒಂದು ಗಟ್ಟಿಯಾದ ಹಿಟ್ಟಿನಂತೆ ಆಗಬೇಕು.
ಈಗ, ಸಿದ್ಧಪಡಿಸಿದ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ಅದನ್ನು ಚಪ್ಪಟೆ ಮಾಡಿ ವಡೆಯ ಆಕಾರ ನೀಡಿ. ಎಲ್ಲಾ ಮಿಶ್ರಣದಿಂದ ವಡೆಗಳನ್ನು ಮಾಡಿ ಇಟ್ಟುಕೊಳ್ಳಿ. ಈಗ ಒಂದು ಕಡಾಯಿ ಅಥವಾ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ವಡೆಗಳನ್ನು ನಿಧಾನವಾಗಿ ಎಣ್ಣೆಯಲ್ಲಿ ಹಾಕಿ. ಅವು ಗೋಲ್ಡ್ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಹುರಿಯಿರಿ. ವಡೆಗಳನ್ನು ಎರಡೂ ಬದಿ ತಿರುಗಿಸಿ ಸಮವಾಗಿ ಬೇಯಿಸಿ.

ಹುರಿದ ವಡೆಗಳನ್ನು ಎಣ್ಣೆಯಿಂದ ತೆಗೆದ ನಂತರ, ಅವುಗಳನ್ನು 10 ರಿಂದ 15 ಸೆಕೆಂಡುಗಳ ಕಾಲ ಉಗುರು ಬೆಚ್ಚಗಿನ ನೀರಿಗೆ ಹಾಕಿ. ಈ ಹಂತವು ವಡೆಗಳನ್ನು ಒಳಗಿನಿಂದ ಮೃದುವಾಗಿಸುತ್ತದೆ. ನಂತರ ಅವುಗಳನ್ನು ನೀರನಿಂದ ಹೊರತೆಗೆದು ನಿಧಾನವಾಗಿ ಹಿಂಡಿ ಹೆಚ್ಚುವರಿ ನೀರನ್ನು ತೆಗೆದುಹಾಕಿ.
ಒಂದು ಬಟ್ಟಲಿನಲ್ಲಿ ಕಡೆದ ಮೊಸರಿಗೆ ಸ್ವಲ್ಪ ಸೈಂಧವ ಲವಣ ಮತ್ತು ಜೀರಿಗೆ ಪುಡಿ ಸೇರಿಸಿ ಕಲಸಿಕೊಳ್ಳಿ. ಈಗ ತಟ್ಟೆಯಲ್ಲಿ ವಡೆಗಳನ್ನು ಜೋಡಿಸಿ, ಅದರ ಮೇಲೆ ತಯಾರಿಸಿದ ಮೊಸರನ್ನು ಸಮವಾಗಿ ಸುರಿಯಿರಿ. ಕೊನೆಯದಾಗಿ, ಹಸಿರು ಚಟ್ನಿ, ಹುಣಸೆಹಣ್ಣಿನ ಚಟ್ನಿ, ಕೆಂಪು ಮೆಣಸಿನ ಪುಡಿ ಮತ್ತು ಸ್ವಲ್ಪ ಹುರಿದ ಜೀರಿಗೆ ಪುಡಿಯಿಂದ ಅಲಂಕರಿಸಿ. ಇಷ್ಟು ಮಾಡಿದರೆ, ಸಬ್ಬಕ್ಕಿ ಮೊಸರು ವಡೆ ಸಿದ್ಧ. ಈ ದಹಿ ವಡೆಯನ್ನು ತಂಪಾಗಿ ಸವಿದರೆ ರುಚಿ ಹೆಚ್ಚಾಗುತ್ತದೆ.



Click it and Unblock the Notifications