Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಊಟದ ರುಚಿ ಹೆಚ್ಚಿಸುವ ಆರೋಗ್ಯದ ಸೂಪರ್ ಫುಡ್: ಸಬ್ಬಸಿಗೆ ಪಲ್ಯ ಮಾಡಿ!
ಮಧ್ಯಾಹ್ನ ಹಾಗೆ ರಾತ್ರಿ ಊಟದೊಂದಿಗೆ ನೀವು ಸವಿಯಲು ಸಾಂಬಾರ್ ಜೊತೆಗೆ ಪಲ್ಯ ಮಾಡುವುದು ಕಾಮನ್. ಅದ್ರಲ್ಲೂ ಹಲವು ಬಗೆಯ ಪಲ್ಯಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸೊಪ್ಪು ಹಾಗೆ ಕಾಳಿನ ಪಲ್ಯಗಳು ಅಂದ್ರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೆ ಎಲ್ಲರಲ್ಲೂ ಇಷ್ಟದ ಖಾದ್ಯ ಅಂದ್ರೆ ಸಬ್ಬಸ್ಸಿಗೆ ಸೊಪ್ಪಿನ ಪಲ್ಯ.
ಈ ಸಬ್ಬಸ್ಸಿಗೆ ಸೊಪ್ಪಿನ ಪಲ್ಯ ಎಲ್ಲರಿಗೂ ಇಷ್ಟವಾಗುತ್ತೆ. ತಿಂಡಿಯ ಜೊತೆಗೆ ಹಾಗೆ ಊಟದೊಂದಿಗೆ ಸವಿಯಲು ಇದು ಹೇಳಿ ಮಾಡಿಸಿದ ಖಾದ್ಯ. ಅದ್ರಲ್ಲೂ ಸುಲಭವಾಗಿ ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ ಪಲ್ಯ. ಹಾಗಾದ್ರೆ ಈ ಪಲ್ಯ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಈ ಸಬ್ಬಸಿಗೆ ಸೊಪ್ಪಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಾಗಿದೆ. ಇದರಿಂದ ನಿಮ್ಮ ದೇಹದಲ್ಲಿ ಯಾವುದಾದರೆ ಹಸಿ ಗಾಯವಾಗಿದ್ದರೆ ಹಾಗೆ ರೋಗ ನಿರೋದಕ ಶಕ್ತಿ ಕಡಿಮೆಯಾಗಿದ್ದರೆ ಈ ಸಬ್ಬಸಿಗೆ ಸೊಪ್ಪು ಸೇವಿಸಬೇಕು. ನಿಮ್ಮಲ್ಲಿ ಜೀರ್ಣಕ್ರಿಯೆ ಸಂಬಂಧವಾಗಿ ಸಮಸ್ಯೆ ಇದ್ದರೆ ಈ ಸಬ್ಬಸಿಗೆ ಸೊಪ್ಪು ಬಹಳ ಪ್ರಯೋಜನಕಾರಿ.
ಹಾಗಾದ್ರೆ ಆರೋಗ್ಯಕ್ಕೂ ಉತ್ತಮವಾಗಿರುವ ಈ ಸಬ್ಬಸಿಗೆ ಸೊಪ್ಪು ಕಾಳುಗಳ ಹಾಕಿ ಅದ್ಭುತ ರುಚಿಯ ಪಲ್ಯ ಮಾಡಲಾಗುತ್ತದೆ. ಈ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಬ್ಬಸಿಗೆ ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಸಬ್ಬಸಿಗೆ ಸೊಪ್ಪು
- ಹಸಿ ಮೆಣಸು
- ಬೆಳ್ಳುಳ್ಳಿ
- ಹೆಸರು ಕಾಳು
- ಜೀರಿಗೆ
- ಈರುಳ್ಳಿ
- ಟೊಮೆಟೋ
- ಅರಶಿಣ
- ಉಪ್ಪು
- ಎಣ್ಣೆ
ಸಬ್ಬಸಿಗೆ ಸೊಪ್ಪಿನ ಪಲ್ಯ ಮಾಡುವುದು ಹೇಗೆ?
ಮೊದಲು ಒಂದು ಕಪ್ ಹೆಸರನ್ನು ಕಾಳನ್ನು 2 ಬಾರಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ, ಇನ್ನೊಂದು ಕಡೆ ಒಲೆ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಬರಲು ಬಿಡಿ. ನೀರು ಕುದಿಬರುವಾಗ ಅದಕ್ಕೆ ಈ ಹೆಸರುಕಾಳನ್ನು ಹಾಕಿ ಬೇಯಲು ಬಿಡಿ. ಹೆಸರು ಕಾಳು ಮೆತ್ತಗಾಗುವವರೆಗೂ ಬೇಯಿಸಿ ನೀರು ತೆಗೆದು ಕಾಳುಗಳ ಇಟ್ಟುಕೊಳ್ಳಿ.
ಈಗ ಸಣ್ಣ ಮಿಕ್ಸರ್ ಜಾರ್‌ಗೆ ಬೆಳ್ಳುಳ್ಳಿ ಹಾಕಿ ಜಜ್ಜಿಕೊಳ್ಳುವ ಹದದಲ್ಲಿ ರುಬ್ಬಿ. ಹಾಗೆ ಅದಕ್ಕೆ ಹಸಿ ಮೆಣಸು ಕೂಡ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಳಿಕ ಜೀರಿಗೆ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಜಜ್ಜಿಕೊಂಡಿದ್ದ ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
ಈಗ ಸಣ್ಣದಾಗಿ ಹೆಚ್ಚಿಕೊಂಡ 1 ಟೊಮೆಟೋ ಹಾಕಿ ಬೇಯಿಸಿಕೊಳ್ಳಿ. ನಂತರ ಅರಶಿಣ, ಹಾಗೆ ಜಜ್ಜಿಕೊಂಡಿದ್ದ ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿಕೊಳ್ಳುತ್ತಾ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈಗ ಹೆಚ್ಚಿಕೊಂಡಿರುವ ಸಬ್ಬಸಿಗೆ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಹೆಚ್ಚಿನ ಪ್ರಮಾಣದ ಸೊಪ್ಪು ಇರಲಿ. ನಂತರ 2 ನಿಮಿಷ ಬಿಟ್ಟು ಇದಕ್ಕೆ ಬೇಯಿಸಿಕೊಂಡಿದ್ದ ಹೆಸರು ಕಾಳನ್ನು ಕೂಡ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಂಡು ಇಳಿಸಿಕೊಂಡು ಎರಡಿಂದ ಮೂರು ನಿಮಿಷ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ.
ಇಷ್ಟಾರೆ ನಿಮ್ಮ ಮುಂದೆ ಸಬ್ಬಸಿಗೆ ಸೊಪ್ಪಿನ ಪಲ್ಯ ರೆಡಿಯಾಗುತ್ತೆ. ಈ ರೀತಿ ಅದ್ಭುತ ರುಚಿಯ ಕಾಳು ಪಲ್ಯ ಮಾಡಿದ್ರೆ ಊಟ ತಿಂಡಿಯ ರುಚಿ ಹೆಚ್ಚಾಗೋದು ಖಚಿತ.



Click it and Unblock the Notifications