Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾಶಿವರಾತ್ರಿ ಹಬ್ಬದ ಉಪವಾಸದಲ್ಲಿ ಸವಿಯೋಕೆ ಇಲ್ಲಿದೆ ಸಬ್ಬಕ್ಕಿ ಕಿಚಡಿ: ಥಟ್ ಅಂತ ಸಿದ್ದ ಮಾಡಬಹುದು!
ಮಹಾಶಿವರಾತ್ರಿ ಹತ್ತಿರವಾಗಿದೆ. ಈ ದಿನ ಶಿವನಿಗೆ ವಿಶೇಷ ಪೂಜೆ ಮಾಡುವುದು, ನೈವೇದ್ಯ, ಜಾಗರಣೆ, ಪೂಜೆಗಳ ಮಾಡುವುದು ನೋಡಬಹುದು. ಹಾಗೆ ಈ ದಿನ ಉಪವಾಸ ಮಾಡಿದ್ರೆ ಹಲವು ಕಷ್ಟಗಳು ನಿವಾರಣೆಯಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಬಹುತೇಕರು ಈ ದಿನದಂದು ಉಪವಾಸವಿದ್ದು ಪೂಜೆ ಮಾಡುತ್ತಾರೆ, ಈ ಮೂಲಕ ಶಿವನ ಆಶೀರ್ವಾದ ಪಡೆಯಲು ಹಲವು ರೀತಿ ಪೂಜೆ ಮಾಡುತ್ತಾರೆ.
ಇನ್ನು ಉಪವಾಸವಿದ್ದು, ಪೂಜೆ ಸಲ್ಲಿಸುವಾಗ ಹಾಗೆ ಉಪವಾಸ ಸಮಯದಲ್ಲಿ ಯಾವುದಾದರು ಖಾದ್ಯ ಸವಿಯಲು ನೀಡುವುದು ಸಾಮಾನ್ಯ. ಕೆಲವರು ಪೂರ್ಣ ಪ್ರಮಾಣದಲ್ಲಿ ಉಪವಾಸ ಮಾಡುತ್ತಾರೆ, ಆದ್ರೆ ಮತ್ತೆ ಕೆಲವರು ಕೆಲವು ಉಪಹಾರ ಸೇವಿಸುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಹಾಕದೆಯೇ ಮಾಡುವ ರೆಸಿಪಿಯನ್ನು ಸವಿಯುವುದು ನೋಡಬಹುದು.

ಹೀಗಾಗಿ ಈ ಶಿವರಾತ್ರಿಯಂದು ನಾವು ಸಾಬುದಾನಿ ಕಿಚಡಿ ಮಾಡಿ ಸವಿಯುವ ಕುರಿತು ತಿಳಿಯೋಣ. ಈ ಕಿಚಡಿಗೆ ನೀವು ಈರುಳ್ಳಿ, ಬೆಳ್ಳುಳ್ಳಿ ಯಾವುದನ್ನು ಬಳಸುವ ಅಗತ್ಯವಿಲ್ಲ. ಹಾಗೆ ಉಪವಾಸದ ಸಮಯದಲ್ಲಿ ಸವಿಯಲು ಇದು ಬಹಳ ರುಚಿಕರವಾಗಲಿದೆ. ಹಾಗಾದ್ರೆ ಈ ಸಾಬುದಾನಿ ಕಿಚಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಾಬುದಾನಿ ಕಿಚಡಿ ಮಾಡಲು ಬೇಕಾಗುವ ವಸ್ತುಗಳು
- ಸಬುದಾನಿ ಅಥವಾ ಸಬ್ಬಕ್ಕಿ - 1 ಕಪ್
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ- 1/4 ಟೀಸ್ಪೂನ್
- ನೆಲ ಗಡಲೆ - 2 ಟೀಸ್ಪೂನ್
- ಹಸಿ ಮೆಣಸಿನಕಾಯಿ - 3
- ಕರಿಬೇವು - 2 ಟೀಸ್ಪೂನ್
- ಆಲೂಗಡ್ಡೆ
- ನಿಂಬೆ - 1/2
- ಕೊತ್ತಂಬರಿ ಸೊಪ್ಪು
- ತುಪ್ಪ
- ರುಚಿಗೆ ಉಪ್ಪು
ಸಬ್ಬಕ್ಕಿ ಕಿಚಡಿ ಮಾಡುವುದು ಹೇಗೆ
ಮೊದಲು ಸಬ್ಬಕ್ಕಿಯನ್ನು ತೊಳೆದು ಅನಂತಗರ ಮುಳುಗುವಷ್ಟು ನೀರು ಹಾಕಿ ನೆನೆಸಿಡಬೇಕು. 2 ಗಂಟೆಯಾದರು ಇದನ್ನು ನೆನೆಸಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ ಅನಂತರ ಸಾಸಿವೆ, ಜೀರಿಗೆ, ಕಡಲೆ ಬೀಜ ಹಾಕಿ ಫ್ರೈ ಮಾಡಿ. 1 ನಿಮಿಷ ಬಿಟ್ಟು ಇದಕ್ಕೆ ಹಸಿ ಮೆಣಸು, ಕರಿಬೇವು ಸಹ ಹಾಕಿಕೊಳ್ಳಿ.
ಈಗ ಇದಕ್ಕೆ ನೆನೆಸಿಟ್ಟುಕೊಂಡಿದ್ದ ಸಬ್ಬಕ್ಕಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಒಂದು ಬೇಯಿಸಿದ ಆಲೂಗಡ್ಡೆಯ ಕೂಡ ಹಾಕಿಕೊಳ್ಳಿ. ನಂತರ ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ ಇರಬೇಕು. ಇದು ಬೇಯಲು 3ರಿಂದ 4 ನಿಮಿಷ ತೆಗೆದುಕೊಳ್ಳುತ್ತದೆ. ಈಗ ಹುರಿದುಕೊಂಡ ಕಡಲೆ ಬೀಜವನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
ನಂತರ ಈ ಕಡಲೆ ಪುಡಿಯನ್ನು ಈ ಸಬ್ಬಕ್ಕಿಗೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ. ಹಾಗೆ ಕೊನೆಯಲ್ಲಿ ನಿಂಬೆ ರಸವನ್ನು ಹಿಂಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಸಬ್ಬಕ್ಕಿ ಕಿಚಡಿ ಸಿದ್ದವಾಗುತ್ತೆ. ಉಪವಾಸದ ಸಮಯದಲ್ಲಿ ಥಟ್ ಎಂದು ಮಾಡಿ ಸವಿಯಲು ಇದು ಬಹಳ ಮುಖ್ಯ.
ಕೆಲವು ಅನಾರೋಗ್ಯ ಇರುವವರು ದಿನವಿಡಿ ಉಪವಾಸ ಮಾಡಲು ಆಗುವುದಿಲ್ಲ ಅಂತವರು ಈ ಸಬ್ಬಕ್ಕಿಯ ಕಿಚಡಿ ಮಾಡಿ ಸವಿಯಬಹುದು. ನೀವು ಕೂಡ ಈ ವಿಶೇಷ ಖಾದ್ಯವನ್ನು ಶಿವರಾತ್ರಿಯ ಸಮಯದಲ್ಲಿ ಮಾಡಿ ಸವಿದು ನೋಡಿ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ. ಈರುಳ್ಳಿ, ಬೆಳ್ಳುಳ್ಳಿ ಸೇರಿ ಹಲವು ಮಸಾಲೆಗಳಿಂದ ಮುಕ್ತವಾಗಿರಲಿದೆ.



Click it and Unblock the Notifications