Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ಅದ್ಭುತ ರುಚಿಯ ಹೀರೆಕಾಯಿ ಸಿಪ್ಪೆಯ ಚಟ್ನಿ ಮಾಡಿ ನೋಡಿ...! ಇಲ್ಲಿದೆ ರೆಸಿಪಿ
ತರಕಾರಿಗಳ ಚಟ್ನಿ ಅಂದರೆ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಊಟದ ಜೊತೆಗೆ ಹಾಗೆ ತಿಂಡಿಗೆ ಇವುಗಳು ಅದ್ಭುತ ರುಚಿ ನೀಡುವುದು ಸಹ ನೋಡಬಹುದು. ಹಸಿರು ತರಕಾರಿಗಳು ನಮ್ಮ ದೇಹಕ್ಕೆ ಎಷ್ಟೊಂದು ಉತ್ತಮ ಎಂಬುದನ್ನು ಕೂಡ ನೀವು ತಿಳಿದಿದ್ದೀರಿ. ಹೀರೆಕಾಯಿಯಲ್ಲಿ ವಿಟಮಿನ್ ' ಎ ' ಅಂಶವಿದ್ದು ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ.
ಹಾಗೆ ನಿಮ್ಮಲ್ಲಿ ರಕ್ತ ಕಡಿಮೆಯಾಗಿದ್ದರೆ, ಕೆಂಪು ರಕ್ತಕಣ ಕಡಿಮೆಯಾಗಿದ್ದರೆ ಹೀರೆಕಾಯಿ ಸವಿಯಬೇಕು. ಇದರಲ್ಲಿನ ಬಿ6 ವಿಟಮಿನ್ ನಿಮ್ಮ ದೇಹದಲ್ಲಿ ರಕ್ತ ಸಂಬಂಧಿ ನ್ಯೂನತೆಗಳ ದೂರವಿಡಲು ಸಹಕರಿಯಾಗಲಿದೆ. ಹೀರೆಕಾಯಿಯಲ್ಲಿ ನೀರಿನ ಅಂಶ ಹಾಗೆ ಕಬ್ಬಿಣಾಂಶ ಕೂಡ ಹೆಚ್ಚಾಗಿದೆ. ಇದು ದೇಹ ಡಿ ಹೈಡ್ರೇಷನ್‌ಗೆ ಒಳಗಾಗುವುದನ್ನು ತಡೆಯಲಿದೆ. ಹೀರೇಕಾಯಿಯ ಜ್ಯೂಸ್‌ನ್ನು ಜಾಂಡಿಸ್ ಗುಣಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಹೀರೆಕಾಯಿಯಿಂದ ಪಲ್ಯ, ಸಾಂಬಾರ್ ಹಾಗೆ ಚಟ್ನಿ ಮಾಡಬಹುದು. ಅದರಲ್ಲೂ ರುಚಿ ರುಚಿಯ ಖಾದ್ಯಗಳನ್ನು ಸಹ ಮಾಡುತ್ತಾರೆ. ಹೀರೆಕಾಯಿಯನ್ನು ಕತ್ತರಿಸಿ ಕಡಲೆ ಹಿಟ್ಟಿನಲ್ಲಿ ನೆನೆಸಿ ಎಣ್ಣೆಗೆ ಬಿಟ್ಟು ಕರಿದು ಸವಿಯಬಹುದು. ಇನ್ನು ಹೀರೆಕಾಯಿಯ ಸಿಪ್ಪೆಯಿಂದ ಮಾಡುವಂತಹ ಚಟ್ನಿ ನೀವು ಸವಿದರೆ ಆ ರುಚಿಗೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುವುದು ಖಚಿತ.
ಹಾಗಾದ್ರೆ ಈ ಹೀರೆಕಾಯಿ ಸಿಪ್ಪೆಯಿಂದ ಚಟ್ನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿ ಸಿಪ್ಪೆಯಿಂದ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹೀರೆಕಾಯಿ
- ಸಾಸಿವೆ
- ಹಸಿ ಮೆಣಸು
- ಒಣ ಮೆಣಸು
- ಇಂಗು
- ಕಡಲೆ ಬೇಳೆ
- ಉದ್ದಿನ ಬೇಳೆ
- ಅರಶಿಣ ಪುಡಿ
- ಉಪ್ಪು
- ಎಣ್ಣೆ
- ಕರಿಬೇವು
- ಕೊತ್ತಂಬರಿ ಸೊಪ್ಪು
ಹೀರೆಕಾಯಿ ಸಿಪ್ಪೆಯಿಂದ ಚಟ್ನಿ ಮಾಡುವುದು ಹೇಗೆ?
ಮೊದಲು ಹೀರೆಕಾಯಿಯ ತೊಳೆದು ಸಿಪ್ಪೆಯನ್ನು ಚೆನ್ನಾಗಿ ತೆಗೆದಿಟ್ಟುಕೊಳ್ಳಿ. ಹಾಗೆ ಒಂದು ಮುಷ್ಠಿಯಷ್ಟು ಹೀರೆಕಾಯಿಯನ್ನು ಸಹ ಹೆಚ್ಚಿಟ್ಟುಕೊಳ್ಳಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಹಸಿ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಅರಶಿಣ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಶುಂಠಿ, ಕರಿಬೇವು ಹಾಕಿಕೊಳ್ಳಿ. ಈಗ ಹೆಚ್ಚಿಕೊಂಡಿರುವ ಹೀರೆಕಾಯಿ ಹಾಗೂ ಅದರ ಸಿಪ್ಪೆಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮತ್ತೆ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಹುಣಸೆ ಹುಳಿ ಹಾಕಿ ಮುಚ್ಚಳ ಮುಚ್ಚಿ ಒಟ್ಟು 8 ನಿಮಿಷ ಬೇಯಲು ಬಿಡಿ. ತಳ ಹಿಡಿಯುತ್ತಿದ್ದರೆ ಸ್ವಲ್ಪ ನೀರು ಸಹ ಹಾಕಿಕೊಳ್ಳಬಹುದು.
8 ನಿಮಿಷದ ಬಳಿಕ ಮುಚ್ಚಳ ತೆಗದು ಕಾಯಿತುರಿ ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ. ಹಾಗೆ ಕೊನೆಯಲ್ಲಿ ಇಂಗು, ಕೊತ್ತಂಬರಿ ಸೊಪ್ಪು ಹಾಕಿ ಹಾಗೆ ಬಿಡಿ. ಈಗ ಒಂದು ಮಿಕ್ಸಿ ಜಾರ್‌ಗೆ ಈ ಎಲ್ಲಾ ವಸ್ತುಗಳನ್ನು ಹಾಕಿಕೊಂಡು 1 ಸ್ಪೂನ್ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿ ಒಂದು ಬೌಲ್‌ಗೆ ಹಾಕಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಒಣ ಮೆಣಸು, ಕರಿಬೇವು ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಒಗ್ಗರಣೆ ಮಾಡಿ ಇದಕ್ಕೆ ಹಾಕಿಕೊಂಡು ಸವಿಯಲು ನೀಡಿ. ಇಷ್ಟಾದರೆ ಹೀರೆಕಾಯಿ ಸಿಪ್ಪೆ ಚಟ್ನಿ ರೆಡಿಯಾಗುತ್ತೆ. ನೀವು ಸಹ ಮಾಡಿ ನೋಡಿ.



Click it and Unblock the Notifications