Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಕಿ ಹಿಟ್ಟಿನಿಂದ ಅದ್ಭುತ ಸ್ವೀಟ್ ಮಾಡಿ; ಕಡಿಮೆ ವಸ್ತು ಬಳಸಿ ಥಟ್ ಅಂತ ರೆಡಿ!
ನೀವು ಮನೆಯಲ್ಲಿ ಫ್ರೀ ಇರುವ ಸಮಯದಲ್ಲಿ ಯಾವುದಾದರು ಸಿಹಿ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಹಾಗೆ ಮಕ್ಕಳಿಗೆ ಸಿಹಿ ಅಂದರೆ ಬಹಳ ಇಷ್ಟವಾಗುತ್ತೆ. ಹೀಗಾಗಿ ಮನೆಯಲ್ಲಿ ನೀವು ಯಾವುದಾದರು ಸಿಹಿ ಮಾಡುವುದು ಕಾಮನ್. ಇನ್ನು ಹಬ್ಬದಲ್ಲಿ, ಶುಭ ದಿನದಲ್ಲಿ ಅತಿಥಿಗಳು ಆಗಮಿಸುವ ಸಮಯದಲ್ಲಿಯೂ ಕೂಡ ನೀವು ಸಿಹಿ ಮಾಡಿ ಸಿಹಿ ಮಾಡುತ್ತೀರಿ.
ಆದ್ರೆ ಹೊಸ ರೀತಿ ಸಿಹಿ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವಿಂದು ಸುಲಭವಾಗಿ ಮಾಡಬಹುದಾದ ಹೊಸ ರೀತಿಯ ಸಿಹಿ ಕುರಿತು ತಿಳಿಯೋಣ. ಇಲ್ಲಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮಾಡುವ ಸಿಹಿ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಸುಲಭವಾಗಿ ಮಾಡುವ ಸಿಹಿ ಇದಾಗಿದೆ. ನೀವು ಸಹ ಅಕ್ಕಿ ಹಿಟ್ಟಿನಿಂದ ಹಲವು ಖಾದ್ಯ ಮಾಡಿರುತ್ತೀರಿ. ಆದ್ರೆ ಸಿಹಿ ಮಾಡೋದು ಬಹಳ ಕಡಿಮೆ.

ಆದ್ರೆ ಇಲ್ಲಿ ಸುಲಭವಾಗಿ ಅಕ್ಕಿ ಹಿಟ್ಟು ಬಳಸಿ ಮಾಡುವ ಈ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಹಾಗಾದ್ರೆ ಈ ಹೊಸ ರೀತಿಯ ಸಿಹಿ ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಕ್ಕಿ ಹಿಟ್ಟಿನ ಸಿಹಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು
- ಹಾಲು
- ತುಪ್ಪ
- ಸಕ್ಕರೆ
- ಏಲಕ್ಕಿ ಪುಡಿ
- ಕೇಸರಿ ಪುಡಿ
- ಡ್ರೈಫ್ರೂಟ್ಸ್
ಅಕ್ಕಿ ಹಿಟ್ಟಿನ ಸಿಹಿ ಮಾಡುವ ವಿಧಾನವೇನು?
ಮೊದಲು ಒಂದು ಕಪ್ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಅಕ್ಕಿ ಹಿಟ್ಟು ಅಂಗಡಿಯಿಂದ ಖರೀದಿಸಿ ತರಬಹುದು. ಇಲ್ಲದಿದ್ದರೆ ಮನೆಯಲ್ಲಿಯೇ ಮಿಕ್ಸಿ ಸಹಾಯದಿಂದ ಮಾಡಿಕೊಳ್ಳಬಹುದು. ಹೀಗೆ ಹುರಿದ ಅಕ್ಕಿಯ ಹಿಟ್ಟನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ 2 ಕಪ್ ಹಾಲು ಹಾಕಿಕೊಳ್ಳಿ ಇದು ಒಂದಕ್ಕೆ 2 ಕಪ್ ಅಳತೆಯನ್ನು ಬಳಸುವುದು. ಈಗ ಇದಕ್ಕೆ 1 ಕಪ್ ಸಕ್ಕರೆ ಹಾಕಬೇಕು. ಹಾಗೆ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಸಕ್ಕರೆ ಕರಗುವವರೆಗೂ ತಿರುಗಿಸಿ. ಇದಕ್ಕೆ ಕೇಸರಿ ಪುಡಿ, ಏಲಕ್ಕಿ ಪುಡಿ ಹಾಕಿ ಮಿಕ್ಸ ಮಾಡುತ್ತಾ ಇರಿ.
ಸಕ್ಕರೆ ಕರಗಿದ ಬಳಿಕ ಗ್ಯಾಸ್ ಆಫ್ ಮಾಡಿಕೊಳ್ಳಿ. ಅನಂತರ ಸ್ವಲ್ಪ ಸ್ವಲ್ಪ ಅಕ್ಕಿ ಹಿಟ್ಟು ಹಾಕಿಕೊಳ್ಳುತ್ತಾ ತಿರುಗಿಸಿಕೊಳ್ಳಿ. ಇದು ಗಂಟುಗಳು ಇಲ್ಲದಂತೆ ನುಣ್ಣಗೆ ಇರುವ ಹಿಟ್ಟನ್ನು ಮಿಕ್ಸ್ ಮಾಡಿ. ಗಟ್ಟಿಯಾದರೆ ಹಾಲು ಬಳಸಬಹುದು. ಈಗ ಒಲೆ ಸಣ್ಣ ಉರಿಯಲ್ಲಿ ಇಟ್ಟು ಮಿಕ್ಸ್ ಮಾಡುತ್ತಾ ಇರಬೇಕು.
ಹೀಗೆ ಮಿಕ್ಸ್ ಮಾಡುವಾಗ ಇದಕ್ಕೆ 1 ಸ್ಪೂನ್ ತುಪ್ಪ ಹಾಕಿ. ಇದು ಕಡಬು, ರೊಟ್ಟಿ ಮಾಡುವ ಹಿಟ್ಟಿನ ಹದಕ್ಕೆ ಬರಬೇಕು. ನುಣ್ಣಗೆ ಆದ ಬಳಿಕ ತಣ್ಣಗಾಗಲು ಬಿಡಿ. ಉಗುರು ಬೆಚ್ಚಗೆ ಆದ ಬಳಿಕ ಈ ಹಿಟ್ಟನ್ನು ತೆಗೆದುಕೊಂಡು ಒಂದು ಉಂಡೆ ಕಟ್ಟಿಕೊಳ್ಳಿ. ನೆಲ್ಲಿಕಾಯಿ ಗಾತ್ರಕ್ಕೆ ಇದನ್ನು ಉಂಡೆ ಕಟ್ಟಿಕೊಳ್ಳಬೇಕು.
ಈಗ ಬಿಸಿ ಇರುವ ಈ ಉಂಡೆಯನ್ನು ಸಕ್ಕರೆ ಪುಡಿಯಲ್ಲಿ ಹಾಕಬೇಕು. ಸಕ್ಕರೆಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಅದರಲ್ಲಿ ಹಾಕಿ ಪುಡಿ ಹಿಡಿಯುವಂತೆ ಹೊರಳಿಸಬೇಕು. ಅನಂತರ ಈ ಉಂಡೆಯ ಮೇಲೆ ಬಾದಾಮಿ, ಪಾಸ್ತಾ ಇಲ್ಲವೆ ಒಣ ದ್ರಾಕ್ಷಿ ಯಾವುದಾದರು ಡ್ರೈ ಫ್ರೂಟ್ಸ್ ಇಡಬಹುದು. ಇಷ್ಟಾದರೆ ನಿಮ್ಮ ಮುಂದೆ ಅಕ್ಕಿ ಹಿಟ್ಟಿನ ಹೊಸ ಸಿಹಿ ಸಿದ್ದವಾಗುತ್ತೆ, ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications