Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡಿ..! ಇದರ ರುಚಿಗೆ ಫಿದಾ ಆಗೋದು ಪಕ್ಕಾ.!!
ನಾವು ಸಂಜೆ ಸ್ನ್ಯಾಕ್ಸ್‌ಗೆ ಅಥವಾ ಹಬ್ಬದ ಊಟದ ಜೊತೆಗೆ ಎಷ್ಟೆಲ್ಲಾ ತಿಂಡಿ ಮಾಡಿ ಸವಿಯಲು ಮುಂದಾಗುತ್ತೇವೆ. ಒಂದು ಕಡೆ ಸಿಹಿಯಾದರೆ ಮತ್ತೊಂದು ಕಡೆ ಖಾರ ತಿಂಡಿಗಳು ಬಾಯಲ್ಲಿ ನೀರು ತರಿಸುತ್ತವೆ. ಹಾಗೆ ಈಗ ಈ ಪಿತೃ ಪಕ್ಷ ಸಹ ಆರಂಭಗೊಂಡಿದ್ದು ಎಲ್ಲರು ಒಂದಲ್ಲಾ ಒಂದು ತಿಂಡಿ ಮಾಡಿ ಸವಿಯಲು ಮುಂದಾಗುತ್ತಾರೆ. ಆದ್ರೆ ಈ ತಿಂಡಿಗಳು ಒಂದಿಷ್ಟು ದಿನ ಇಟ್ಟು ಸವಿಯಲು ಬರುತ್ತಿದ್ದರೆ ಮತ್ತು ಆನಂದ.
ಹೀಗಾಗಿ ಹಲವರು ನಿಪ್ಪಟ್ಟು ಸವಿಯಲು ಮುಂದಾಗುವುದನ್ನು ನಾವು ನೋಡಬಹುದು. ನಿಪ್ಪಟ್ಟು ಖಾರ ಖಾರದವಾಗಿ ಊಟಕ್ಕೆ ಹಾಗೂ ಟೀ -ಕಾಫಿ ಜೊತೆಗೆ ಸವಿಸಲು ಹೇಳಿ ಮಾಡಿಸಿದ ತಿಂಡಿ. ಈಗ ಅಂಗಡಿ, ಬೇಕರಿಯಲ್ಲೂ ಈ ನಿಪ್ಪಟ್ಟು ಸಿಗುತ್ತೆ. ಹಾಗೆ ನೋಡಿದರೆ ಹಲವು ಪ್ರಕಾರದಲ್ಲಿ ಈ ನಿಪ್ಪಟ್ಟು ಮಾಡಬಹುದಾಗಿದೆ.

ನಾವಿಂದು ಅಕ್ಕಿ ಹಿಟ್ಟಿನಿಂದ ಮಾಡುವ ನಿಪ್ಪಟ್ಟಿನ ಬಗ್ಗೆ ತಿಳಿದುಕೊಳ್ಳೋಣ. ನಿಪ್ಪಟ್ಟು ಹೆಚ್ಚಾಗಿ ಸಂಜೆ ಸಮಯದಲ್ಲಿ ಇಲ್ಲವೆ ರಾತ್ರಿ ಊಟದ ಜೊತೆಗೆ ಅಥವಾ ಶುಭ ಕಾರ್ಯದಲ್ಲಿ ಯಾರಾದರು ಅತಿಥಿಗಳು ಬಂದಾಗ ಮಾಡುತ್ತೇವೆ. ಇದನ್ನು ಮಾಡುವುದು ತುಂಬಾನೆ ಸುಲಭ ಜೊತೆಗೆ ಕಡಿಮೆ ವಸ್ತುಗಳು ಸಾಕಾಗುತ್ತದೆ. ಹೀಗಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಹಾಗಾದ್ರೆ ನಾವಿಂದು ಈ ನಿಪ್ಪಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಖು? ಮಾಡುವ ವಿಧಾನವೇನು? ಮಾಡಲು ಯಾವ ರೀತಿ ಹಿಟ್ಟು ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ನಿಪ್ಪಟ್ಟು ಮಾಡಲು ಬೇಕಾಗುವ ವಸ್ತುಗಳು
- ಕಡಲೆ ಬೀಜ - ಕಾಲು ಕಪ್
- ಹುರಿಗಡಲೆ - ಕಾಲು ಕಪ್
- ಅಕ್ಕಿ ಹಿಟ್ಟು - 1 ಕಪ್
- ಕಡಲೆ ಹಿಟ್ಟು- ಸ್ವಲ್ಪ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
- ಎಣ್ಣೆ
- ತುಪ್ಪ
- ಖಾರದ ಪುಡಿ
ರುಚಿ ರುಚಿಯ ನಿಪ್ಪಟ್ಟು ಮಾಡುವುದು ಹೇಗೆ?
ಮೊದಲಿಗೆ ಕಡಲೆ ಬೀಜ ಹಾಗೂ ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಈ ತರಿ ತರಿಯ ಪುಡಿಯನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ. ಬಳಿಕ ಇದಕ್ಕೆ 1 ಕಪ್ ಅಕ್ಕಿ ಹಿಟ್ಟು ಹಾಕಿ, ಕಡಲೆ ಹಿಟ್ಟು, ಖಾರದ ಪುಡಿ, ಜೀರಿಗೆ, ಉಪ್ಪು, ಕರಿಬೇವು, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ.
ಇಲ್ಲಿ ಅಳತೆಗೆ ಒಂದೇ ಕಪ್ ಬಳಸಿ. ಹಾಗೆ ಕೊತ್ತಂಬರಿ, ಕರಿಬೇವಿನ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಂಡು ಬಳಸಿಕೊಳ್ಳಿ. ನೀವು ಬೇಕಾದರೆ ಹಸಿ ಮೆಣಸಿನಕಾಯಿಯನ್ನು ಸಹ ಸಣ್ಣದಾಗಿ ಹೆಚ್ಚಿಕೊಂಡು ಬಳಸಬಹುದು. ಈಗ ಮಿಕ್ಸ್ ಮಾಡಿದ ವಸ್ತುಗಳಿಗೆ 2 ಸ್ಪೂನ್ ತುಪ್ಪ ಹಾಕಿ ಮಿಕ್ಸ ಮಾಡಿ. ತುಪ್ಪ ಹಿಟ್ಟಿಗೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ.
ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಚಪಾತಿ ಹಟ್ಟು ಹದ ಮಾಡುವಂತೆ ಹದ ಮಾಡಿಕೊಳ್ಳಿ. ನಂತರ ಈ ಹಿಟ್ಟನ್ನು ಸಣ್ಣ ನಿಂಬೆ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ. ಈಗ ಒಂದು ಪ್ಲಾಸ್ಟಿಕ್ ಇಟ್ಟುಕೊಂಡು ಅದಕ್ಕೆ ಎಣ್ಣೆ ಸವರಿಕೊಳ್ಳಿ. ಈಗ ಒಂದೊಂದೆ ಉಂಡೆಯನ್ನು ತೆಗೆದುಕೊಂಡು ಕೈಯಲ್ಲಿ ಒತ್ತಿಕೊಳ್ಳಬೇಕು. ಅಥವಾ ಚಪಾತಿ ಲಟ್ಟಿಗೆಯಲ್ಲೂ ಲಟ್ಟಿಸಿಕೊಳ್ಳಬಹುದು.
ತೆಳುವಾಗಿ ಮಾಡಿದಷ್ಟು ಕ್ರಿಸ್ಪಿಯಾಗಿರುತ್ತದೆ. ಈಗ ಒಲೆ ಮೇಲೆ ಎಣ್ಣೆ ಇಟ್ಟು ಸಣ್ಣ ಉರಿ ಇಡಿ. ಎಣ್ಣೆ ಕಾದ ಬಳಿಕ ಒಂದೊಂದೇ ನಿಪ್ಪಟ್ಟನ್ನು ಹಾಕಿ ಕರಿದುಕೊಳ್ಳಿ. ನಿಪ್ಪಟ್ಟನ್ನು ಎರಡೂ ಕಡೆ ಚೆನ್ನಾಗಿ ಕರಿದುಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಿಪ್ಪಟ್ಟು ಚೆನ್ನಾಗಿ ಎಣ್ಣೆ ಇಳಿಯುವವರೆಗೂ ಜರಡಿಯಲ್ಲಿ ಇಡಿ. ಇಷ್ಟಾದರೆ ನಿಮ್ಮ ಮುಂದೆ ನಿಪ್ಪಟ್ಟು ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಇದರ ರುಚಿಗೆ ಮತ್ತೆ ಮತ್ತೆ ಮಾಡಲು ಮುಂದಾಗುತ್ತೀರಿ.



Click it and Unblock the Notifications