Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ನಿಮಿಷದಲ್ಲಿ ಅಕ್ಕಿ ಚಕ್ಲಿ ರೆಡಿ..! ಮೂರು ವಸ್ತು ಇದ್ದರೆ ಸಾಕು!
ಮನೆಯಲ್ಲಿ ಸಮಯ ಕಳೆಯಬೇಕು ಅಂದ್ರೆ ಯಾವುದಾದರು ತಿಂಡಿ ಇರಬೇಕು. ಸಂಜೆ ವೇಳೆ ಟೀ ಜೊತೆ ಸವಿಯಲು ಯಾವುದಾದ್ರು ಕುರುಕಲು ತಿಂಡಿ ಇದ್ದರೆ ಸಖತ್ ಆಗಿರುತ್ತೆ. ಅದ್ರಲ್ಲೂ ಮಳೆಗಾಲದಲ್ಲಿ ಯಾವುದಾದರು ತಿಂಡಿ ಮಾಡಿ ಸವಿಯುತ್ತೇವೆ.
ಟೀ ಜೊತೆಗೆ ಸವಿಯಲು ಯಾವುದಾದ್ರು ಸ್ನ್ಯಾಕ್ಸ್ ಬೇಕು ಅನಿಸಿದರೆ ಬೇಕರಿಗೆ ಅಥವಾ ಅಂಗಡಿಗೆ ತೆರಳಿ ಯಾವುದಾದರು ತಿಂಡಿ ಖರೀದಿಸುತ್ತೇವೆ. ಇನ್ನು ಬಿಸ್ಕೇಟ್, ಚಿಪ್ಸ್ ಹೀಗೆ ಹತ್ತು ಹಲವು ರೀತಿಯ ಸ್ನ್ಯಾಕ್ಸ್ ಸವಿಯುತ್ತೇವೆ. ಆದ್ರೆ ಮನೆಯಲ್ಲೇ ಮಾಡಿ ಸವಿದರೆ ಅದರ ರುಚಿಯೇ ಬೇರೆ.

ಈ ರೀತಿ ಸಂಜೆ ವೇಳೆ ಸವಿಯಲು ಚಕ್ಲಿ ಮನೆಯಲ್ಲೇ ಮಾಡಬಹುದು. ಯಾವುದೇ ಹಬ್ಬವಿರಲಿ, ಅತಿಥಿಗಳು ಬರಲಿ ಇಲ್ಲವೆ ಟೀ ಜೊತೆಗೆ ಚಕ್ಲಿ ಬಹಳ ರುಚಿ ನೀಡಲಿದೆ. ಅದ್ರಲ್ಲೂ ಅಕ್ಕಿ ಚಕ್ಲಿಯ ರುಚಿ ತಿಂದರೆ ಮತ್ತೆ ಮತ್ತೆ ಸವಿಯುತ್ತಿರಿ. ಹಾಗಾದ್ರೆ ಅಕ್ಕಿ ಚಕ್ಲಿ ಮಾಡೋದು ಹೇಗೆ?
ಮನೆಯಲ್ಲಿ ಅಕ್ಕಿ ಚಕ್ಲಿ ಮಾಡುವುದು ಹೇಗೆ? ಚಕ್ಲಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ನೋಡೋಣ.
ಅಕ್ಕಿ ಚಕ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು- 2 ಬೌಲ್
- ಖಾರದ ಪುಡಿ
- ಬಿಳಿ ಎಳ್ಳು
- ಉಪ್ಪು
- ಎಣ್ಣೆ
- ಹುರಿಗಡಲೆ
ಅಕ್ಕಿ ಚಕ್ಲಿ ಮಾಡುವುದು ಹೇಗೆ?
ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿಗಡಲೆ ಹಾಕಿಕೊಂಡು ಚೆನ್ನಾಗಿ ಪುಡಿಯಾಗುವಂತೆ ರುಬ್ಬಿಕೊಳ್ಳಿ. ಬಳಿಕ ಅಕ್ಕಿ ಹಿಟ್ಟನ್ನು ಹಿಟ್ಟನ್ನು ತೆಗೆದುಕೊಂಡು ಜರಡಿ ಹಿಡಿದುಕೊಳ್ಳಿ. ಇದಕ್ಕೆ ಉಪ್ಪು, ಖಾರದ ಪುಡಿ, ಬಿಳಿ ಎಳ್ಳು, ಬೆಣ್ಣೆ, ಹಾಗೂ ಮಿಕ್ಸಿಯಲ್ಲಿ ರುಬ್ಬಿಕೊಂಡ ಹುರಿಗಡಲೆ ಹಿಟ್ಟನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಅದನ್ನು ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದು ಚಪಾತಿ ಹಿಟ್ಟು ಕಲಸಿಕೊಳ್ಳುವಂತೆ ಮಾಡಿಕೊಳ್ಳಬೇಕು. ಚಪಾತಿ ಹಿಟ್ಟಿನಂತೆ ಆದ ಬಳಿಕ ಅದನ್ನು ಮುಚ್ಚಿ ಕೆಲ ಹೊತ್ತು ಬಿಡಿ. ಈಗ ಚಕ್ಲಿ ಮಾಡುವ ಅಚ್ಚಿಗೆ ಎಣ್ಣೆ ಹಚ್ಚಿಕೊಳ್ಳಿ. ಬಳಿಕ ಹಿಟ್ಟು ತೆಗೆದುಕೊಂಡು ಅಚ್ಚಿನ ಒಳಗೆ ಹಾಕಿಕೊಳ್ಳಿ.
ಚಕ್ಲಿ ಒತ್ತಿಕೊಳ್ಳಲು ಒಂದು ಪ್ಲಾಸ್ಟಿಕ್ ಇಟ್ಟು ಎಣ್ಣೆ ಸವರಿಕೊಳ್ಳಿ. ಇದರ ಮೇಲೆ ಚಕ್ಲಿ ಒತ್ತಿಕೊಳ್ಳ. ಈಗ ಒಲೆ ಮೇಲೆ ಎಣ್ಣೆ ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಬಳಿಕ ಚಕ್ಲಿಗಳನ್ನು ಹಾಕಿಕೊಂಡು ಕರಿದುಕೊಳ್ಳಿ. ಒಮ್ಮೆ ಮೂರರಿಂದ ನಾಲ್ಕು ಚಕ್ಲಿ ಹಾಕಿ ಕರಿದುಕೊಳ್ಳಿ. ಮಧ್ಯಮ ಉರಿಯಲ್ಲಿ ಚಕ್ಲಿ ಕರಿದರೆ ಚೆನ್ನಾಗಿರುತ್ತದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಚಕ್ಲಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.
ಇನ್ನು ಈ ಹಿಟ್ಟು ಮಾಡಿಕೊಳ್ಳುವಾಗ ಅದಕ್ಕೆ ಏಲಕ್ಕಿ ಪುಡಿ ಅಥವಾ ಲವಂಗ ಕುಟ್ಟಿ ಪುಡಿ ಮಾಡಿಕೊಂಡು ಹಾಕಿ ಮಿಕ್ಸ್ ಮಾಡಿಯೂ ಚಕ್ಲಿ ಮಾಡಬಹುದು.



Click it and Unblock the Notifications