Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೇಷನ್ ಅಕ್ಕಿಯಲ್ಲೇ ಮಾಡಿ ರುಚಿ ರುಚಿಯ ಬರ್ಫಿ..! ಹೇಗೆ ಗೊತ್ತಾ?
ಮನೆಯಲ್ಲಿ ಬೇಕರಿ ರುಚಿಯ ತಿಂಡಿ ಮಾಡಬೇಕು ಅನಿಸಿದರೆ ನೀವು ಯಾವ ತಿಂಡಿ ಮಾಡುತ್ತೀರಿ? ಅಬ್ಬಬ್ಬಾ ಅಂದ್ರೆ ಚಿಪ್ಸ್, ಮಸಾಲೆ ಕಡ್ಲೆ, ಚಂಪಾಕಲಿ, ಹನಿ ಕೇಕ್ ಹೀಗೆ ಈ ಸಾಲು ಬೆಳೆಯುತ್ತೆ. ಯಾಕಂದ್ರೆ ಅಷ್ಟೊಂದು ತಿಂಡಿಗಳ ಪಟ್ಟಿಯೇ ಇದೆ. ಈ ಸಿಹಿ ತಿಂಡಿಗಳ ಮಾಡೋಕೆ ಬಹಳ ಕಷ್ಟ ಎಂದು ಕೆಲವರು ಭಾವಿಸಿರುತ್ತಾರೆ.
ಇನ್ನು ಬೇಕರಿಯಲ್ಲಿ ಹತ್ತಾರು ಬಗೆಯ ಬರ್ಫಿಗಳ ನಾವು ನೋಡಿರುತ್ತೇವೆ. ಈ ಬರ್ಫಿಗಳೆಂದರೆ ಮಕ್ಕಳಿಗಂತು ಪಂಚಪ್ರಾಣ. ಸಿಹಿಯಾದ ಈ ಬರ್ಫಿಯನ್ನ ಇಷ್ಟಪಡದವರೇ ಇಲ್ಲ. ಹಾಗೆ ಬರ್ಫಿ ಮಾಡಬೇಕು ಅಂದ್ರೆ ಹೆಚ್ಚು ತುಪ್ಪ, ಎಣ್ಣೆ, ಬೆಣ್ಣೆ ಬೇಕು ಎಂದುಕೊಂಡಿರುತ್ತಾರೆ. ಆದ್ರೆ ಬರ್ಫಿ ಮಾಡೋಕೆ ಕೆಲವೇ ಕೆಲವು ವಸ್ತು ಇದ್ದರೆ ಸಾಕಾಗುತ್ತದೆ.

ನಿಮಗಿದು ಅಚ್ಚರಿ ಎನಿಸಬಹುದು, ಕೇವಲ ಒಂದೇ ಒಂದು ಕಪ್ ಮನೆ ಅಕ್ಕಿ ಇದ್ದರೆ ರುಚಿ ರುಚಿಯ ಬರ್ಫಿ ಮಾಡಬಹುದು. ನಿಮ್ಮ ಮನೆಯಲ್ಲಿ ರೇಷನ್ ಅಕ್ಕಿ ಇದ್ದರೂ ಕೂಡ ಅದರಿಂದ ಈ ಬರ್ಫಿಯ ಮಾಡಬಹುದು. ಹಾಗಾದ್ರೆ ಅಕ್ಕಿಯಿಂದ ಬರ್ಫಿ ಮಾಡೋದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಅಕ್ಕಿ ಬರ್ಫಿ ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಕ್ಕಿ ಬರ್ಫಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - 1 ಕಪ್
- ತೆಂಗಿನಕಾಯಿ
- ಬೆಲ್ಲ - 1 ಕಪ್
- ಉಪ್ಪು
- ಏಲಕ್ಕಿ
- ತುಪ್ಪ
ಅಕ್ಕಿ ಬರ್ಫಿ ಮಾಡುವುದು ಹೇಗೆ?
ಒಂದು ಕಪ್ ಅಕ್ಕಿಯನ್ನ ನೀರಲ್ಲಿ ಹಾಕಿ ಚೆನ್ನಾಗಿ ತೊಳೆದು ಬಳಿಕ ನೀರು ಹಾಕಿ 2 ಗಂಟೆ ನೆನೆಯಲು ಬಿಡಬೇಕು. ನಂತರ ನೆನೆಸಿಟ್ಟಿರುವ ಅಕ್ಕಿಯನ್ನ ಜಾರ್‌ಗೆ ಹಾಕಿ ನಂತರ ಯಾವ ಕಪ್‌ನಲ್ಲಿ ಅಕ್ಕಿ ತೆಗೆದುಕೊಂಡಿದ್ದೀರೋ ಅದೇ ಪ್ರಮಾಣದಲ್ಲಿ ತೆಂಗಿನ ಕಾಯಿ, ನೀರು ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
ಗಂಟಿಲ್ಲದಂತೆ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ದೊಡ್ಡ ಬೌಲ್‌ಗೆ ಹಾಕಿಟ್ಟು ಅದಕ್ಕೆ ಮತ್ತೊಂದು ಕಪ್ ನೀರು ಹಾಕಿ ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ನೀರು ಹಾಕಿ 1 ಕಪ್ ಬೆಲ್ಲ ಸಹ ಹಾಕಿಕೊಳ್ಳಿ. ಇದಕ್ಕೆ 2 ಕಪ್ ನೀರು ಹಾಕಿ ಕರಗಿಸಿ. ಪಾಕ ಮಾಡುವುದು ಬೇಡ ಬೆಲ್ಲ ಕರಗಿದರೆ ಸಾಕು. ಬೆಲ್ಲ ಕರಗಿದ ಬಳಿಕ ತಣ್ಣಗಾಗಲು ಬಿಡಿ. ನಂತರ ಬೆಲ್ಲವನ್ನು ಶೋಧಿಸಿಕೊಂಡು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ.
ಈಗ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಅಕ್ಕಿ ರುಬ್ಬಿದ್ದ ನೀರನ್ನು ಹಾಕಿಕೊಳ್ಳಿ. ಬಳಿಕ ಬೆಲ್ಲದ ನೀರನ್ನು ಸಹ ಜಾಕಿಕೊಂಡು ಮಿಕ್ಸ್ ಮಾಡಿ. ನಂತರ ಗ್ಯಾಸ್ ಆನ್ ಮಾಡಿ ಚೆನ್ನಾಗಿ ತಿರುಗಿಸುತ್ತಾ ಇರಿ. ಇದು 3 ನಿಮಿಷ ತಿರುಗಿಸಿಕೊಳ್ಳಿ. ಬಳಿಕ ಇದು ಗಂಟು ಗಂಟಾಗುವ ಅನುಭವವಾಗುತ್ತೆ. ಆದರೂ ಇದನ್ನು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ.
3ರಿಂದ 4 ನಿಮಿಷದಲ್ಲಿ ಗಟ್ಟಿಯಾಗಿ ಹಿಟ್ಟಿನಂತೆ ಆಗುತ್ತದೆ. ತಳ ಹಿಡಿಯಲು ಬಿಡದೆ ಚೆನ್ನಾಗಿ ತಿರುಗಿಸಿ. ಈಗ ತುಪ್ಪ ಹಾಗೂ ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮತ್ತೆ 10 ನಿಮಿಷ ಚೆನ್ನಾಗಿ ತಿರುಗಿಸಿಕೊಳ್ಳಿ. ನಂತರ 1 ಸ್ಪೂನ್ ತುಪ್ಪ ಹಾಕಿ ತಿರುಗಿಸಿಕೊಳ್ಳಿ. ನಂತರ ಒಂದು ಬಟ್ಟಲಿಗೆ ಹಾಕಿಕೊಂಡು ತಟ್ಟಿಕೊಳ್ಳಿ. ಇಡಿ ಬಟ್ಟಲಿಗೆ ಹರಡಿಕೊಂಡು ತಣ್ಣಗಾಗಲು ಇಡಿ.
ಸುಮಾರು 1 ಗಂಟೆ ಬಿಟ್ಟು ಅದನ್ನು ಕತ್ತರಿಸಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ, ಇಷ್ಟಾದರೆ ನಿಮ್ಮ ಮುಂದೆ ಅಕ್ಕಿ ಬರ್ಫಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications