Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೂರಿ, ಅನ್ನಕ್ಕೂ ಮಾಡಿ ಈ ಪನೀರ್ ಬಟಾಣಿ ಮಸಾಲ: ರೆಸ್ಟೋರೆಂಟ್ ರುಚಿ ಮನೆಯಲ್ಲಿ..!!
ನೀವು ಟಿಫನ್ ಸವಿಯಲು ಹೋಟೆಲ್ ಅಥವಾ ರೆಸ್ಟೋರೆಂಟ್ ತೆರಳಿದರೆ ಅದ್ಭುತ ರುಚಿಯಲ್ಲಿ ಪೂರಿ, ಚಪಾತಿ, ಗೀರೈಸ್ ಸವಿದಿರಬಹುದು, ಹಾಗೆ ಈ ಸಮಯದಲ್ಲಿ ನಿಮಗೆ ನೀಡುವ ಪನೀರ್ ಮಸಾಲ ಸವಿದಿರುತ್ತೀರಿ. ಹಾಗೆ ಕೆಲವೊಮ್ಮೆ ನೀವು ವಿಶೇಷವಾಗಿ ಮಾಡಲಾಗುವ ಬಟಾಣಿ ಪನೀರ್ ಮಸಾಲ ಕೂಡ ಆರ್ಡರ್ ಮಾಡುತ್ತೀರಿ, ಈ ಮಸಾಲೆ ಪೂರಿ, ರೈಸ್ ಜೊತೆಗೂ ಸವಿಯಬಹುದು. ಹೀಗಾಗಿ ರುಚಿ ರುಚಿಯ ಈ ಮಸಾಲೆ ನಿಮ್ಮ ಬಾಯಲ್ಲಿ ನೀರು ತರಿಸಲಿದೆ.
ಹೀಗಾಗಿ ನಾವಿಂದು ಮನೆಯಲ್ಲೇ ಈ ಪನೀರ್ ಬಟಾಣಿ ಮಸಾಲ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಸುಲಭದ ವಿಧಾನದಲ್ಲಿ ಕಡಿಮೆ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಪನೀರ್ ಬಟಾಣಿ ಮಸಾಲೆ ರುಚಿ ನೀವು ಒಮ್ಮೆ ಸವಿದು ನೋಡಿದರೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ.

ಹಾಗೆ ಪನೀರ್ ನಿಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಅನ್ನೋದನ್ನು ನೀವು ತಿಳಿದಿರಬಹುದು. ಹಾಗೆ ಯಾವುದೇ ಆಹಾರ ಪದಾರ್ಥದ ಜೊತೆಗೂ ಇದು ಬಹಳ ರುಚಿಯಾಗಿರಲಿದೆ. ಹೀಗಾಗಿ ಮನೆಯಲ್ಲೇ ನಾವಿಂದು ಈ ಪನೀರ್ ಬಟಾಣಿ ಮಸಾಲ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಪನೀರ್ ಬಟಾಣಿ ಮಸಾಲ ಮಾಡಲು ಯಾವಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎನ್ನುವುದು ಇಲ್ಲಿ ತಿಳಿದುಕೊಳ್ಳೋಣ.
ಪನೀರ್ ಬಟಾಣಿ ಮಸಾಲ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹಸಿ ಬಟಾಣಿ
- ಪನೀರ್ - 200 ಗ್ರಾಮ್
- ಈರುಳ್ಳಿ
- ಟೊಮೆಟೋ ಹಣ್ಣು
- ಬ್ಯಾಡಗಿ ಮೆಣಸಿನಕಾಯಿ
- ಬೆಳ್ಳುಳ್ಳಿ
- ಶುಂಠಿ
- ಸೋಂಪು ಕಾಳು
- ಕಸೂರಿ ಮೇತಿ
- ಖಾರದ ಪುಡಿ
- ಧನಿಯ ಪುಡಿ
- ಅರಿಶಿಣದ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ
ಪನೀರ್ ಬಟಾಣಿ ಮಸಾಲ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ, 2 ಟೊಮೆಟೋ, ಬ್ಯಾಡಗಿ ಮೆಣಸು, ಬೆಳ್ಳುಳ್ಳಿ, ಶುಂಠಿ, 2 ಸ್ಪೂನ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಈಗ ಫ್ರೈ ಆದ ಬಳಿಕ ಉರಿ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಒಂದು ಕಪ್ ಬಟಾಣಿಯನ್ನು ಕುಕ್ಕರ್‌ಗೆ ಸೇರಿಸಿ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಯಲು ಬಿಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಬಾಣಲೆಯಲ್ಲಿ ಹುರಿದುಕೊಂಡಿದ್ದ ಪದಾರ್ಥಗಳ ಹಾಕಿಕೊಂಡು ರುಬ್ಬಬೇಕು. ಇದಕ್ಕೆ ಸ್ವಲ್ಪ ನೀರು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಪೇಸ್ಟ್ ಅನ್ನು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಳಿಕ ಸೋಂಪು ಕಾಳು, ಕಸೂರಿ ಮೇತಿ, ಖಾರದ ಪುಡಿ, ಅರಶಿಣ, ಧನಿಯ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಬಾಣಲೆಗೆ ಮೊದಲು ರುಬ್ಬಿಕೊಂಡಿದ್ದ ಮಸಾಲೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಹಾಗೆ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ ಇದು ಗ್ರೇವಿಯಂತೆ ಕಾಣಿಸಬೇಕು. ಈಗ ಬೇಯಿಸಿಕೊಂಡಿರುವ ಬಟಾಣಿಯನ್ನು ಕುಕ್ಕರ್‌ನಿಂದ ತೆಗೆದು ಇದಕ್ಕೆ ಹಾಕಿ. ಈಗ ಪನೀರ್ ಅನ್ನು ಚೌಕವಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸಹ ಸೇರಿಸಿಕೊಂಡು ನೀರು ಹಾಕಿ ಕುದಿಬರಲು ಬಿಡಿ. ಒಟ್ಟು 5ರಿಂದ 6 ನಿಮಿಷ ಕುದಿಬರಲು ಬಿಡಬೇಕು.
ಇದು ಚೆನ್ನಾಗಿ ಕುದಿ ಬಂದ ಬಳಿಕ ಕೊನೆಯಲ್ಲಿ ಬೇಕಾದರೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಇಳಿಸಿಕೊಳ್ಳಿ. ಈ ಮಸಾಲೆ ಯಾವುದೇ ಖಾದ್ಯದ ಜೊತೆಗೂ ಸವಿಯಬಹುದು.



Click it and Unblock the Notifications