Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್ ರುಚಿಯ ಫ್ರೈಡ್ ರೈಸ್ 5 ನಿಮಿಷದಲ್ಲಿ ಮಾಡಿ!
ನೀವು ಬೆಳಗ್ಗೆ ತಿಂಡಿ ಸಮಯಕ್ಕೆ ರೈಸ್‌ನಿಂದ ಮಾಡುವಂತಹ ಬಗೆ ಬಗೆಯ ತಿಂಡಿಯನ್ನು ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಅದರಲ್ಲೂ ಅನ್ನವನ್ನು ಬಳಸಿ ಮಾಡುವಂತಹ ಹಲವು ಖಾದ್ಯಗಳನ್ನು ಸವಿಯುತ್ತಿದ್ದರೆ ಬೆಳಗ್ಗೆ ತಿಂಡಿ ಬಹಳ ರುಚಿ ನೀಡಲಿವೆ. ಪಲಾವ್, ಚಿತ್ರಾನ್ನ, ಪುಳಿಯೋಗರೆ, ರೈಸ್ ಬಾತ್ ಸೇರಿದಂತೆ ಹಲವು ರೀತಿಯ ರೈಸ್ ಖಾದ್ಯ ಮಾಡಿ ಸವಿಯೋದು ಕಾಮನ್.
ಅದರಲ್ಲು ರೈಸ್‌ನಿಂದ ಬಹಳ ರುಚಿ ರುಚಿಯ ಖಾದ್ಯಗಳ ಮಾಡಿ ಸವಿಯೋದು ಕೂಡ ಇದೆ. ಆದ್ರೆ ನಾವಿಂದು ಹೋಟೆಲ್, ರೆಸ್ಟೋರೆಂಟ್ ನಲ್ಲಿ ಸವಿಯಬಹುದಾದ ಫ್ರೈಡ್ ರೈಸ್ ಅನ್ನು ಮನೆಯಲ್ಲೇ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಈ ಫ್ರೈಡ್ ರೈಸ್ ಅನ್ನು ಐಟ್ ಅಂತ ಮಾಡಿ ಮುಗಿಸಬಹುದು.

ಹಾಗಾದ್ರೆ ರೈಸ್ ಬಳಸಿ ಮಾಡುವ ಫ್ರೈಡ್ ರೈಸ್ ಅನ್ನು ಸುಲಭವಾಗಿ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಅದ್ರಲ್ಲೂ ನೀವು ಹೋಟೆಲ್‌ಗೆ ತೆರಳಿದ್ದ ವೇಳೆ ಮಾಡಿ ಸವಿಯುವಂತಹ ರುಚಿ ರುಚಿಯ ಫ್ರೈಡ್ ರೈಸ್ ಅನ್ನು ಮನೆಯಲ್ಲೂ ಮಾಡಬಹುದು. ಹಾಗಾದ್ರೆ ನಾವಿಂದು ಮನೆಯಲ್ಲೇ ಈ ಫ್ರೈಡ್ ರೈಸ್ ಮಾಡುವ ಕುರಿತಾಗಿ ತಿಳಿಯೋಣ.
ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅನ್ನ
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಬೆಳ್ಳುಳ್ಳಿ
- ಕ್ಯಾರೆಟ್
- ಹಸಿರು ಬೀನ್ಸ್
- ಕ್ಯಾಪ್ಸಿಕಂ
- ಸೋಯಾ ಸಾಸ್
- ಕರಿಮೆಣಸಿನ ಪುಡಿ
- ಚಿಕನ್ ಮಸಾಲ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಫ್ರೈಡ್ ರೈಸ್ ಮಾಡುವ ವಿಧಾನವೇನು?
ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿಕೊಳ್ಳಿ. ನಂತರ ಇದಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಉಪ್ಪು ಇದೇ ವೇಳೆ ಹಾಕಿ 2 ನಿಮಿಷ ಫ್ರೈ ಮಾಡಿ. ಈ ಎಲ್ಲಾ ವಸ್ತುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಈಗ ಮೊದಲೇ ಮಾಡಿಟ್ಟಿದ್ದ ಅನ್ನವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಪೆಪ್ಪರ್ ಪುಡಿ, ಚಿಕನ್ ಮಸಾಲ ಪುಡಿ, ಸೋಯಾ ಸಾಸ್ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಖಾರ ಬೇಕಿದ್ದರೆ ಅರ್ಧ ಸ್ಪೂನ್ ಹಾಕಿಕೊಂಡು ಮಿಕ್ಸ್ ಮಾಡಿ 2 ನಿಮಿಷ ಫ್ರೈ ಮಾಡಿಕೊಳ್ಳಿ.
ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಎಲ್ಲಾ ಮಸಾಲೆಗಳು ಚೆನ್ನಾಗಿ ಅನ್ನಕ್ಕೆ ಹಿಡಿಯುವಂತೆ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹಾಗೆ ಹೋಟೆಲ್ ರುಚಿಯ ಫ್ರೈಡ್ ರೈಸ್ ರೆಡಿಯಾಗುತ್ತೆ. ಇದನ್ನು ಮಾಡುವುದು ಬಹಳ ಸುಲಭ, ಹಾಗೆ ಕೆಲವೇ ನಿಮಿಷದಲ್ಲಿ ಮಾಡಿ ಮುಗಿಸಬಹುದು.
ನೀವು ಸಹ ಬೆಳಗ್ಗೆ ತಿಂಡಿಗೆ ಯಾವುದಾದರು ರೈಸ್‌ನಿಂದ ಮಾಡುವಂತಹ ಖಾದ್ಯ ಸವಿಯಲು ಮುಂದಾಗುವುದಾದರೆ ಈ ಸುಲಭದ ಹಾಗೆ ಅಪರೂಪದ ಫ್ರೈಡ್ ರೈಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ. ಎಲ್ಲರಿಗೂ ಇದು ಇಷ್ಟವಾಗುತ್ತೆ. ಹೋಟೆಲ್‌ನಲ್ಲಿ ಸವಿದ ರುಚಿ ಸಿಗಲಿದೆ.



Click it and Unblock the Notifications