Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್ ರುಚಿಯ ಬೇಬಿ ಕಾರ್ನ್ ಮಂಚೂರಿಯನ್ ಮನೆಯಲ್ಲೇ ಮಾಡಿ! ಇಲ್ಲಿದೆ ಸುಲಭದ ರೆಸಿಪಿ!
ನೀವು ಮನೆಯಲ್ಲಿ ಇದ್ದಾಗ ಫ್ರೀ ಟೈಮ್‌ನಲ್ಲಿ ಯಾವುದಾದರು ತಿಂಡಿ ಮಾಡಿ ಅಥವಾ ಸ್ನ್ಯಾಕ್ಸ್ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಅದ್ರಲ್ಲೂ ವಿಶೇಷ ರುಚಿಯ ಹಲವು ಖಾದ್ಯಗಳ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಕಾರ್ನ್ ಬಳಸಿ ಮಾಡುವ ಬಹುತೇಕ ಎಲ್ಲಾ ಸ್ನ್ಯಾಕ್ಸ್‌ಗಳು ಕೂಡ ಬಹಳ ರುಚಿಯಾಗಿರಲಿವೆ.
ಅದ್ರಲ್ಲೂ ನೀವು ಬೇಬಿ ಕಾರ್ನ್ ಬಳಸಿ ಹಲವು ರೀತಿಯ ಖಾದ್ಯಗಳು, ಸ್ನ್ಯಾಕ್ಸ್ ಅನ್ನು ಮಾಡಿ ಸವಿದಿರುತ್ತೀರಿ. ನಾವಿಂದು ಸುಲಭವಾಗಿ ಬೇಬಿ ಕಾರ್ನ್ ಮಂಚೂರಿಯನ್ ಮಾಡಿ ಸವಿದು ನೋಡೋಣ. ಗೋಬಿ ಮಂಚೂರಿಯನ್ ಅನ್ನು ನೀವು ಕೂಡ ಸವಿದಿರುತ್ತೀರಿ. ಕ್ಯಾಬೇಜ್‌ನಿಂದ ಮಾಡುವ ಗೋಬಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಆದ್ರೆ ನಾವಿಂದು ಬೇಬಿ ಕಾರ್ನ್ ಮಂಚೂರಿಯನ್ ಅನ್ನು ಮನೆಯಲ್ಲೇ ಮಾಡಿ ಸವಿಯುವ ಕುರಿತು ತಿಳಿಯೋಣ. ನೀವು ಹೋಟೆಲ್ ರೆಸ್ಟೋರೆಂಟ್‌ಗೆ ಭೇಟಿ ನೀಡಿರುವ ಸಮಯದಲ್ಲಿ ಈ ಮಂಚೂರಿಯನ್ ಸವಿದಿರಬಹುದು. ಹಾಗೆ ಅದರ ರುಚಿ ನಿಮಗೂ ಇಷ್ಟವಾಗಿರಬಹುದು. ಆದ್ರೆ ಮನೆಯಲ್ಲೇ ಮಾಡಿ ಸವಿಯೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನಾವಿಲ್ಲಿ ಬೇಬಿ ಕಾರ್ನ್ ಮಂಚೂರಿಯನ್ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಸರಿಯಾದ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೇಬಿ ಕಾರ್ನ್ ಮಂಚೂರಿಯನ್ ಮಾಡಲು ಬೇಕಾಗುವ ವಸ್ತುಗಳು
- ಬೇಬಿ ಕಾರ್ನ್
- ಕಾರ್ನ್ ಫ್ಲೋರ್
- ಮೈದಾ ಹಿಟ್ಟು
- ಎಣ್ಣೆ
- ಸೋಯಾ ಸಾಸ್
- ಟೊಮೆಟೋ ಸಾಸ್
- ಶುಂಠಿ
- ಬೆಳ್ಳುಳ್ಳಿ
- ಹಸಿ ಮೆಣಸು
- ಅರಶಿಣ
- ಖಾರದ ಪುಡಿ
- ಉಪ್ಪು
- ಕಾಳು ಮೆಣಸಿನ ಪುಡಿ
- ಕ್ಯಾಪ್ಸಿಕಂ
ಬೇಬಿ ಕಾರ್ನ್ ಮಂಚೂರಿಯನ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ನೀರು ಹಾಕಿ ನೀರು ಕುದಿಬರುವಾಗ ಬೇಬಿ ಕಾರ್ನ್‌ಗಳ ಹಾಕಿಕೊಂಡು ಬೇಯಿಸಿಕೊಳ್ಳಬೇಕು. 5 ನಿಮಿಷ ಬೇಯಿಸಿ ನೀರಿನಿಂದ ತೆಗೆದಿಟ್ಟುಕೊಳ್ಳಿ. ಈಗ ಒಂದು ಬೌಲ್‌ಗೆ ಕಾರ್ನ್ ಫ್ಲೋರ್ ಹಾಕಿ ಅರಶಿಣ, ಉಪ್ಪು, ಮೈದಾ ಹಿಟ್ಟು, ಕಾಳು ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಗಟ್ಟಿಯಾಗಿ ಹದ ಮಾಡಿಕೊಳ್ಳಿ.
ಇದು ಫಿಷ್ ಫ್ರೈ ಮಾಡಲು ಬರುವ ಹಿಟ್ಟಿನ ಹದಕ್ಕೆ ಬರಬೇಕು. ಈಗ ಬೇಯಿಸಿಕೊಂಡಿದ್ದ ಬೇಬಿ ಕಾರ್ನ್‌ಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾದ ಬಳಿಕ ಅದಕ್ಕೆ ಹಾಕಿಕೊಂಡು ಕರಿದುಕೊಳ್ಳಬೇಕು. ಬೋಂಡಾದಂತೆ ಕರಿದುಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಫ್ರೈ ಮಾಡಿ. ಹಾಗೆ ಕ್ಯಾಪ್ಸಿಕಂ, ಸೋಯಾ ಸಾಸ್, ವೆನಿಗರ್, ಟೊಮೆಟೋ ಸಾಸ್, ಖಾರದ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಒಂದು ಬೌಲ್‌ಗೆ 2 ಸ್ಪೂನ್ ಕಾರ್ನ್ ಫ್ಲೋರ್ ಹಾಕಿ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಬಾಣಲೆಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದು ಗೊಜ್ಜಿನ ರೀತಿ ಬರಬೇಕು. ನಂತರ ಹಿಟ್ಟಿನಿಂದ ಕಾರ್ನ್ ತೆಗೆದು ಇದಕ್ಕೆ ಹಾಕಿಕೊಂಡು ಫ್ರೈ ಮಾಡಿ.
ಹಾಗೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಮಂಚೂರಿಯನ್ ರೆಡಿಯಾಗುತ್ತದೆ. ನಂತರ ಇದರ ಮೇಲೆ ಹಸಿ ಈರುಳ್ಳಿ, ಉದುರಿಸಿಕೊಂಡು ಸವಿಯಲು ನೀಡಿದರೆ ಅದರ ರುಚಿ ಬೊಂಬಾಟ್ ಆಗಿರಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications