Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್-ರೆಸ್ಟೋರೆಂಟ್ ಶೈಲಿಯ ಗ್ರೀನ್ ಎಗ್ ಫ್ರೈಡ್ ರೈಸ್ ಮಾಡಿ ನೋಡಿ..!!
ನೀವು ಬೆಳಗ್ಗೆ ತಿಂಡಿಗೆ ಅಥವಾ ಊಟದ ಜೊತೆಗೆ ಸವಿಯಲು ರೈಸ್‌ನಿಂದ ಮಾಡುವ ಹಲವು ರೀತಿಯ ಖಾದ್ಯಗಳ ಇಷ್ಟಪಡುತ್ತೀರಿ. ಅದರಲ್ಲೂ ಪಲಾವ್, ಪುಳಿಯೋಗರೆ, ಫ್ರೈಡ್ ರೈಸ್‌ನಂತಹ ಖಾದ್ಯ ಅಂದ್ರೆ ಎಲ್ಲರು ಇಷ್ಟಪಡುತ್ತಾರೆ. ನಾವು ಕೂಡ ಇಂದು ವಿಶೇಷವಾಗಿ ಗ್ರೀನ್ ಎಗ್ ಫ್ರೈಡ್ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಕೂಡ ಹಲವು ಬಗೆಯ ಫ್ರೈಡ್ ರೈಸ್ ಸವಿದಿರುತ್ತೀರಿ. ಬಹಳ ರುಚಿಯಾಗಿ ಈ ಫ್ರೈಡ್ ರೈಸ್ ಮಾಡಿ ಸವಿಯಬಹುದು ಕೂಡ.
ಹಾಗೆ ನಾವಿಂದು ಸುಲಭವಾಗಿ ಮಾಡುವಂತಹ ಅದ್ಭುತ ರುಚಿ ನೀಡುವ ಈ ಎಗ್ ಫ್ರೈಡ್ ರೈಸ್ ಕುರಿತು ತಿಳಿಯೋಣ. ಸಾಮಾನ್ಯವಾಗಿ ನೀವು ಎಗ್ ಫ್ರೈಡ್ ರೈಸ್ ಮನೆಯಲ್ಲೂ ಸಹ ಮಾಡಿ ಸವಿದಿರುತ್ತೀರಿ, ಆದ್ರೆ ಈ ರೀತಿ ವಿಶೇಷವಾಗಿ ಮಾಡಿ ಸವಿದಿರುವುದಿಲ್ಲ. ಇದು ಅತ್ಯಂತ ರುಚಿಕರ ಹಾಗೆ ಬಹಳ ಸುಲಭವಾಗಿ ಮಾಡಬಹುದಾದ ಹಸಿರು ಬಣ್ಣದ ಫ್ರೈಡ್ ರೈಸ್ ಆಗಿದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.

ಹಾಗಾದ್ರೆ ನಾವಿಂದು ಈ ಗ್ರೀನ್ ಎಗ್ ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗ್ರೀನ್ ಫ್ರೈಡ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಟ್ಟೆ-4
- ಅನ್ನ
- ಕೊತ್ತಂಬರಿ ಸೊಪ್ಪು
- ಪುದೀನ ಎಲೆ
- ಕರಿಬೇವು
- ಈರುಳ್ಳಿ
- ಹಸಿ ಮೆಣಸು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲ ಪುಡಿ
- ಕೊತ್ತಂಬರಿ ಪುಡಿ
- ಕರಿ ಮೆಣಸಿನ ಪುಡಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಗ್ರೀನ್ ಫ್ರೈಡ್ ರೈಸ್ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಅರ್ಧ ಕಟ್ ಹಾಕಿಕೊಳ್ಳಿ. ಹಾಗೆ ಕರಿವೇವಿನ ಎಲೆಗಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿ ಮೆಣಸು, ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಇದನ್ನು ತರಿತರಿಯಾಗಿ ಕಡಿಮೆ ನೀರು ಉಪಯೋಗಿಸಿಕೊಂಡು ರುಬ್ಬಿಕೊಳ್ಳಬೇಕು.
ಈಗ ಬಾಣಲೆಗೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ. ಈಗ ರುಬ್ಬಿಕೊಂಡಿರುವ ಮಸಾಲೆಗಳನ್ನು ಕೂಡ ಇದಕ್ಕೆ ಹಾಕಿಕೊಳ್ಳಿ. ಹಾಗೆ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಮಿಕ್ಸ್ ಮಾಡಿದ ಬಳಿಕ ಇದಕ್ಕೆ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ಹಾಗೆ ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷ ಹೀಗೆ ನಿಧಾನಕ್ಕೆ ಮಿಕ್ಸ್ ಮಾಡಿದ ಬಳಿಕ ಎಗ್ ಬುರ್ಜಿಯಂತಹ ಹದಕ್ಕೆ ಬಂದ ಬಳಿಕ ಇದಕ್ಕೆ ಮೊದಲೇ ಮಾಡಿಟ್ಟ ಅನ್ನವನ್ನು ಇದಕ್ಕೆ ಹಾಕಿ.
ಬಳಿಕ ಇದಕ್ಕೆ ಧನಿಯಾ ಪುಡಿ, ಗರಂ ಮಸಾಲೆ, ಕಾಳು ಮೆಣಸು ಪುಡಿ, ಉಪ್ಪು ಹಾಕಿಕೊಂಡು ಉರಿ ಹೆಚ್ಚಾಗಿ ಇಟ್ಟುಕೊಂಡು ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ ಘಮ ಬರುವಂತೆ ಫ್ರೈ ಮಾಡಿಕೊಂಡ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ನಂತರ ಈ ಗ್ರೀನ್ ಎಗ್ ಫ್ರೈಡ್ ರೈಸ್ ಸವಿಯಲು ನೀಡಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರೈಸ್ ಸಿದ್ದವಾಗುತ್ತೆ. ಕೆಲವು ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಈ ರೀತಿಯ ಫ್ರೈಡ್ ರೈಸ್ ಸವಿಯಲು ನೀಡುವುದು ನೋಡಬಹುದು. ಅದೇ ರುಚಿಯಲ್ಲಿ ನೀವು ಮನೆಯಲ್ಲೇ ಮಾಡಬಹುದು.



Click it and Unblock the Notifications