Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್ ರುಚಿಯ ವೆಜ್ ಫ್ರೈಡ್ ರೈಸ್..! ಸಿಂಪಲ್ ಸ್ಟೈಲ್ ಸಖತ್ ಟೇಸ್ಟ್..!
ನೀವು ಸಸ್ಯಹಾರಿ ಪ್ರಿಯರಾಗಿದ್ದು ದೊಡ್ಡ ಹೋಟೆಲ್‌ಗೆ ಭೇಟಿ ನೀಡಿದ್ರೆ ನೀವು ಆರ್ಡರ್ ಮಾಡೋ ಮೊದಲ ಖಾದ್ಯ ಫ್ರೈಡ್ ರೈಸ್ ಆಗಿರಬಹುದು. ಏಕಂದ್ರೆ ಫ್ರೈಡ್ ರೈಸ್ ಅತ್ಯಂತ ರುಚಿಕರ ಖಾದ್ಯ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ನಾನ್ ವೆಜ್ ಪ್ರಿಯರು ಕೂಡ ಇದೇ ಫ್ರೈಡ್ ರೈಸ್ ಸವಿಯಲು ಇಷ್ಟಪಡುತ್ತಾರೆ. ರೆಸ್ಟೋರೆಂಟ್ ರುಚಿಯ ಈ ವೆಜ್ ಫ್ರೈಡ್ ರೈಸ್ ಒಮ್ಮೆ ನೀವು ಮನೆಯಲ್ಲೇ ಮಾಡಿ ಸವಿದರೆ ಮತ್ತೆಂದು ಬೇರೆ ಖಾದ್ಯ ಮಾಡಿ ಸವಿಯಲ್ಲ ಅಥವಾ ಹೋಟೆಲ್‌ಗೆ ಹೋಗಿ ಫ್ರೈಡ್ ರೈಸ್ ಸವಿಯಲು ಇಷ್ಟಪಡುವುದಿಲ್ಲ.
ವೆಜ್ ಫ್ರೈಡ್ ರೈಸ್‌ಗೆ ಒಂದಿಷ್ಟು ತರಕಾರಿ ಹಾಕಿ, ಅತ್ಯಂತ ರುಚಿಯಲ್ಲಿ ಇದನ್ನು ಮಾಡಿ ಸವಿಯಲು ನೀಡಿದ್ರೆ ಬೊಂಬಾಟ್ ಆಗಿರುತ್ತೆ. ಆದ್ರೆ ಮನೆಯಲ್ಲಿ ಕೆಲವರು ಫ್ರೈಡ್ ರೈಸ್ ಮಾಡಲು ಮುಂದಾದಾದ ಅದರ ರುಚಿ ಹಾಳಾಗುವುದು ಕೂಡ ನಾವು ನೋಡಬಹುದು. ಹಾಗಾದ್ರೆ ಯಾವೆಲ್ಲಾ ವಸ್ತು ಹಾಕಿದ್ರೆ ಅದ್ಭುತ ರುಚಿಯ ಈ ಫ್ರೈಡ್ ರೈಸ್ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕೆಲವರು ಫ್ರೈಡ್ ರೈಸ್ ಅನ್ನು ಸವಿಯಲು ಇಷ್ಟಪಡುವುದಿಲ್ಲ. ಹೆಚ್ಚು ಎಣ್ಣೆ, ಮಸಾಲೆ ಹಾಕಿರುತ್ತಾರೆ ಎಂಬ ಕಾರಣಕ್ಕೆ ಇಷ್ಟ ಪಡುವುದಿಲ್ಲ, ಆದ್ರೆ ನಾವಿಂದು ಹೇಳುವ ರೀತಿಯಲ್ಲಿ ಮಾಡಿದ್ರೆ ಮನೆ ಮಂದಿಯಲ್ಲ ಇಷ್ಟಪಟ್ಟು ಸವಿಯುವುದು ಪಕ್ಕ. ಹಾಗಾದ್ರೆ ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಈ ಫ್ರೈಡ್ ರೈಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತದೆ. ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರೆಸ್ಟೋರೆಂಟ್ ರುಚಿಯ ವೆಜ್ ಫ್ರೈಡ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಎಣ್ಣೆ
- ಬೆಳ್ಳುಳ್ಳಿ
- ಈರುಳ್ಳಿ
- ಕ್ಯಾಪ್ಸಿಕಂ
- ಹೂಕೋಸು
- ಬಟಾಣಿ
- ಕ್ಯಾರೆಟ್
- ಬೀನ್ಸ್
- ಕಾಳು ಮೆಣಸಿನ ಪುಡಿ
- ವಿನೆಗರ್
- ಸೋಯಾ ಸಾಸ್
- ಉಪ್ಪು
ರೆಸ್ಟೋರೆಂಟ್ ರುಚಿಯ ವೆಜ್ ಫ್ರೈಡ್ ರೈಸ್ ಮಾಡುವುದು ಹೇಗೆ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಉದ್ದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷದ ಬಳಿಕ ಇದಕ್ಕೆ ಹಸಿ ಬಟಾಣಿ, ಉದ್ದಕ್ಕೆ ಕತ್ತರಿಸಿದ ಕ್ಯಾಪ್ಸಿಕಂ, ಹೂಕೋಸು, ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿಕೊಂಡ ಬೀನ್ಸ್ ಹಾಕಿ ಫ್ರೈ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ.
ಈಗ ಮೊದಲು ರೆಡಿ ಮಾಡಿರುವ ರೈಸ್ ತೆಗೆದುಕೊಳ್ಳಿ. ಫ್ರೈಡ್ ರೈಸ್‌ಗೆ ಸ್ವಲ್ಪ ಗಟ್ಟಿ ಇರುವ ಅನ್ನ ತೆಗೆದುಕೊಳ್ಳಬೇಕು. ಅಂದ್ರೆ ಮೊದಲೇ ಅನ್ನ ಮಾಡಿಟ್ಟಿರಬೇಕು. ಹೆಚ್ಚು ನೀರು ಹಾಕದೆ ಹುಡಿ ಹುಡಿಯಾಗಿ ರೈಸ್ ಮಾಡಿಕೊಳ್ಳಿ. ಈ ರೈಸ್ ಅನ್ನು ಬಾಸ್ಮತಿ ರೈಸ್ ಅಲ್ಲಿ ಮಾಡಿದರೆ ಚೆನ್ನಾಗಿರುತ್ತದೆ. ಈ ರೈಸ್ ಅನ್ನು ಬಾಣಲೆಗೆ ಹಾಕಿಕೊಂಡು ಅದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು, ಒಂದು ಸ್ಪೂನ್ ವಿನೆಗರ್, ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಮಿಕ್ಸ್ ಮಾಡಿಕೊಳ್ಳುವುದನ್ನು ನಿಲ್ಲಿಸದೆ ನಿರಂತರವಾಗಿ ಫ್ರೈ ಮಾಡಿಕೊಳ್ಳಬೇಕು. 3ರಿಂದ 4 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತೆ. ಇಷ್ಟಾದರೆ ನಿಮ್ಮ ಮುಂದೆ ವೆಜ್ ಫ್ರೈಡ್ ರೈಸ್ ರೆಡಿಯಾಗುತ್ತದೆ. ನೀವು ಕೂಡ ಹೀಗೆ ಸಿಂಪಲ್ ಆಗಿ ಈ ವೆಜ್ ಫ್ರೈಡ್ ರೈಸ್ ಮಾಡಿ ನೋಡಿ.



Click it and Unblock the Notifications