ಮನೆಯಲ್ಲೇ ಮಾಡಿ ನೋಡಿ ರೆಸ್ಟೋರೆಂಟ್ ರುಚಿಯ ಬರ್ಗರ್..! ಹೇಗೆ ಮಾಡೋದು.?

Posted By:

ಬರ್ಗರ್, ಪಿಜ್ಹಾ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಯುವ ಸಮುದಾಯವಂತು ಈ ಸ್ನ್ಯಾಕ್ಸ್‌ಗೆ ಫಿದಾ ಆಗಿರುತ್ತಾರೆ. ಈ ಬರ್ಗರ್ ಸವಿಯಲು ಅಂಗಡಿಗಳ ಹುಡುಕಿಕೊಂಡು ಹೋಗುತ್ತಾರೆ. ಜೊತೆಗೆ ದುಬಾರಿ ಬೆಲೆ ನೀಡಿ ಇದನ್ನು ಸವಿಯಬೇಕಾಗುತ್ತದೆ.

ಇತ್ತೀಚಿಗೆ ಈ ಬರ್ಗರ್ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಸಣ್ಣ ಪುಟ್ಟ ನಗರಗಳಲ್ಲೂ ಬರ್ಗರ್ ಶಾಪ್‌ಗಳು ನೋಡಲು ಸಿಗುತ್ತವೆ. ಆದ್ರೆ ಬರ್ಗರ್ ಅಂದ್ರೆ ನಮ್ಮ ತಲೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳ ದುಬಾರಿ ಬರ್ಗರ್ ನೆನಪಿಗೆ ಬರುತ್ತದೆ. ಮಾಲ್‌ಗಳಲ್ಲಂತೂ ಬರ್ಗರ್ ಬೆಲೆ ಗಗನಕ್ಕೇರುತ್ತದೆ.

ಆದ್ರೆ ಈ ಬರ್ಗರ್ ನಾವು ಸಹ ಮಾಡಿ ಸವಿಯಬಹುದು. ಹೌದು ಮನೆಯಲ್ಲೇ ಈ ಬರ್ಗರ್ ಮಾಡಿ ಸವಿಯಬಹುದು. ಇದರಿಂದ ಹಣದ ಉಳಿತಾದಯದ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ. ನೀವು ಸಹ ಗಮನಿಸಿರಬಹುದು, ಬರ್ಗರ್‌ನಲ್ಲಿ ವಿಶೇಷವಾದ ವಸ್ತುಗಳೇನು ಇರುವುದಿಲ್ಲ ವೆಜ್ ಬರ್ಗರ್ ಆದರೆ ತರಕಾರಿ ನಾನ್ ವೆಜ್ ಬರ್ಗರ್ ಆದರೆ ಚಿಕನ್ ಮಾತ್ರ ಹಾಕಿರುತ್ತಾರೆ ಉಳಿದಂತೆ ಸಣ್ಣ ಪುಟ್ಟ ವಸ್ತುಗಳ ಬಳಸಿಯೇ ಇದನ್ನು ಮಾಡಬಹುದು.

How To Make Restaurant Style Burger Recipe At Home In Kannada

ನಾವಿಂದು ಮನೆಯಲ್ಲೇ ಈ ಬರ್ಗರ್ ಮಾಡಿ ಸವಿಯುವುದು ಹೇಗೆ ಎಂಬುದನ್ನು ನೋಡೋಣ. ಬರ್ಗರ್ ಮಾಡುವುದು ಹೇಗೆ? ಬರ್ಗರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಬರ್ಗರ್ ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ನಾವಿಂದು ನೋಡೋಣ.

ಬರ್ಗರ್ ಮಾಡಲು ಏನೆಲ್ಲಾ ವಸ್ತುಗಳು ಬೇಕು?

  • ಆಲೂಗಡ್ಡೆ - 250 ಗ್ರಾಂ
  • ಬರ್ಗರ್ ಬನ್- 2
  • ಗರಂ ಮಸಾಲಾ ಪುಡಿ - 1 ಟೀಸ್ಪೂನ್
  • ಅರಿಶಿನ ಪುಡಿ - 1/2 ಟೀಸ್ಪೂನ್
  • ಖಾರದ ಪುಡಿ - 1 ಟೀಸ್ಪೂನ್
  • ಜೀರಿಗೆ ಪುಡಿ - 1 ಟೀಸ್ಪೂನ್
  • ಜೋಳೆದ ಹಿಟ್ಟು - 2 tbs
  • ಮೈದಾ ಹಿಟ್ಟು - 2 ಚಮಚ
  • ಈರುಳ್ಳಿ - 1 ಕಪ್
  • ಎಲೆಕೋಸು - 1/2 ಕಪ್
  • ಕ್ಯಾರೆಟ್ - 1
  • ಕರಿಮೆಣಸಿನ ಪುಡಿ - 1/2 ಟೀಸ್ಪೂನ್
  • ಟೊಮೇಟೊ - 1
  • ಹಸಿರು ಮೆಣಸಿನಕಾಯಿ - 2
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
  • ಬೀನ್ಸ್ - 4
  • ಹಸಿರು ಬಟಾಣಿ - 4 ಚಮಚ
  • ಚೀಸ್ ಸ್ಲೈಸ್ - 2
  • ಕೊತ್ತಂಬರಿ ಸೊಪ್ಪು - 1/4 ಕಪ್
  • ಬರ್ಗರ್ ಸಾಸ್ - 1/4 ಕಪ್
  • ಬ್ರೆಡ್ ಪುಡಿ (Bread crumbs)- 1/2 ಕಪ್
  • ರುಚಿಗೆ ಉಪ್ಪು
  • ಅಡುಗೆ ಎಣ್ಣೆ

ಬರ್ಗರ್ ಮಾಡುವುದು ಹೇಗೆ?

ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಇದಕ್ಕೆ ಈರುಳ್ಳಿ, ಹಸಿ ಮೆಣಸು ಹಾಕಿ, ಬಳಿಕ ಇದಕ್ಕೆ ಬೀನ್ಸ್ , ಕ್ಯಾರೇಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎಲೆಕೋಸು (ಸಣ್ಣಗೆ ತುರಿದುಕೊಂಡಿರುವುದು) ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.

ಇದರ ಜೊತೆಗೆ ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಅರಶಿಣ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿದ ಬಳಿಕ ಸ್ವಲ್ಪ ನೀರು ಹಾಕಿ ಫ್ರೈ ಮಾಡಿ. ನೀರು ಡ್ರೈ ಆಗುವವರೆಗೂ ಫ್ರೈ ಮಾಡಿಕೊಳ್ಳಿ. ಬಳಿಕ ಒಲೆ ಆಫ್ ಮಾಡಿ ಇದನ್ನು ಬದಿಗೆ ಇಟ್ಟುಕೊಳ್ಳಿ.

ಇನ್ನೊಂದು ಕಡೆ ಬೌಲ್ ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಜೋಳದ ಹಿಟ್ಟು, ಕರಿಮೆಣಸಿನ ಪುಡಿ, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಪೇಸ್ಟ್ ರೆಡಿ ಮಾಡಿಕೊಳ್ಳಿ.

How To Make Restaurant Style Burger Recipe At Home In Kannada

ಈಗ ಫ್ರೈ ಮಾಡಿಕೊಂಡ ತರಕಾರಿ ಒಂದು ಬೌಲ್‌ಗೆ ಹಾಕಿ ಬಳಿಕ ಈಗಾಗಲೇ ಬೇಯಿಸಿಕೊಂಡಿರುವ ಆಲೂಗಡ್ಡೆಯನ್ನು ಚೆನ್ನಾಗಿ ಕೈಯಲ್ಲಿ ಪುಡಿ ಮಾಡಿ ಈ ಬೌಲ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿ. ಈ ಹಿಟ್ಟು ಗಟ್ಟಿಯಾಗಬೇಕು. ಪಲ್ಯದಂತೆ ಉಂಡೆ ಕಟ್ಟಲು ಬರಬೇಕು. ಬಳಿಕ ಈ ಉಂಟೆಯನ್ನು ಸಣ್ಣದಾಗಿ ಒತ್ತಿಕೊಂಡು ಅದನ್ನು ಮೈದಾ ಜೋಳದ ಹಿಟ್ಟಿನ ಮಿಕ್ಸ್‌ನಲ್ಲಿ ಅದ್ದಬೇಕು. ಬಳಿಕ ಅದನ್ನು Bread crumbs ಗೆ ಹಾಕಿದರೆ ಬ್ರೆಡ್‌ನ ಚೂರುಗಳು ಅದಕ್ಕೆ ಅಂಟಿಕೊಳ್ಳುತ್ತೆ.

ಬಳಿಕ ಇದನ್ನು ಒಂದು ಎಣ್ಣೆಯ ಪಾತ್ರೆಯಲ್ಲಿ ಬಿಡಬೇಕು. ಎಣ್ಣೆ ಚೆನ್ನಾಗಿ ಕುದಿಬರಬೇಕು. ಅದನ್ನು ಚೆನ್ನಾಗಿ ಕರಿದುಕೊಂಡ ಬಳಿಕ ಬರ್ಗರ್ ಬ್ರೆಡ್‌ಗೆ ಬರ್ಗರ್ ಸಾಸ್ ಹಚ್ಚಿಕೊಂಡು ಅದರ ಮೇಲೆ ಕರಿದುಕೊಂಡಿರುವ ಆಲೂ ಟಿಕ್ಕಿ ಇಡಿ. ಜೊತೆಗೆ ಚೀಸ್, ಕತ್ತರಿಸಿದ ಟೊಮೆಟೋ ಸಹ ಇಟ್ಟರೆ ಬರ್ಗರ್ ರೆಡಿಯಾಗುತ್ತದೆ. ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.

[ of 5 - Users]
X
Desktop Bottom Promotion