Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್ ರುಚಿಯ ಆಲೂ ಚಿಲ್ಲಿ; ಊಟದೊಂದಿಗೆ ಬೆಸ್ಟ್ ಟೇಸ್ಟ್!
ಆಲೂಗಡ್ಡೆಯಿಂದ ವಿವಿಧ ಬಗೆಯ ಖಾದ್ಯಗಳ ಮಾಡಿ ಸವಿಯಬಹುದು ಎಂಬುದು ನಿಮಗೂ ತಿಳಿದಿದೆ. ಅದ್ರಲ್ಲೂ ಹಲವು ರೀತಿಯ ಆಲೂ ರೆಸಿಪಿ ಎಲ್ಲಾ ಕಾಲದಲ್ಲೂ ಹಾಗೆ ಎಲ್ಲಾ ಕಾಲದಲ್ಲಿಯೂ ವಿಶೇಷ ರುಚಿ ತರಿಸಲಿದೆ. ಹಾಗೆ ಚಳಿಗಾಲದಲ್ಲಿ ಆಲೂಗಡ್ಡೆಯ ವಿವಿಧ ಬಗೆಗಳನ್ನು ಮಾಡಿ ಸವಿಯೋದು ಕಾಮನ್. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇಷ್ಟವಾಗುವಂತಹ ರುಚಿ ರುಚಿ ರೆಸಿಪಿ ಕುರಿತು ತಿಳಿದುಕೊಳ್ಳೋಣ.
ಆಲೂಗಡ್ಡೆಯಿಂದ ಮಾಡುವಂತಹ ಹಲವು ಖಾದ್ಯಗಳ ಪೈಕಿ ಇಲ್ಲಿ ಆಲೂ ಚಿಲ್ಲಿ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ನೀವು ಕೂಡ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿರುವ ಸಮಯದಲ್ಲಿ ಸ್ಟಾರ್ಟರ್ ಆಗಿ ನೀಡುವಂತಹ ಖಾದ್ಯಗಳಲ್ಲಿ ಇದೂ ಸಹ ಒಂದು. ಬಹಳ ಸುಲಭವಾಗಿ ಮಾಡಬಹುದಾದ ಈ ಆಲೂ ಚಿಲ್ಲಿಯನ್ನು ಮನೆಯಲ್ಲೂ ಮಾಡಿ ಸವಿಯಬಹುದು.

ಊಟದೊಂದಿಗೆ ಯಾವುದಾದರು ಸೈಡ್ಸ್ ಮಾಡಿ ಸವಿಯುವ ನಿಮ್ಮ ಬಯಕೆ ಇದ್ದರೆ ಈ ಆಲೂ ಚಿಲ್ಲಿ ರೆಸಿಪಿ ಮಾಡಿ ಸವಿಯಬಹುದು. ಹಾಗಾದ್ರೆ ಈ ಆಲೂ ಚಿಲ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ಆಲೂ ಚಿಲ್ಲಿ ಮಾಡಲು ಬೇಕಾಗುವ ಅಗತ್ಯ ವಸ್ತುಗಳು
- ಆಲೂಗಡ್ಡೆ
- ಜೋಳದ ಹಿಟ್ಟು
- ಬೆಣ್ಣೆ
- ಅಡುಗೆ ಎಣ್ಣೆ
- ಬೆಳ್ಳುಳ್ಳಿ
- ಶುಂಠಿ
- ಹಸಿ ಮೆಣಸು
- ಈರುಳ್ಳಿ
- ಖಾರದ ಪುಡಿ
- ಕಾಳು ಮೆಣಸಿನ ಪುಡಿ
- ಬಿಳಿ ಎಳ್ಳು
- ಸೋಯಾ ಸಾಸ್
- ಟೊಮೆಟೋ ಕೆಚಪ್
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
ಆಲೂ ಚಿಲ್ಲಿ ಮಾಡುವ ವಿಧಾನವೇನು?
ಮೊದಲು ಆಲೂಗಡ್ಡೆಯನ್ನು ತೊಳೆದು ಬೇಯಿಸಿರಬೇಕು. ಕುಕ್ಕರ್‌ನಲ್ಲಿ 4 ಸೀಟಿ ಹೊಡೆಸಿಕೊಳ್ಳಿ. ಈಗ ಬೆಂದಿರುವ ಆಲೂವನ್ನು ತುರಿದುಕೊಳ್ಳಬೇಕು. ಸಿಪ್ಪೆ ತೆಗೆದುಕೊಂಡು ಅದನ್ನು ತುರಿದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಆಲೂಗೆ ಉಪ್ಪು, ಕಾರ್ನ್ ಫ್ಲೋರ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ಜಾಮೂನ್‌ಗೆ ಹಿಟ್ಟು ಕಲಸಿದಂತೆ ಕಲಸಿಕೊಳ್ಳಿ. ನೀರು ಬಳಸದೆಯೇ ಕಲಸಿಕೊಳ್ಳಿ.
ಅನಂತರ ಚಿಕ್ಕ ಚಿಕ್ಕ ಉಂಡೆಯನ್ನು ಕಟ್ಟಿಕೊಳ್ಳಬೇಕು. ಚಿಕ್ಕ ಗೋಲಿ ಗಾತ್ರದ ಉಂಡೆ ಮಾಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿ ಬರುವಾಗ ಅದಕ್ಕೆ ಈ ಉಂಡೆಗಳನ್ನು ಹಾಕಿಕೊಳ್ಳಿ.
ಇದನ್ನು 3ರಿಂದ 4 ನಿಮಿಷ ಬೇಯಿಸಿಕೊಳ್ಳಬೇಕು. ಉಂಡೆಗಳು ಸ್ವಲ್ಪ ದಪ್ಪವಾಗಿ ಮೇಲೆ ಬರಲು ಆರಂಭವಾದಾಗ ಒಲೆ ಆಫ್ ಮಾಡಿಕೊಳ್ಳಬೇಕು. ಇದು ಬೆಂದ ಬಳಿಕ ಬಿಸಿ ನೀರಿನಿಂದ ತೆಗೆದು ತಣ್ಣೀರಿಗೆ ಹಾಕಿ ಬಳಿಕ ಎತ್ತಿ ಮತ್ತೊಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಗೂ ಎಣ್ಣೆ ಹಾಕಿ ಬಳಿಕ ಶುಂಠಿ, ಬೆಳ್ಳುಳ್ಳಿ ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಹೆಚ್ಚಿರುವ ಹಸಿ ಮೆಣಸು ಸಹ ಹಾಕಿ.
ಈಗ ಈರುಳ್ಳಿ, ಖಾರದ ಪುಡಿ, ಕಾಳು ಮೆಣಸಿನ ಪುಡಿ, ಹುರಿದ ಎಳ್ಳು (ಇದ್ದರೆ ಹಾಕಿ) ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಸೋಯಾ ಸಾಸ್, ಟೊಮೆಟೋ ಕೆಚಪ್ ಸಹ ಹಾಕಿ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ.
ಈಗ ಈ ಮಸಾಲೆಗಳಿಗೆ ಬೇಯಿಸಿಕೊಂಡ ಆಲೂ ಉಂಡೆಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಫ್ರೈ ಮಾಡಿಕೊಂಡು ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಆಲೂ ಚಿಲ್ಲಿ ಸಿದ್ದವಾಗುತ್ತೆ.



Click it and Unblock the Notifications