Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್ ರುಚಿಯ ಚಿಕನ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ! ಬಹಳ ರುಚಿ ರೆಸಿಪಿ
ಮಾಂಸಹಾರ ಪ್ರಿಯರಿಗೆ ಚಿಕನ್ ಹಾಗೆ ಮಟನ್ನಲ್ಲಿ ವಿವಿಧ ಬಗೆಯ ರುಚಿ ರುಚಿಯಾದ ಖಾದ್ಯಗಳು ಯಾವಾಗಲು ಸಿದ್ದವಾಗಿರುತ್ತೆ. ಹಾಗೆ ಹಲವು ರೀತಿಯ ಚಿಕನ್ ಖಾದ್ಯಗಳಲ್ಲಿ ನಿಮಗೆ ರುಚಿ ರುಚಿಯಾದ ಖಾರ ಮಸಾಲೆಗಳಿಂದ ತುಂಬಿದ ತಿನಿಸುಗಳ ಬಹುತೇಕ ಇಷ್ಟವಾಗುತ್ತೆ. ಅದ್ರಲ್ಲೂ ಚಿಕನ್ನಿಂದ ಮಾಡುವ ಹಲವು ಖಾದ್ಯಗಳ ಹೆಸರು ಕೇಳಿದ್ರೂ ಸಹ ಬಾಯಲ್ಲಿ ನೀರು ಬರಬಹುದು. ಬಹಳಷ್ಟು ಮಂದಿ ಚಿಕನ್ ಬಳಸಿ ಹಲವು ರೀತಿ ತಿನಿಸುಗಳ ಸವಿಯೋಕೆ ಇಷ್ಟಪಡುವುದು ನೋಡಬಹುದು.
ಹೀಗಾಗಿ ನಾವಿಂದು ಊಟ ತಿಂಡಿಯೊಂದಿಗೆ ಸವಿಯಲು ಅದ್ರಲ್ಲೂ ರುಚಿ ರುಚಿಯಾದ ಚಿಕನ್ ಪೆಪ್ಪರ್ ಫ್ರೈ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಚಿಕನ್ ಪೆಪ್ಪರ್ ಫ್ರೈ ಊಟ ಹಾಗೆ ತಿಂಡಿಯೊಂದಿಗೆ ಬಹಳ ರುಚಿ ನೀಡಲಿದೆ. ಹಾಗೆ ಎಲ್ಲರಿಗೂ ಇದು ಇಷ್ಟವಾಗುವಂತಹ ತಿನಿಸು. ಹೋಟೆಲ್, ರೆಸ್ಟೋರೆಂಟ್ನಲ್ಲೂ ಸಹ ನಾವು ಈ ಚಿಕನ್ ಪೆಪ್ಪರ್ ಫ್ರೈ ಸವಿಯುವುದು ನೋಡಬಹುದು.

ಹಾಗಾದ್ರೆ ಈ ಚಿಕನ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಈ ಚಿಕನ್ ಬಳಸಿ ಮಾಡುವ ತಿನಿಸು ಎಲ್ಲರಿಗೂ ಇಷ್ವವಾಗುವ ಜೊತೆಗೆ ಪದೇ ಪದೇ ಸವಿಯೋಕೆ ಮುಂದಾಗೋದು ಖಚಿತ. ಹಾಗಾದ್ರೆ ರೆಸ್ಟೋರೆಂಟ್ ರುಚಿಯ ಈ ಚಿಕನ್ ಪೆಪ್ಪರ್ ಫ್ರೈ ಮನೆಯಲ್ಲಿ ಮಾಡುವ ಕುರಿತು ತಿಳಿಯೋಣ.
ಚಿಕನ್ ಪೆಪ್ಪರ್ ಫ್ರೈ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಚಿಕನ್ ಪೆಪ್ಪರ್ ಫ್ರೈ ಮಾಡಲು ಅಗತ್ಯ ವಸ್ತುಗಳು
- ಚಿಕನ್
- ಧನಿಯಾ ಪುಡಿ
- ಖಾರದ ಪುಡಿ
- ಅರಶಿಣ
- ಉಪ್ಪು
- ಕರಿಬೇವು
- ಒಣ ಮೆಣಸು
- ಹಸಿ ಮೆಣಸು
- ಕಾಳು ಮೆಣಸು
- ಕೊತ್ತಂಬರಿ ಸೊಪ್ಪು
- ನಿಂಬೆ ರಸ
- ಬೆಳ್ಳುಳ್ಳಿ
- ಈರುಳ್ಳಿ
ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನವೇನು?
ಮೊದಲು ತೊಳೆದುಕೊಂಡ ಚಿಕನ್ ಅನ್ನು ಬೌಲ್ಗೆ ಹಾಕಿ ಇದಕ್ಕೆ ಖಾರದ ಪುಡಿ, ಅರಶಿಣ, ಧನಿಯಾ ಪುಡಿ, ಉಪ್ಪು, ನಿಂಬೆ ರಸ, ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಒಂದು ಮುಚ್ಚಳ ಮುಚ್ಚಿ ಬದಿಯಲ್ಲಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಧನಿಯಾ ಕಾಳು, ಕಾಳು ಮೆಣಸು, ಜೀರಿಗೆ, ಸೋಂಪುಕಾಳು, ಕರಿಬೇವು ಹಾಕಿ ಹುರಿದುಕೊಳ್ಳಿ.
ನಂತರ ಈ ಮಸಾಲೆಗಳ ತಣ್ಣಗಾಗಲು ಬಿಟ್ಟು ಅನಂತರ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿ ಪುಡಿ ಮಾಡಿಕೊಳ್ಳಿ. ಈಗ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಟ್ಟು ಬಳಿಕ ಈರುಳ್ಳಿ, ಕರಿಬೇವು, ಬೆಳ್ಳುಳ್ಳಿ, ಒಣ ಮೆಣಸು, ಹಾಕಿ ಮತ್ತೆ ಪ್ರೈ ಮಾಡಿಕೊಳ್ಳಿ.
1 ನಿಮಿಷ ಬಿಟ್ಟು ಈಗ ಮಸಾಲೆ ಹಾಕಿದ್ದ ಚಿಕನ್ ಅನ್ನು ಇದಕ್ಕೆ ಹಾಕಿ ಫ್ರೈ ಆಗಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಮುಚ್ಚಳ ಮುಚ್ಚಿ ಇಡಿ. ಸುಮಾರು 4ರಿಂದ 5 ನಿಮಿಷ ಬೇಯಿಸಿಕೊಳ್ಳಿ. ಚಿಕನ್ ನೀರು ಬಿಡಬೇಕು, ಈಗ ಈ ಮೊದಲು ಪುಡಿ ಮಾಡಿಕೊಂಡಿದ್ದ ಮಸಾಲೆಯನ್ನು ಹಾಕಿ, 2ರಿಂದ 3 ಸ್ಪೂನ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ದಪ್ಪ ಗ್ರೇವಿ ಬೇಕಿದ್ದರೆ ಅರ್ಧ ಸ್ಪೂನ್ ಕಾರ್ನ್ ಫ್ಲೋರ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಇದಕ್ಕೆ ಹಾಕಿ.
ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ನಿಂಬೆ ರಸ ಹಿಂಡಿಕೊಂಡು ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಚಿಕನ್ ಪೆಪ್ಪರ್ ಫ್ರೈ ಸಿದ್ದವಾಗುತ್ತೆ.



Click it and Unblock the Notifications