Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಹಾ..! ಈ ರುಚಿಯ ಮಾವಿನಕಾಯಿ ರಸಂ ಮಾಡಿದ್ದೀರಾ? ಇಲ್ಲಿದೆ ರೆಸಿಪಿ
ಮಾವಿನ ಹಣ್ಣುಗಳ ಸೀಸನ್ ಆರಂಭವಾಗುತ್ತಿದೆ. ಹಾಗೆ ಕಾಯಿ ಮಾವಿನ ಹಣ್ಣುಗಳು ಈಗ ಎಲ್ಲಾ ಕಡೆ ಸಿಗುತ್ತಿವೆ. ನಿಮ್ಮಲ್ಲಿ ಮಾವಿನ ಮರದಿದ್ದರೆ ಕಾಯಿಗಳು ಬಲಿತ್ತಿರುವುದು ನೋಡಬಹುದು. ಹಾಗೆ ಮಾರುಕಟ್ಟೆ, ತರಕಾರಿ ಅಂಗಡಿಯಲ್ಲು ಕಾಯಿ ಮಾವಿನ ಕಾಯಿ ಸಿಗುತ್ತಿವೆ. ಮಾವಿನ ಕಾಯಿ ಬಳಸಿ ಎಷ್ಟು ವಿಧವಾದ ಖಾದ್ಯಗಳ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಅದರಲ್ಲೂ ಮಾವಿನ ಚಟ್ನಿ, ಚಿತ್ರಾನ್ನ, ರಸಂ ಸವಿಯುತ್ತಿದ್ದರೆ ಅದರ ರುಚಿಗೆ ಬಾಯಲ್ಲಿ ನೀರು ಬರುತ್ತೆ.
ಹಾಗೆ ಹುಳಿ ಹುಳಿ ಈ ಮಾವಿನ ಕಾಯಿಯ ಬಳಸಿ ಎಷ್ಟೆಲ್ಲಾ ಖಾದ್ಯಗಳ ಮಾಡಿ ಸವಿಯಬಹುದು ಎಂಬುದನ್ನು ನೀವು ಸಹ ತಿಳಿದಿರಬಹುದು. ಅದರಲ್ಲೂ ನಾವಿಂದು ಮಾವಿನ ಕಾಯಿಯ ರಸಂ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಮಾವಿನ ರಸಂ ಊಟದ ಜೊತೆಗೆ ಅದ್ಭುತ ರುಚಿ ನೀಡುವುದಿಲ್ಲದೆ ಹಾಗೆ ಗ್ಲಾಸ್‌ಗೂ ಹಾಕಿಕೊಂಡು ಕುಡಿಯಬಹುದು.

ಇಷ್ಟೊಂದು ರುಚಿ ನೀಡುವಂತಹ ಈ ಮಾವಿನಕಾಯಿ ರಸಂ ನೀವು ಈ ಸಮಯದಲ್ಲಿ ಮಾತ್ರವೇ ಮಾಡಬಹುದು. ಮಾವಿನ ಹಣ್ಣು ಬಿಡುವ ಸಮಯದಲ್ಲಿ ಮಾಡಲಾಗುವುದಿಲ್ಲ. ಹಾಗಾದ್ರೆ ಈ ಮಾವಿನಕಾಯಿ ರಸಂ ಮಾಡುವುದು ಹೇಗೆ? ಮಾವಿನ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಮಾವಿನಕಾಯಿ
ಉಪ್ಪು
ಬೆಲ್ಲ
ಎಣ್ಣೆ
ಕೊತ್ತಂಬರಿ ಸೊಪ್ಪು
ಕರಿಬೇವು
ಸಾಸಿವೆ
ಜೀರಿಗೆ
ಒಣ ಮೆಣಸು
ಇಂಗು
ಮಾವಿನಕಾಯಿ ರಸಂ ಮಾಡುವ ವಿಧಾನವೇನು?
ಮೊದಲು ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಕತ್ತರಿಸಿಕೊಳ್ಳಬೇಕು. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಬಿಸಿಯಾಗಲು ಬಿಡಿ. ನೀರು ಬಿಸಿಯಾದಾಗ ಕತ್ತರಿಸಿಕೊಂಡಿರುವ ಈ ಮಾವಿನಕಾಯಿಯ ತುಂಡುಗಳನ್ನು ಅದರೊಳಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಅರಶಿಣ, ಹಸಿ ಮೆಣಸು, ಉಪ್ಪು ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
ಕುದಿಯುತ್ತಿರುವಾಗ ಒಂದು ಜರಡಿಯಲ್ಲಿ ಈ ಎಲ್ಲ ಅಂಶಗಳನ್ನು ನೀರಿನಿಂದ ತೆಗೆದು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಈ ನೀರನ್ನು ಹಾಗೆಯೇ ಇಟ್ಟುಕೊಳ್ಳಿ. ಅಲ್ಲದೆ ಮಾವಿನಕಾಯಿ ಅಂಶಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ನೀರು ಹಾಕದೆಯೇ ನುಣ್ಣಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಅಂಶವನ್ನು ಮತ್ತೆ ಒಲೆ ಮೇಲಿರುವ ಮಾವಿನ ಕಾಯಿ ಬೇಯಿಸಿದ ನೀರಿಗೆ ಹಾಕಿಕೊಂಡು ಮತ್ತೆ ಕುದಿಯಲು ಬಿಡಿ.
ಹಾಗೆ ಮಿಕ್ಸಿ ತೊಳೆದ ನೀರನ್ನು ಸಹ ಇದಕ್ಕೆ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಉಪ್ಪು, ಸಣ್ಣ ಉಂಡೆ ಬೆಲ್ಲ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಕುದಿಯಲು ಬಿಟ್ಟು ಆಗಾಗ ತಿರುಗಿಸುತ್ತಾ ಇರಿ. ಈಗ ಇನ್ನೊಂದು ಕಡೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು, ಇಂಗು ಹಾಕಿ ಬಿಸಿ ಮಾಡಿಕೊಂಡು ಒಲೆ ಮೇಲಿನ ಮಾವಿನಕಾಯಿ ಸಾರಿಗೆ ಹಾಕಿಕೊಂಡು ಮಿಕ್ಸ್ ಮಾಡಿ.
ಹೀಗೆ ಒಗ್ಗರಣೆ ಹಾಕಿದ ಬಳಿಕ 1 ನಿಮಿಷ ಕುದಿಬರಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಾವಿನ ಕಾಯಿ ರಸಂ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಅದ್ಭುತ ರುಚಿಯ ರಸಂ ಮಾಡಿ ನೋಡಿ. ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯಬೇಕೆನಿಸುವ ರುಚಿ ಇದು.



Click it and Unblock the Notifications