Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ
ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿದೆ. ಈ ಸಮಯದಲ್ಲಿ ಹಬ್ಬದ ತಯಾರಿ ಮಾಡುವುದು ಸಾಮಾನ್ಯ ಹಾಗೆ ಎಲ್ಲರು ಹಬ್ಬದಲ್ಲಿ ಮಾಡುವ ಸಿಹಿ ತಿಂಡಿಗಳು ಬಾಯಲ್ಲಿ ನೀರು ತರಿಸುತ್ತವೆ. ಹಾಗೆ ಯುಗಾದಿಯಲ್ಲಿ ಹೆಚ್ಚಾಗಿ ಎಲ್ಲರು ಹೋಳಿಗೆ ಮಾಡುವುದು ಸಾಮಾನ್ಯ. ಹಾಗೆ ಹೋಳಿಗೆ ಜೊತೆಗೆ ಚಿಕ್ಕದಾದ ಹಾಗೆ ಸುಲಭವಾಗಿ ಮಾಡುವ ಸಿಹಿಯನ್ನು ಸಹ ಮಾಡಲು ಮುಂದಾಗೋದು ನೋಡಬಹುದು.
ನಾವಿಂದು ಸುಲಭವಾಗಿ ಈ ಹಬ್ಬದ ಸಮಯದಲ್ಲಿ ಮಾಡಿ ಸವಿಯುವಂತಹ ರುಚಿ ರುಚಿಯಾದ ರವೆ ಉಂಡೆ ಕುರಿತಾಗಿ ತಿಳಿದುಕೊಳ್ಳೋಣ. ರವೆ ಉಂಡೆ ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಈ ರವೆ ಉಂಡೆ ಮಾಡಬಹುದು. ಅಲ್ಲದೆ ಎಲ್ಲಾ ತಿಂಡಿಗಳಿಗಿಂತ ಇದು ಬಹಳ ರುಚಿಕರ ಹಾಗೆ ಮಕ್ಕಳಿಗೂ ಇದು ಇಷ್ಟವಾಗುತ್ತೆ.
ಹಾಗೆ ರವೆ ಉಂಡೆ ಮಾಡಿ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಸಾಮಾನ್ಯ ಉಂಡೆಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿ ಹಾಗೆ ಮೃದುವಾದ ಉಂಡೆ ಮಾಡುವ ಕುರಿತು ತಿಳಿದುಕೊಳ್ಳೋಣ. ಕೆಲವರು ರವೆ ಉಂಡೆ ಮಾಡಿದರೆ ಗಟ್ಟಿಯಾಗಿ ಬರಲಿದೆ ಎಂಬ ದೂರು ಹೇಳುತ್ತಾರೆ, ಆದ್ರೆ ಈ ವಿಧಾನದಲ್ಲಿ ಮಾಡಿದರೆ ರುಚಿ ರುಚಿಯಾಗಿ ಮೃದುವಾದ ಉಂಡೆ ಮಾಡಬಹುದು.
ಹಾಗಾದ್ರೆ ಸುಲಭವಾಗಿ ರವೆ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರವೆ ಉಂಡೆ ಮಾಡಲು ಬೇಕಾಗುವ ವಸ್ತುಗಳು
- ರವೆ
- ಗೋಡಂಬಿ
- ಒಣ ದ್ರಾಕ್ಷಿ
- ತೆಂಗಿನಕಾಯಿ ಪುಡಿ
- ಸಕ್ಕರೆ
- ಏಲಕ್ಕಿ
- ಹಾಲು-
- ತುಪ್ಪ
ರವೆ ಉಂಡೆ ಮಾಡುವ ಸುಲಭದ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಒಂದು ಅಥವಾ ಒಂದೂವರೆ ಕಪ್ ರವೆ ಹಾಕಿ. ಗೋಡಂಬಿ, ದ್ರಾಕ್ಷಿ ಎತ್ತಿಟ್ಟುಕೊಳ್ಳುವ ಅಗತ್ಯವಿಲ್ಲ ಹಾಗೆಯೇ ಮಾಡಬಹುದು. ಈ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. 5ರಿಂದ 6 ನಿಮಿಷಗಳ ಕಾಲ ಹುರಿದುಕೊಳ್ಳಬೇಕು.
ಈಗ ಇದಕ್ಕೆ ಅಂಗಡಿಯಲ್ಲಿ ಸಿಗುವ ಕೊಬ್ಬರಿ ತುರಿಯನ್ನು ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಿ. ತಂಗಿನಕಾಯಿ ತುರಿಯನ್ನು ಸಹ ಬಳಸಬಹುದು. ಒಂದು ನಿಮಿಷ ಹುರಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಇನ್ನೊಂದು ಕಡೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ 1 ಕಪ್ ಸಕ್ಕರೆ ಏಲಕ್ಕಿ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು.
ಈಗ ಈ ಪುಡಿಯನ್ನು ರವೆಯೊಂದಿಗೆ ಹಾಕಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಈಗ ಕಾಯಿಸಿಕೊಂಡಿದ್ದ ಹಾಲನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಲು ಬಿಸಿ ಬಿಸಿ ಆಗಿರಲಿ. ನಂತರ ಕೈಯಿಂದ ರವೆಯನ್ನು ಉಂಡೆ ಕಟ್ಟಿಕೊಳ್ಳಿ. ನಿಧಾನವಾಗಿ ಉಂಡೆ ಕಟ್ಟಿ. ಹೆಚ್ಚು ಒತ್ತಿಕೊಂಡು ಉಂಡೆ ಕಟ್ಟಲು ಮುಂದಾಗಬೇಡಿ. ಈಗ ಉಂಡೆಯನ್ನು ತಟ್ಟೆಯಲ್ಲಿ ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಇದು ಗಟ್ಟಿಯಾಗುತ್ತೆ. ಇಷ್ಟಾದರೆ ಸವಿಯಲು ರವೆ ಉಂಡೆ ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ಮನೆಯಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು. ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಥಟ್ ಎಂದು ಮಾಡಿಕೊಳ್ಳಿ. ಯುಗಾದಿ ಹಬ್ಬದಲ್ಲಿ ಹೋಳಿಗೆಯೊಂದಿಗೆ ಈ ಸಿಹಿ ಬಹಳ ರುಚಿ ನೀಡಲಿದೆ. ಮಕ್ಕಳಿಗೂ ಬಹಳ ಇಷ್ಟವಾಗುತ್ತೆ.



Click it and Unblock the Notifications
