Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರವೆ ಬಳಸಿ ಮಾಡುವ ಈ ಪೂರಿ ಬಾಯಲ್ಲಿ ನೀರು ತರಿಸಲಿದೆ! ಮಾಡೋದು ಸಹ ಬಹಳ ಸುಲಭ!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ತಿಂಡಿಗಳನ್ನು ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಹಾಗೆ ನಿತ್ಯವು ಒಂದೇ ರೀತಿ ತಿಂಡಿ ಮಾಡುವುದು ಅಂದ್ರೆ ಎಲ್ಲರಿಗೂ ಬೇಸರ ತರಿಸಲಿದೆ. ಹಾಗೆ ಬೆಳಗ್ಗೆ ರುಚಿ ರುಚಿಯಾದ ತಿಂಡಿಗಳಿದ್ದರೆ ಇಡೀ ದಿನ ನಿಮಗೆ ಶಕ್ತಿ ತುಂಬಲಿದೆ. ಹಾಗೆ ಬೆಳಗ್ಗೆ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬೇಕು ಎಂಬುದನ್ನು ಆಲೋಚಿಸುವಾಗಲೇ ಸಮಯ ಕಳೆಯುತ್ತದೆ. ಆದ್ರೆ ನಾವಿಲ್ಲಿ ಸುಲಭವಾಗಿ ಮಾಡುವ ಈ ತಿಂಡಿ ಕುರಿತಾಗಿ ತಿಳಿದುಕೊಳ್ಳೋಣ.
ನೀವು ಬೆಳಗ್ಗೆ ಗೋಧಿ ಹಿಟ್ಟಿನಿಂದ ಸುಲಭವಾಗಿ ಚಪಾತಿ ಅಥವಾ ಪೂರಿ ಮಾಡಬಹುದು. ಆದ್ರೆ ನಾವಿಂದು ಗೋಧಿ ಹಿಟ್ಟು ಬಳಸದೆಯೇ ಪೂರಿ ಮಾಡುವ ಕುರಿತು ತಿಳಿಯೋಣ. ಬಹಳ ಸುಲಭವಾಗಿ ರವೆ ಹಾಗೂ ಮೈದಾ ಹಿಟ್ಟು ಬಳಸಿಕೊಂಡು ಈ ಪೂರಿ ಮಾಡಬಹುದು. ಬಹಳ ಮೃದುವಾಗಿ ಹಾಗೆ ರುಚಿ ರುಚಿಯಾಗಿ ಈ ಪೂರಿ ಮಾಡಿ ಸವಿಯಬಹುದು.

ರವೆ ಪೂರಿ ಆರೋಗ್ಯಕ್ಕೂ ಉತ್ತಮವಾಗಬಹುದು. ಹಾಗೆ ನೀವು ಈ ಪೂರಿಯೊಂದಿಗೆ ಚಟ್ನಿ ಮಾಡಿದರೆ ಎಲ್ಲರಿಗೂ ಇಷ್ಟವಾಗೋದು ಖಚಿತ. ಹಾಗಾದ್ರೆ ರುಚಿ ರುಚಿಯ ಈ ರವೆ ಪೂರಿ ಮಾಡುವುದು ಹೇಗೆ? ರವೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಪೂರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರವೆ
- ಮೈದಾ ಹಿಟ್ಟು
- ಉಪ್ಪು
- ಎಣ್ಣೆ
ರವೆ ಪೂರಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್‌ಗೆ 1 ಕಪ್ ಮೈದಾ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ 2 ಸ್ಪೂನ್ ಚಿರೋಟಿ ರವೆ ಹಾಕಿಕೊಂಡು, ಉಪ್ಪು ಸೇರಿಸಿ ಡ್ರೈ ಮಿಕ್ಸ್ ಮಾಡಿ. ಹಾಗೆ ಇದಕ್ಕೆ 1 ಸ್ಪೂನ್ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ನಿಧಾನವಾಗಿ ಕಲಸಿಕೊಳ್ಳಬೇಕು. ಹಿಟ್ಟು ಹದವಾಗಬೇಕು. ಚಪಾತಿ ಮಾಡಲು ಬಳಸುವ ಹಿಟ್ಟಿನ ಹದಕ್ಕೆ ಇದು ಬರಬೇಕು. ಹಾಗೆ ಇದಕ್ಕೆ ಮತ್ತೆ ಅರ್ಧ ಸ್ಪೂನ್ ಎಣ್ಣೆ ಹಾಕಿ ಹದ ಮಾಡಿಕೊಳ್ಳಿ.
ಬಳಿಕ ಇದನ್ನು ಪಾತ್ರೆಯಲ್ಲಿ ಮುಚ್ಚಳ ಮುಚ್ಚಿ 10 ನಿಮಿಷ ಬಿಡಬೇಕು. 10 ನಿಮಿಷದ ಬಳಿಕ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಕೈಗೆ ಎಣ್ಣೆ ಹಚ್ಚಿಕೊಂಡು ಮತ್ತೆ ಮಿಕ್ಸ್ ಮಾಡಿ ಮೃದುವಾಗಿ ಬರುವಂತೆ ಹದ ಮಾಡಬೇಕು. ಚಪಾತಿ ಮಾಡುವ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳುವಾಗಿರಲಿ. ಅನಂತರ ಇದನ್ನು ಸಣ್ಣ ಸಣ್ಣ ಉಂಡೆ ಕಟ್ಟಿಕೊಂಡು ಇಟ್ಟುಕೊಳ್ಳಬೇಕು.
ಈಗ ಚಪಾತಿ ಮಣೆ ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಳ್ಳಿ. ಅನಂತರ ಉಂಡೆ ಕಟ್ಟಿದ ಹಿಟ್ಟನ್ನು ಲಟ್ಟಿಸಿಕೊಳ್ಳಬೇಕು. ಎಷ್ಟು ತೆಳು ಬೇಕೋ ಅಷ್ಟು ತೆಳುವಾಗಿ ಲಟ್ಟಿಸಿಕೊಳ್ಳಿ. ಬಹಳ ದಪ್ಪವಾಗಿ ಲಟ್ಟಿಸಿಕೊಳ್ಳಬೇಡಿ. ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಟ್ಟು ಈ ಪೂರಿಯನ್ನು ಅದಕ್ಕೆ ಹಾಕಿ.
ಉರಿ ಹೆಚ್ಚು ಇಟ್ಟುಕೊಳ್ಳದೆ ಮಧ್ಯಮ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ ಕರಿದುಕೊಳ್ಳಿ. ಇದು ಉಬ್ಬಿ ಬರುವಂತೆ ಮಾಡಿಕೊಳ್ಳಿ. ಬೇಕಿದ್ದರೆ ಲಟ್ಟಿಸುವಾಗ ಪರೋಟದಂತೆ ಪದರ ಪದರ ಮಾಡುವ ರೀತಿಯೂ ಲಟ್ಟಿಸಬಬಹುದು. ಇಷ್ಟಾದರೆ ಈ ರವೆ ಪೂರಿ ಸಿದ್ದವಾಗುತ್ತೆ. ಇದಕ್ಕೆ ತೆಂಗಿನಕಾಯಿ ಚಟ್ನಿ ಮಾಡಿಕೊಂಡರೆ ರುಚಿ ದುಪ್ಪಟ್ಟಾಗಲಿದೆ.



Click it and Unblock the Notifications