Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬಕ್ಕಾಗಿ ರವೆ ಲಡ್ಡು ಮಾಡಿ.! ಪಾಕ-ಹಾಲು ಯಾವುದು ಬೇಡ..!
ಹಬ್ಬ ಆರಂಭವಾಗುತ್ತಿರುವ ದಿನದಲ್ಲಿ ಯಾವ ಸಿಹಿ ತಿಂಡಿ ಮಾಡಬೇಕು ಎಂಬ ನಿಮ್ಮ ಆಲೋಚನೆ ಇದ್ದರೆ ಹತ್ತಾರು ಪ್ರಕಾರಗಳಿವೆ. ಆದ್ರೆ ಎಲ್ಲದಕ್ಕಿಂತ ಸುಲಭವಾಗಿ, ಕಡಿಮೆ ವಸ್ತುಗಳ ಬಳಸಿ, ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿಯನ್ನು ನೀವು ಸಹ ಹುಡುಕುತ್ತಿರುತ್ತೀರಿ. ಹಬ್ಬ ಎಂದರೆ ಕೆಲಸಗಳು ಹೆಚ್ಚಾಗಿರುತ್ತವೆ. ಹೀಗಾಗಿ ಕಡಿಮೆ ಸಮಯದಲ್ಲಿ ಆದಷ್ಟು ಕಡಿಮೆ ವಸ್ತು ಬಳಸಿ ಬಾಯಿ ಚಪ್ಪರಿಸಿ ಸವಿಯಬಹುದಾದ ಅದ್ಭುತ ತಿಂಡಿ ಹುಡುಕಾಡುತ್ತಾರೆ.
ಹೀಗೆ ಹಬ್ಬಕ್ಕಾಗಿ ಸಿಹಿ ತಿಂಡಿ ಮಾಡುವ ನಿಮ್ಮ ಆಲೋಚನೆ ಇದ್ದರೆ ನಿಮಗಾಗಿ ನಾವಿಂದು ಸುಲಭವಾಗಿ ಮಾಡಬಹುದಾದ ರವೆ ಉಂಡೆ ಅಥವಾ ರವೆ ಲಡ್ಡು ಮಾಡುವ ಕುರಿತು ತಿಳಿಸುತ್ತಿದ್ದೇವೆ. ಈ ಸಿಹಿ ಚಿಕ್ಕವರಿಂದ ಹಿಡಿದು ಹಿರಿಯರ ವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಇದನ್ನು ಎಲ್ಲ ಬೇಕರಿಯಲ್ಲಿಯೂ ನೀವು ನೋಡಿರುತ್ತೀರಿ.

ಆದ್ರೆ ಹಬ್ಬದಲ್ಲಿ ಈ ರವೆ ಲಡ್ಡು ನೃವೇಧ್ಯಕ್ಕೂ ಬರುತ್ತದೆ. ಹೀಗಾಗಿ ನಾವಿಂದು ಈ ಲಡ್ಡ ಮಾಡುವುದು ಹೇಗೆ? ರವೆ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡುವ ಯಾವ ರೀತಿ ಎಚ್ಚರಿಕೆ ತಗೆದುಕೊಳ್ಳಬೇಕು ಎಂಬೆಲ್ಲಾ ಕುರಿತು ನಾವಿಂದು ತಿಳಿದುಕೊಳ್ಳೋಣ.
ರವೆ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು
- ಉಪ್ಪಿಟ್ಟು ರವೆ - 1 ಕಪ್
- ತುಪ್ಪ - 4 ಚಮಚ
- ಒಣ ದ್ರಾಕ್ಷಿ
- ಗೋಡಂಬಿ
- ಬಾದಾಮಿ
- ಸಕ್ಕರೆ - ಮುಕ್ಕಾಲು ಕಪ್
- ತೆಂಗಿನ ತುರಿ- ಅರ್ಧ ಕಪ್
ರವೆ ಉಂಡೆ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಮೂರರಿಂದ ನಾಲ್ಕು ಚಮಚ ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಸಹ ಹಾಕಿಕೊಳ್ಳಬಹುದು. ಇದನ್ನು ಹುರಿದ ಬಳಿಕ ಅದನ್ನು ಪಾತ್ರೆಯಿಂದ ತೆಗೆಯದೇ ಅದರ ಮೇಲೆ ರವೆಯನ್ನು ಹಾಕಿ. ನೀವು ಉಪ್ಪಿಟ್ಟಿನ ರವೆಯಲ್ಲಿ ಈ ಲಡ್ಡು ಮಾಡಬಹುದು. ಮೃದುವಾಗಿ ಬರುತ್ತದೆ.
ರವೆ ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರವೆಯನ್ನು 10 ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಿ. ಉರಿ ಸಣ್ಣದಾಗಿ ಇರಲಿ. ಈಗ ಏಲಕ್ಕಿ ಹಾಕಿಕೊಂಡು ಮತ್ತೆ ಕಲಸಿಕೊಂಡು ಹುರಿದುಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿಕೊಂಡು ರವೆ ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಮತ್ತೊಂದು ಬಾಣಲಿ ಇಟ್ಟು ತೆಂಗಿನಕಾಯಿ ತುರಿ ಹಾಕಿ 3 ನಿಮಿಷ ಹುರಿದುಕೊಳ್ಳಿ. ಬಳಿಕ ಇದನ್ನು ತೆಗೆದು ಬದಿಗಿಡಿ.
ಈಗ ಅದೇ ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಮುಕ್ಕಾಲು ಕಪ್ ಸಕ್ಕರೆ ಹಾಕಿ ಸ್ವಲ್ಪವೇ ನೀರು ಹಾಕಿ ಕರಗಿಸಿಕೊಳ್ಳಿ. ಸಕ್ಕರೆ ಕರಗಿದರೆ ಸಾಕಾಗುತ್ತದೆ, ಪಾಕ ಮಾಡುವ ಅವಶ್ಯಕತೆ ಇಲ್ಲ. ಸಕ್ಕರೆ ಕರಗಿದ ಬಳಿಕ ತೆಗೆದು ಬದಿಗಿಟ್ಟು, ಈಗ ಹುರಿದುಕೊಂಡಿದ್ದ ರವೆಗೆ ಹುರಿದುಕೊಂಡ ತೆಂಗಿನ ತುರಿಯನ್ನು ಹಾಕಿ ಮಿಕ್ಸ್ ಮಾಡಿ.
ಈಗ ಸಕ್ಕರೆ ನೀರನ್ನು ಸಹ ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಉಂಡೆ ಕಟ್ಟಲು ಆರಂಭಿಸಿ. ನಿಮಗೆ ಎಷ್ಟು ದೊಡ್ಡ ಉಂಡೆ ಬೇಕೋ ಅಷ್ಟು ದೊಡ್ಡದಾಗಿ ಮಾಡಿಕೊಳ್ಳಿ. ಸಕ್ಕರೆ ನೀರು ಬಿಸಿ ಬಿಸಿ ಇರುವಾಗ ಉಂಡೆ ಕಟ್ಟಿಕೊಳ್ಳಿ. ಸ್ವಲ್ಪ ಸ್ವಲ್ಪ ಸಕ್ಕರೆ ನೀರು ಹಾಕಿಕೊಳ್ಳುತ್ತಾ ಉಂಡೆ ಮಾಡಿಕೊಳ್ಳಿ. ಎಲ್ಲಾ ಉಂಡೆಯಲ್ಲೂ ದ್ರಾಕ್ಷಿ, ಗೋಡಂಬಿ, ಬಾದಾಮಿ ಬರುವಂತೆ ನೋಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮೃದುವಾದ ನೀರು ತರಿಸುವ ರವೆ ಲಡ್ಡು ರೆಡಿಯಾಗುತ್ತದೆ. ಇದನ್ನು ಹಬ್ಬದಂದು ನೈವೇಧ್ಯಕ್ಕೆ ಹಾಗೆ ಊಟದ ಜೊತೆ ಸವಿಯಲು ನೀಡಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications