Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾಕವನ್ನೇ ಬಳಸದೆ ರವೆ ಉಂಡೆ ಮಾಡಿ: 4 ವಸ್ತು ಮನೆಯಲ್ಲಿದ್ದರೆ ಸಾಕು!
ಮನೆಯಲ್ಲಿ ಹಬ್ಬ ಇದ್ದಾಗ ಹಾಗೆ ವಿಶೇದ ದಿನಗಳು ಅತಿಥಿಗಳು ಬರುವ ಸೂಚನೆ ಇದ್ದಾಗ ರುಚಿಯಾಗಿ ನೀವು ಸಿಹಿ ಮಾಡಲು ಮುಂದಾಗಬಹುದು. ಹಾಗೆ ಸಿಹಿಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ, ಆದ್ರೆ ಸಿಹಿ ಅಂದ್ರೆ ಬಹಳ ಖರ್ಚು, ಸಮಯ ಹಿಡಿಯುತ್ತೆ ಎಂದುಕೊಂಡಿರುತ್ತೀರಿ. ಆದ್ರೆ ಸುಲಭವಾಗಿ ಮಾಡಬಹುದಾದ ಹಾಗೆ ಬಹಳ ಕಡಿಮೆ ವಸ್ತುಗಳ ಬಳಸಿ ಮಾಡುವ ಸಿಹಿ ತಿಂಡಿಗಳು ಕೂಡ ಇವೆ.
ಹಾಗೆ ರವೆಯಿಂದ ಮಾಡುವಂತಹ ವಿವಿಧ ಬಗೆ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ರವೆಯಿಂದ ಮಾಡುವ ಉಂಡೆಯಂತು ಎಲ್ಲರಿಗೂ ಇಷ್ಟವಾಗುವ ಹಾಗೆ ಸುಲಭವಾಗಿ ಮಾಡುವಂತಹ ಸಿಹಿ ತಿಂಡಿ. ರವೆ ಉಂಡೆಯನ್ನು ಕೂಡ ಹಲವು ರೀತಿಯಲ್ಲಿ ಮಾಡಬಹುದು. ಹಾಗೆ ಪಾಕ ಬಳಸದೆಯೂ ಮಾಡಬಹುದು.

ಪಾಕ ಇಲ್ಲದೆ ಸುಲಭ ವಿಧಾನದಲ್ಲಿ ಮಾಡುವ ರವೆ ಉಂಡ ರುಚಿ ರುಚಿಯಾಗಿ ಬರಲಿದೆ. ಇನ್ನು ರವೆ ಉಂಡೆಯನ್ನು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಮಕ್ಕಳಿಗೆ ಇದು ಪ್ರಿಯವಾದ ತಿಂಡಿ ಆಗಿರಲಿದೆ. ಇನ್ನು ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ನಾವಿಂದು ಸುಲಭವಾಗಿ ಈ ರವೆ ಉಂಡೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ರವೆ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಪಾಕ ಬಳಸದೆ ರವೆ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳ ಬೇಕು?
- ರವೆ
- ತುಪ್ಪ
- ಕೊಬ್ಬರಿ ತುರಿ
- ಸಕ್ಕರೆ
- ಏಲಕ್ಕಿ ಪುಡಿ
- ಹಾಲು
- ಗೋಡಂಬಿ
ಪಾಕ ಬಳಸದೆ ರವೆ ಉಂಡೆ ಮಾಡುವುದು ಹೇಗೆ?
ಮೊದಲು ಬಾಣಲೆಯಲ್ಲಿ 3 ಚಮಚ ತುಪ್ಪ ಹಾಕಿ ಬಿಸಿಯಾಗಲು ಬಿಡಿ. ನಂತರ ಇದಕ್ಕೆ 1 ಕಪ್ ಚಿರೋಟಿ ರವೆ ಹಾಕಿಕೊಳ್ಳಿ. ನಂತರ 5 ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ನಂತರ 5 ನಿಮಿಷ ಬಿಟ್ಟ ಬಳಿಕ ಮುಕ್ಕಾಲು ಕಪ್ ಅಷ್ಟು ಕೊಬ್ಬರಿ ಪುಡಿಯನ್ನು ಹಾಕಿಕೊಳ್ಳಿ. ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ಇದಕ್ಕೆ ಹಾಕಿಕೊಳ್ಳಿ.
ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 2 ನಿಮಿಷ ಮಿಕ್ಸ್ ಮಾಡಿಕೊಂಡು ಬಳಿಕ ಅರ್ಧ ಕಪ್ ಸಕ್ಕರೆ ಹಾಕಿಕೊಂಡು ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿ ಹಾಕಿಕೊಳ್ಳಿ ಹಾಗೆ ಏಲಕ್ಕಿ ಪುಡಿ ಸಹ ಹಾಕಿಕೊಳ್ಳಿ. ಮತ್ತೆ 3 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಪುಡಿ ಚೆನ್ನಾಗಿ ಮಿಶ್ರಣ ಆಗಬೇಕು. ಈಗ ಅರ್ಧ ಕಪ್ ಕಾಯಿಸಿ ಆರಿಸಿಕೊಂಡಿರುವ ಹಾಲನ್ನು ಸ್ವಲ್ಪ ಸ್ವಲ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಇದು ಸ್ವಲ್ಪ ಗಟ್ಟಿಯಾಗಬೇಕು, ಉಂಡೆ ಕಟ್ಟುವ ಹದಕ್ಕೆ ಬರಬೇಕು. ಹಾಗೆ 2 ಚಮಚ ತುಪ್ಪ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಬಿಸಿ ಇರುವ ರವೆಯನ್ನು ತಣ್ಣಗಾಗಲು ಇಡಿ. ನಂತರ ಉಂಡೆ ಕಟ್ಟಿಕೊಳ್ಳಿ. ಕೊನೆಯಲ್ಲಿ ಗೋಡಂಬಿ ಅಥವಾ ಬಾದಾಮಿ, ಒಣ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಂಡು ಹಾಕಿಕೊಳ್ಳಬಹುದು. ನಂತರ ಒಣ ಕೊಬ್ಬರಿಯಲ್ಲಿ ಈ ಉಂಡೆಯನ್ನು ಹಾಕಿ ಒಮ್ಮೆ ಉರುಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ರವೆ ಉಂಡೆ ಸಿದ್ದವಾಗುತ್ತೆ.
ನೀವು ಸಹ ಮನೆಯಲ್ಲಿ ಈ ರೀತಿಯ ವಿಧಾನದಲ್ಲಿ ಅದ್ರಲ್ಲೂ ಪಾಕ ಬಳಸದೆಯೇ ಉಂಡೆ ಕಟ್ಟಿಕೊಳ್ಳಿ. ಈ ಸಿಹಿಯು ಬಹಳ ರುಚಿ ನೀಡಲಿದೆ. ಹಾಗೆ ಮಾಡೋದು ಕೂಡ ಬಹಳ ಸುಲಭ, ಕಡಿಮೆ ವಸ್ತುಗಳ ಬಳಸಿ ಇದನ್ನು ಮಾಡಬಹುದು.



Click it and Unblock the Notifications