Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಗ್ಲಾಸ್ ಹುಣಸೆ ಹುಳಿ ರಸಂ ನಿಮ್ಮ ಆರೋಗ್ಯ ಸುಧಾರಿಸಲಿದೆ: ಕೆಮ್ಮು, ನೆಗಡಿಗೆ ಇದು ಬೆಸ್ಟ್!
ರಸಂ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರೋದು ಖಚಿತ. ಅದ್ರಲ್ಲೂ ಊಟದ ಕೊನೆಯಲ್ಲಿ ರಸಂ ಮೂಲಕ ಒಂದೆರಡು ತುತ್ತು ಸವಿದರೆ ಊಟ ಪೂರ್ಣವಾದಂತೆ ಆಗಲಿದೆ. ಹಾಗೆ ಈ ರಸಂನಲ್ಲಿಯೂ ಹತ್ತು ಹಲವು ವಿಧಗಳಿವೆ. ಟೊಮೆಟೋ ಬಳಸಿ ಮಾಡುವ ರಸಂನಿಂದ ಹಿಡಿದು ವಿವಿಧ ರೀತಿಯ ರಸಂಗಳು ನಿಮಗೆ ಉತ್ತಮ ರುಚಿ ನೀಡಲಿದೆ. ಹಾಗೆ ಈ ರುಚಿಯಲ್ಲಿ ರಸಂ ಮಾಡಿದ್ರೆ ಎಲ್ಲರು ಸವಿಯೋದು ಖಚಿತ.
ಹಾಗೆ ನಾವಿಂದು ಊಟದ ರುಚಿ ಹೆಚ್ಚಿಸುವಂತಹ ಹುಣಸೆ ಹುಳಿಯ ರಸಂ (Rasam Recipe) ಅನ್ನು ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಇದನ್ನ ಊಟದೊಂದಿಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗೆ ಊಟದ ಮುಗಿದ ಬಳಿಕ ಒಂದು ಗ್ಲಾಸ್‌ನಲ್ಲಿ ಹಾಕಿ ಕುಡಿಯಲು ಕೂಡ ಇದು ರುಚಿ ನೀಡಲಿದೆ.

ಈ ರಸಂ ಮಾಡಲು ಬಳಸುವ ಹಲವು ವಸ್ತುಗಳು ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರಲಿದೆ. ಇದಕ್ಕೆ ಜೀರಿಗೆ, ಕಾಳು ಮೆಣಸಿನಂತಹ ಪದಾರ್ಥಗಳ ಬಳಸುವುದರಿಂದ ನಿಮ್ಮಲ್ಲಿರುವ ಕೆಮ್ಮು, ಶೀತ, ನೆಗಡಿಯಂತಹ ಸಮಸ್ಯೆಗಳಿಗೂ ಕೂಡ ಉತ್ತಮವಾಗಿರಲಿದೆ. ಹಾಗೆ ಈ ರಸಂ ಮಾಡುವುದು ಎಲ್ಲರಿಗೂ ಇಷ್ಟವಾಗುತ್ತೆ. ನಾವಿಂದು ಸುಲಭವಾಗಿ ಹುಣಸೆ ಹುಳಿಯನ್ನು ಬಳಸಿಕೊಂಡು ಮಾಡುವ ರಸಂ ಕುರಿತಾಗಿ ತಿಳಿದುಕೊಳ್ಳೋಣ.
ಹುಣಸೆ ಹುಳಿಯ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುಣಸೆ ಹುಳಿಯ ರಸಂ ಮಾಡಲು ಬೇಕಾಗುವ ಪದಾರ್ಥಗಳು
- ಹುಣಸೆ ಹಣ್ಣು -ನಿಂಬೆಹಣ್ಣು ಗಾತ್ರದಷ್ಟು
- ಜೀರಿಗೆ
- ಕಾಳು ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಎಣ್ಣೆ
- ಸಾಸಿವೆ
- ಇಂಗು
- ಬೆಳ್ಳುಳ್ಳಿ
- ಒಣ ಮೆಣಸಿನಕಾಯಿ
- ಅರಿಶಿನದ ಪುಡಿ
- ಉಪ್ಪು
ಹುಣಸೆ ಹುಳಿಯ ರಸಂ ಮಾಡುವ ಸುಲಭದ ವಿಧಾನವೇನು?
- ಮೊದಲಿಗೆ ಹುಣಸೆ ಹಣ್ಣನ್ನು ನೆನೆಸಿಡಬೇಕು. ದೊಡ್ಡ ನಿಂಬೆ ಗಾತ್ರದ ಹುಳಿ ತೆಗೆದುಕೊಂಡು ಬಿಸಿ ನೀರಿನಲ್ಲಿ ನೆನೆಸಿಡಬೇಕು.
- ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಕಾಳು ಮೆಣಸು ಹಾಕಿಕೊಂಡು ಪುಡಿ ಮಾಡಿಕೊಳ್ಳಿ.
- ಪುಡಿ ಮಾಡಿದ ಈ ಮಸಾಲೆಯನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
- ಈಗ ನೆನೆಸಿಟ್ಟ ಹುಣಸೆಹಣ್ಣನ್ನು ಕಿವುಚಿ ಅದರ ನೀರು ರೆಡಿ ಮಾಡಿಕೊಳ್ಳಿ. ದಪ್ಪವಾಗಿ ಈ ರಸ ಇರಲಿ. ಸ್ವಲ್ಪ ನೀರು ಕೂಡ ಸೇರಿಸಿಕೊಂಡು ಕಿವುಚಿಕೊಳ್ಳಿ.
- ರಸಂ ಮಾಡಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ.
- ಬಿಸಿಯಾದ ಎಣ್ಣೆ ಸಾಸಿವೆ, ಇಂಗು, ಬೆಳ್ಳುಳ್ಳಿ, ಒಣ ಮೆಣಸು ಸಹ ಹಾಕಿಕೊಂಡು ಫ್ರೈ ಆಗಲು ಬಿಡಿ.
- 1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಕರಿವೇವು ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಕಿವುಚಿಕೊಂಡಿದ್ದ ಹುಣಸೆ ಹುಳಿ ನೀರನ್ನು ಇದಕ್ಕೆ ಹಾಕಿ ಮೊಲದು ಪುಡಿ ಮಾಡಿಕೊಂಡಿದ್ದ ಜೀರಿಗೆ ಕಾಳು ಮೆಣಸಿನ ಪುಡಿ ಸಹ ಹಾಕಿಕೊಳ್ಳಿ.
- ಈಗ ಅರ್ಧ ಸ್ಪೂನ್ ಅರಶಿಣದ ಪುಡಿಯನ್ನು ಸಹ ಇದಕ್ಕೆ ಹಾಕಿಕೊಳ್ಳಬೇಕು.
- ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲಾ ಪದಾರ್ಥ ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಿ.
- ಈಗ ನಿಮಗೆ ಎಷ್ಟು ನೀರು ಬೇಕೋ ಅಷ್ಟು ನೀರು ಹಾಕಿ. ನೀರು ಸ್ವಲ್ಪ ಹೆಚ್ಚಾಗಿ ಬಳಸಿಕೊಳ್ಳಿ.
- ಹಾಗೆ ಉರಿಯನ್ನು ದೊಡ್ಡದಾಗಿ ಇಟ್ಟುಕೊಂಡು ಕುದಿಬರಲು ಬಿಡಿ.
- ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹುಣಸೆ ಹುಳಿ ತಿಳಿಸಾರು ರೆಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ಆಯಿತು.



Click it and Unblock the Notifications