Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಇಳಿಸಬೇಕಾ? ಈ ರೀತಿ ರುಚಿ ರುಚಿಯ ರಾಗಿ ಚಪಾತಿ ಸವಿದು ನೋಡಿ!
ರಾಗಿ ನಮ್ಮ ಆರೋಗ್ಯಕ್ಕೆ ಬಹಳ ಲಾಭದಾಯಕ ಎಂಬುದನ್ನು ತಿಳಿದಿರುತ್ತೀರಿ. ರಾಗಿಯು ನಿಮ್ಮ ತೂಕ ನಿರ್ವಹಣೆಗೆ ಬಹಳ ಸಹಕಾರಿಯಾಗುವಂತಹ ಖಾದ್ಯ ಎನ್ನಬಹುದು. ರಾಗಿ ನಿಮ್ಮ ಜೀರ್ಣಕ್ರಿಯೆ ಉತ್ತೇಜಿಸಲು ಬಹಳ ಮುಖ್ಯ ಆಹಾರ ಅದರ ಫೈಬರ್ ಅಂಶ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಇನ್ನು ರಾಗಿಯಿಂದ ನೀವು ಬಹಳಷ್ಟು ಖಾದ್ಯಗಳ ಮಾಡಿ ಸವಿದಿರುತ್ತೀರಿ.
ರಾಗಿ ಮುದ್ದೆ, ರಾಗಿ ಗಂಜಿ, ರಾಗಿ ದೋಸೆ, ರಾಗಿ ಉಪ್ಪಿಟ್ಟು ಹೀಗೆ ಹಲವು ಬಗೆಯ ತಿನಿಸುಗಳ ಮಾಡಿರುತ್ತೀರಿ. ನಾವಿಂದು ರಾಗಿಯಿಂದ ವಿಶೇಷ ರುಚಿಯ ಚಪಾತಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಗೋಧಿ ಹಿಟ್ಟಿನಿಂದ ಮಾಡುವಂತಹ ಚಪಾತಿಯನ್ನ ನೀವೆಲ್ಲಾ ಸವಿದಿರುತ್ತೀರಿ, ಆದ್ರೆ ನಾವಿಂದು ಸುಲಭವಾದ ಈ ರಾಗಿ ಚಪಾತಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ರಾಗಿ ಚಪಾತಿ ಕೂಡ ನಿಮ್ಮ ಆರೋಗ್ಯಕ್ಕೆ ಉತ್ತಮ. ಅದರಲ್ಲಿನ ಫೈಬರ್ ಅಂಶ ನಿಮ್ಮ ಜೀರ್ಣಕ್ರಿಯೆ ಹಾಗೆ ನೀವು ತೂಕ ಇಳಿಸಲು ಇಷ್ಟಪಡುವವರಾಗಿದ್ದರೆ ಈ ಚಪಾತಿ ಸವಿಯುವುದು ಬಹಳ ಉತ್ತಮ. ಹಾಗೆ ಇದು ಮಕ್ಕಳ ಆರೋಗ್ಯಕ್ಕೂ ಅದರಲ್ಲೂ ಮೂಳೆಗಳ ಬೆಳವಣಿಗೆಗೆ ಬಹಳ ಮುಖ್ಯ. ಹಾಗಾದ್ರೆ ಮನೆಯಲ್ಲಿ ಈ ರಾಗಿ ಚಪಾತಿ ಮಾಡುವುದು ಹೇಗೆ?
ರಾಗಿ ಚಪಾತಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ಚಪಾತಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರಾಗಿ ಹಿಟ್ಟು
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ರಾಗಿ ಚಪಾತಿ ಮಾಡುವ ಸುಲಭದ ವಿಧಾನ ಇದು
ಮೊದಲು ಒಂದು ಕಪ್‌ನಲ್ಲಿ ರಾಗಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಳ್ಳಿ. ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಒಂದು ಕಪ್ ನೀರು ಹಾಕಿ ಬಿಸಿಯಾಗಲು ಬಿಡಿ. ನೀರು ಬಿಸಿಯಾಗಲು ಆರಂಭಿಸಿದಾಗ ಅದಕ್ಕೆ ಉಪ್ಪು, 1 ಸ್ಪೂನ್ ಎಣ್ಣೆ ಸೇರಿಸಿ. ಈಗ 1 ಕಪ್ ರಾಗಿ ಹಿಟ್ಟು ಹಾಕಿಕೊಳ್ಳಬೇಕಿ. ನೀರು ಹಾಗೂ ರಾಗಿ ಹಿಟ್ಟು ಸಮ ಪ್ರಮಾಣದಲ್ಲಿ ಹಾಕಿಕೊಳ್ಳಬೇಕು. ಹೀಗೆ ಅಳತೆ ಸರಿಯಾಗಿದ್ದರೆ ಹಿಟ್ಟು ಹದವಾಗಿ ಬರಲಿದೆ.
ಈ ರೀತಿ ಹಿಟ್ಟನ್ನು ಹಾಕಿಕೊಂಡು ನಿಧಾನವಾಗಿ ಕಲಸಿಕೊಳ್ಳಬೇಕು. ಗೋಧಿ ಹಿಟ್ಟು ಹದ ಮಾಡಿಕೊಂಡಂತೆಯೇ ಈ ರಾಗಿ ಹಿಟ್ಟನ್ನು ಕೂಡ ಹದ ಮಾಡಿಕೊಳ್ಳಿ. ನೀರು ಕಡಿಮೆಯಾದರೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹದ ಮಾಡಿಕೊಳ್ಳಿ. ಹಿಟ್ಟನ್ನು ನಿಧಾನವಾಗಿ ಮಿಕ್ಸ್ ಮಾಡಿಕೊಂಡು ಬಳಿಕ ಒಲೆ ಆಫ್ ಮಾಡಿ ಮುಚ್ಚಿಟ್ಟುಕೊಳ್ಳಿ.
5 ನಿಮಿಷ ಮುಚ್ಚಿ ಇಟ್ಟು ಬಳಿಕ ಹಿಟ್ಟನ್ನು ಕೈಯಿಂದ ಹದ ಮಾಡಲು ಆರಂಭಿಸಿ. ಕೈಯಿಂದ ಕಲಸುವಾಗ ನೀರು ಇಲ್ಲವೆ ಎಣ್ಣೆ ಹಚ್ಚಿಕೊಂಡು ಹದ ಮಾಡಿಕೊಳ್ಳಿ. ಇದು ಗೋಧಿ ಹಿಟ್ಟಿನಂತೆಯೇ ಹದವಾಗಿ ಬರಬೇಕು. ಇದು ಮೃದುವಾಗಿ ಬರಬೇಕು. ಎಲ್ಲಿಯೂ ಒಡೆದ ಗೆರೆಗಳು ಮೂಡದಂತೆ ಹದ ಮಾಡಿಕೊಳ್ಳಿ. ಗೋಧಿ ಚಪಾತಿ ಮಾಡಲು ಬೇಕಾದ ತಯಾರಿಯೇ ಇದಕ್ಕೂ ಅಗತ್ಯ.
ನಂತರ ಹಿಟ್ಟಿನಿಂದ ಉಂಡೆ ಮಾಡಿಟ್ಟುಕೊಂಡು ಕೆಳಗೆ ರಾಗಿ ಹಿಟ್ಟು ಹಾಕಿಕೊಂಡು ಚಪಾತಿಯನ್ನು ಲಟ್ಟಿಸಿಕೊಳ್ಳಿ. ನಂತರ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿಕೊಂಡು ಬಳಿಕ ಅದರ ಮೇಲೆ ರಾಗಿ ಚಪಾತಿ ಹಾಕಿಕೊಳ್ಳಿ. ಹಾಗೆ ಎರಡೂ ಕಡೆಗೂ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರಾಗಿ ಚಪಾತಿ ರೆಡಿಯಾಗುತ್ತದೆ. ನೀವು ಸಹ ಈ ಚಪಾತಿ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications