Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಎನರ್ಜಿ, ಶಕ್ತಿ, ದೇಹ ತಂಪಾಗಿಸುವ ರಾಗಿ ಹಾಲು: ಒಮ್ಮೆ ಕುಡಿದರೆ ಸಾಮರ್ಥ್ಯ ಹೆಚ್ಚಾಗುತ್ತೆ!
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದು ಎಲ್ಲರಿಗೂ ಬಹಳ ಪ್ರಮುಖ ಕೆಲಸ. ಹಾಗೆ ದೇಹದಲ್ಲಿ ಉಂಟಾಗುವ ಏರಿಳಿತವನ್ನು ಸರಿದೂಗಿಸಲು ನೀವು ಕೂಡ ಹಲವು ವಿಶೇಷ ಖಾದ್ಯಗಳ ಮಾಡಿ ಸವಿಯೋದು ಕಾಮನ್. ಇನ್ನು ದೇಹದಲ್ಲಿ ನಿಮಗೆ ಎನರ್ಜಿ, ಬಲ, ದೇಹ ತಂಪಾಗಬೇಕಾದರೆ ಬಹಳ ವಿಶೇಷವಾಗಿ ರಾಗಿಯನ್ನು ಬಳಸಿ.
ರಾಗಿಯಿಂದ ಹಲವು ರೀತಿಯ ಖಾದ್ಯಗಳ ಮಾಡಬಹುದಾಗಿದೆ. ಆದ್ರೆ ನಾವಿಂದು ರಾಗಿಯಿಂದ ಸುಲಭವಾಗಿ ಮಾಡಿ ಸವಿಯುವ ಹಾಲನ್ನು ಮಾಡಿ ಸೇವಿಸುವ ಕುರಿತು ತಿಳಿಯೋಣ. ರಾಗಿಯಿಂದ ಮಾಡುವಂತಹ ರಾಗಿ ಮುದ್ದೆ ರಾಗಿ ಗಂಜಿ (Raagi Ganji), ರಾಗಿ ದೋಸೆ, ಇಡ್ಲಿ, ರಾಗಿ ಉಪ್ಪಿಟ್ಟು, ರಾಗಿ ಅಂಬಲಿ (Raagi Ambali) ನಿಮ್ಮ ದೇಹಕ್ಕೆ ಬಹಳ ಉತ್ತಮ. ಇದು ನಿಮ್ಮ ದೇಹವನ್ನು ಸಮತೋಲನದಲ್ಲಿಡಲಿದೆ.

ಹಾಗೆ ಈ ರಾಗಿ ಹಾಲು (Raagi Milk) ದೇಹವನ್ನು ತಂಪಾಗಿ ಇಡುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ, ಉರಿ ಮೂತ್ರದಂಥಹ ಸಮಸ್ಯೆಯಿಂದಲೂ ಮುಕ್ತಿ ನೀಡಲಿದೆ. ಉಳಿದಂತೆ ಇದು ನಿಮ್ಮ ದೇಹದ ಮೇಲೆ ಎಳನೀರು ಕುಡಿಯುವುದಕ್ಕಿಂತ ಉತ್ತಮ ಪ್ರಯೋಜನಗಳ ನೀಡಲಿದೆ. ಹಾಗಾದ್ರೆ ಈ ರಾಗಿ ಹಾಲು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ರಾಗಿ ಹಾಲು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಮಾಡುವುದು ನೋಡಬಹುದು. ಹಾಗಾದ್ರೆ ಮನೆಯಲ್ಲಿಯೇ ಈ ರಾಗಿ ಹಾಲು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ನೋಡೋಣ.
ರಾಗಿ ಹಾಲು ಮಾಡಲು ಬೇಕಾಗುವ ವಸ್ತುಗಳು
- ರಾಗಿ
- ಬೆಲ್ಲ/ಸಕ್ಕರೆ
- ಉಪ್ಪು
- ಬಾದಾಮಿ
ರಾಗಿ ಹಾಲು ಮಾಡಲು ಬೇಕಾಗುವ ವಸ್ತುಗಳು
ಮೊದಲು ಒಂದು ಕಪ್ ರಾಗಿಯನ್ನು ಒಂದು ಬೌಲ್‌ಗೆ ಹಾಕಿ ತೊಳೆದು ನೆನೆಸಿಡಬೇಕು. 7ರಿಂದ 8 ಗಂಟೆ ನೆನೆಯಬೇಕು. ನಂತರ ನೀರಿನಿಂದ ತೆಗೆದು ಬೌಲ್‌ಗೆ ಹಾಕಿಡಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಈ ರಾಗಿ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. 3ರಿಂದ 4 ನಿಮಿದ ಹುರಿದುಕೊಳ್ಳಬೇಕು.
ಇದು ಕಪ್ಪಾಗುತ್ತಾ ಬಂದಾಗ ಇದಕ್ಕೆ ಏಲಕ್ಕಿ ಕೂಡ ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಪ್ ಮಾಡಿಕೊಳ್ಳಿ. ಹಾಗೆ ರಾಗಿ ತಣ್ಣಗಾಗಲು ಬಿಡಿ. ರಾಗಿ ತಣ್ಣಗಾದ ಬಳಿಕ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಇದಕ್ಕೆ ಸಿಪ್ಪೆ ತೆಗೆದು ನೆನೆಸಿರುವ ಬಾದಾಮಿ ಬೀಜಗಳ ಹಾಕಿಕೊಳ್ಳಬೇಕು. ಬಾದಾಮಿಯ 10 ಕಾಳುಗಳನ್ನು ನೆನೆಸಿಟ್ಟು ಹಾಕಿಕೊಳ್ಳಿ. ಹಾಗೆ ಸ್ವಲ್ಪ ನೀರು ಸಹ ಹಾಕಿ, ಅರ್ಧ ಕಪ್ ಬೆಲ್ಲದ ಪುಡಿ ಸೇರಿಸಿ ಮತ್ತೆ ಸ್ವಲ್ಪ ನೀರು ಹಾಕಿ ರುಬ್ಬಬೇಕು.
ನುಣ್ಣಗೆ ಆಗುವವರೆಗೂ ಇದನ್ನು ರುಬ್ಬಬೇಕು. ನಂತರ ಒಂದು ಪಾತ್ರೆಗೆ ಜರಡಿ ಹಿಡಿದು ಅಥವಾ ಕಾಟನ್ ಬಟ್ಟೆ ಇಟ್ಟುಕೊಂಡು ಅದರ ಮೇಲೆ ಹಾಕಿಕೊಳ್ಳಬೇಕು. ಕೇವಲ ರಾಗಿ ಹಾಲನ್ನು ಮಾತ್ರ ಜರಡಿ ಹಿಡಿದು ತೆಗೆದುಕೊಳ್ಳಿ. ಈಗ ಉಳಿದ ರಾಗಿ ವೇಸ್ಟ್ ಅನ್ನು ಮತ್ತೆ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದೇ ರೀತಿ ಹಾಲು ತೆಗೆದುಕೊಳ್ಳಿ.
ಈಗ ಪಾತ್ರೆಯಲ್ಲಿನ ರಾಗಿ ಹಾಲಿಗೆ ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಫ್ರಿಡ್ಜ್‌ನಲ್ಲಿಡಿ ಇಲ್ಲವೆ ನೀರು ತುಂಬಿರುವ ಪಾತ್ರೆಯಲ್ಲಿ ಇಲ್ಲವೆ ತಣ್ಣೀರಿನಲ್ಲಿ ಅದ್ದಿರುವ ಬಟ್ಟೆಯನ್ನು ಸುತ್ತಿ ಇಡಿ. ಇದು ತಣ್ಣಗಾಗುತ್ತದೆ. ನಂತರ ನಿಮಗೆ ಬೇಕಿದ್ದರೆ ಯಾವುದಾದರು ಡ್ರೈ ಫ್ರೂಟ್ಸ್ ಹಾಕಿಕೊಂಡು ಇದನ್ನು ಸೇವಿಸಬಹುದು.
ನೀವು ಈ ದೇಹ ತಂಪಾಗಿಸುವಂತಹ ರಾಗಿ ಹಾಲು ಮನೆಯಲ್ಲಿ ಮಾಡಿ ನೋಡಿ. ಹಾಗೆ ಮಕ್ಕಳು, ಗರ್ಭಿಣಿಯರು, ಹಿರಿಯರು, ಎಲ್ಲರಿಗೂ ಇದನ್ನ ಸೇವಿಸಲು ನೀಡಬಹುದು.



Click it and Unblock the Notifications