ಮಸಾಲ ದೋಸೆಗೆ ಹೇಳಿ ಬೈ-ಬೈ! ಈ ಸ್ಪೆಷಲ್ ದೋಸೆ ಮಾಡಿ.. ತುಂಬಾ ಟೇಸ್ಟಿ ಮತ್ತು ಹೆಲ್ದಿ

Posted By:

ಮಸಾಲ ದೋಸೆಗೆ ಹೇಳಿ ಬೈ-ಬೈ. ಈ ಸ್ಪೆಷಲ್ ಕೆಂಪು ಬಣ್ಣದ ದೋಸೆ ಒಮ್ಮೆ ಟ್ರೈ ಮಾಡಿ. ನಿಮ್ಮ ಮಕ್ಕಳು ಬೀಟ್ರೂಟ್‌ ತಿನ್ನಲು ಹಠ ಮಾಡ್ತಾ ಇದ್ದರೆ, ಈ ದೋಸೆ (Dosa) ಮಾಡಿ. ಅದರ ಕಲರ್‌ ನೋಡಿಯೇ ಹೊಟ್ಟೆ ತುಂಬಾ ತಿನ್ನುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಟಿಫನ್ ​ಏನು ಮಾಡಬೇಕು ಎನ್ನುವುದು ಬಹುತೇಕ ಮಹಿಳೆಯರಿಗೆ ತಲೆನೋವು. ಪ್ರತಿ ದಿನ ಅದೇ, ಇಡ್ಲಿ, ದೋಸೆ, ಚಪಾತಿ ತಿಂದು ಬೇಜಾರ ಆಗಿರುತ್ತೀರಿ. ಇನ್ನು ಮನೆಗೆ ತಂದ ದಿನಸಿ ತಿಂಗಳ ಕೊನೆಯಲ್ಲಿ ಖಾಲಿ ಆಗಿರುತ್ತದೆ. ಈ ವೇಳೆ ಲೋ ಬಜೆಟ್‌ನಲ್ಲಿ ಯಾವ ಟಿಫನ್ ಮಾಡಬೇಕು. ಹೊರಗೆ ಸಿಗುವ ಟಿಫನ್ ಮನೆಯಲ್ಲಿಯೇ ಮಾಡುವುದು ಹೇಗೆ? ಡೋಂಟ್​ ವರಿ ಮಕ್ಕಳಿಗೆ ಟೇಸ್ಟಿ ಹಾಗೂ ಹೆಲ್ದಿ ತಿಂಡಿ ಮಾಡಿಕೊಡುವ ಐಡಿಯಾ ಇಲ್ಲಿದೆ.

ನೀವು ನಿತ್ಯ ಮಸಾಲೆ ದೋಸೆ ತಿಂದು ಬೇಸರಗೊಂಡಿರುತ್ತೀರಿ. ಹೊಸದಾಗಿ, ಆರೋಗ್ಯಕರ ಮತ್ತು ರುಚಿಕರವಾದ ಏನನ್ನಾದರೂ ತಿನ್ನಲು ಬಯಸಿದರೆ, ಓಟ್ಸ್ ಬೀಟ್‌ರೂಟ್ ದೋಸೆ (Beetroot Dosa) ಮಾಡಬಹುದು. ಈ ದೋಸೆ ಇತರೆ ಎಲ್ಲ ದೋಸೆಗಳಿಗಿಂತ ಭಿನ್ನ. ಏಕೆಂದರೆ, ಇದನ್ನು ಅಕ್ಕಿ ಅಥವಾ ಬೇಳೆಗಳ ಬದಲಿಗೆ ಓಟ್ಸ್ ಮತ್ತು ಬೀಟ್ರೂಟ್‌ ಬಳಸಿ ತಯಾರಿಸಲಾಗುತ್ತದೆ. ಓಟ್ಸ್ ಫೈಬರ್‌ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಇದು ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಬೀಟ್ರೂಟ್‌ ರಕ್ತವನ್ನು ಹೆಚ್ಚಿಸಲು ಮತ್ತು ದೇಹವನ್ನು ಶುದ್ಧೀಕರಿಸಲು ಪ್ರಯೋಜನಕಾರಿ. ಈ ದೋಸೆ ಹಗುರವಾಗಿರುತ್ತದೆ, ಬೇಗನೆ ತಯಾರಿಸಬಹುದು. ತೂಕ ಇಳಿಸಿಕೊಳ್ಳಲು ಅಥವಾ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮತ್ತೇಕೆ ತಡ, ಓಟ್ಸ್ ಬೀಟ್ರೂಟ್‌ ದೋಸೆ (Beetroot Dosa Recipe) ಮಾಡುವುದು ಹೇಗೆ ತಿಳಿಯೋಣ ಬನ್ನಿ.

How To Make Beetroot Dosa

ಓಟ್ಸ್ ಬೀಟ್ರೂಟ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

• ಓಟ್ಸ್ - ಅರ್ಧ ಕಪ್
• ಬೇಯಿಸಿದ ಬೀಟ್ರೂಟ್ - 1
• ದೋಸೆ ಹಿಟ್ಟು (ಅಕ್ಕಿ ಹಿಟ್ಟು) - ಅರ್ಧ ಕಪ್
• ಮೊಸರು - ಅರ್ಧ ಕಪ್
• ಹಸಿ ಮೆಣಸಿನಕಾಯಿ - 1 (ಸಣ್ಣಗೆ ಕತ್ತರಿಸಿದ)
• ಈರುಳ್ಳಿ - 1
• ಶುಂಠಿ - 1 ತುಂಡು
• ಜೀರಿಗೆ - ಅರ್ಧ ಸ್ಪೂನ್
• ಉಪ್ಪು - ರುಚಿಗೆ ತಕ್ಕಂತೆ
• ಎಣ್ಣೆ ಅಥವಾ ತುಪ್ಪ - ಸ್ವಲ್ಪ (ಹುರಿಯಲು)
• ನೀರು

Take a Poll

ಬೀಟ್ರೂಟ್ ದೋಸೆ ತಯಾರಿಸುವ ವಿಧಾನ

ಓಟ್ಸ್ ಬೀಟ್ರೂಟ್ ದೋಸೆ ಮಾಡುವ ಮೊದಲು, ಓಟ್ಸ್ ಅನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದಾದ ನಂತರ ಅದಕ್ಕೆ ಬೀಟ್ರೂಟ್ ಮತ್ತು ಮೊಸರು ಸೇರಿಸಿ. ಈಗ ಅಕ್ಕಿ ಹಿಟ್ಟು, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಹಿಟ್ಟು ತುಂಬಾ ದಪ್ಪವಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬಹುದು. ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಸಣ್ಣಗೆ ಹಚ್ಚಿದ ಕೊತ್ತಂಬರಿ, ಕರಿಬೇವಿನ ಎಲೆ ಮತ್ತು ಒಂದು ಸ್ಪೂನ್ ಜೀರಿಗೆ ಬಳಸಬಹುದು.

Healthy Beetroot Dosa

ಈಗ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಇದರ ಬಳಿಕ, ಒಂದು ಸೌಟು ಬ್ಯಾಟರ್ ತೆಗೆದುಕೊಂಡು ಅದನ್ನು ಬಾಣಲೆ ಮೇಲೆ ದುಂಡಗಿನ ಆಕಾರದಲ್ಲಿ ಚೆನ್ನಾಗಿ ಹರಡಿ. ಒಂದು ಸ್ಪೂನ್ ಎಣ್ಣೆಯನ್ನು ಅದರ ಮೇಲೆ ಹಾಕಿ ಹರಡಿ. ಅದನ್ನು ಮುಚ್ಚಿ 1 ರಿಂದ 2 ನಿಮಿಷ ಬೇಯಿಸಿ, ಬಳಿಕ ಅದನ್ನು ತಿರುಗಿಸಿ ಇನ್ನೊಂದು ಬದಿಯನ್ನು ಚೆನ್ನಾಗಿ ಫ್ರೈ ಮಾಡಿ. ದೋಸೆ ಗರಿಗರಿಯಾದಾಗ, ಅದನ್ನು ತೆಗೆದು ಒಂದು ತಟ್ಟೆಯಲ್ಲಿ ಇಡಿ. ಇಷ್ಟು ಮಾಡಿದರೆ, ಆರೋಗ್ಯಕರ ಮತ್ತು ರುಚಿಕರವಾದ ಓಟ್ಸ್ ಬೀಟ್ರೂಟ್ ರೆಡಿ. ಇದನ್ನು ಹಸಿರು ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಬಹುದು.

[ of 5 - Users]
Story first published: Sunday, June 15, 2025, 11:45 [IST]
X
Desktop Bottom Promotion