Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಬಾಯಲ್ಲಿ ನೀರು ತರಿಸುವಂತಹ ಪುದಿನ ಚಿಕನ್ ಮಾಡಿ ನೋಡಿ..! ಇಲ್ಲಿದೆ ಸುಲಭದ ಚಿಕನ್ ರೆಸಿಪಿ
ನಾನ್ ವೆಜ್ ಪ್ರಿಯರಿಗೆ ಚಿಕನ್‌ನಿಂದ ಮಾಡಿರುವ ಪ್ರತಿಯೊಂದು ಖಾದ್ಯಗಳೂ ಕೂಡ ಇಷ್ಟವಾಗುತ್ತೆ. ಚಿಕನ್ ಸಾರು, ಚಿಕನ್ ಗ್ರೇವಿ, ಚಿಕನ್ ಕಬಾಬ್, ಬಿರಿಯಾನಿ, ಚಿಕನ್ 65, ಚಿಕನ್ ಕರಿ ಹೀಗೆ ಚಿಕನ್‌ನಿಂದ ಹಲವು ರೀತಿಯ ಖಾದ್ಯ ರೆಡಿ ಮಾಡಿದ್ರೆ ಬಾಯಲ್ಲಿ ನೀರು ಬರುತ್ತೆ. ಕೆಲವರು ನಾನ್ ವೆಜ್ ಇಲ್ಲದೆ ಊಟ ಮಾಡುವುದೇ ಕಷ್ಟ ಎನ್ನುವುದನ್ನು ನೋಡಿರುತ್ತೇವೆ. ಹಾಗೆ ಅವರು ಎಲ್ಲಾ ಸಮಯದಲ್ಲಿ ನಾನ್ ವೆಜ್ ಸವಿಯಲು ಮುಂದಾಗೋದು ಹೆಚ್ಚು.
ಅದರಲ್ಲೂ ನಾವು ಮೇಲೆಯೇ ಹೇಳಿದಂತೆ ಬಗೆ ಬಗೆಯ ಚಿಕನ್ ಖಾದ್ಯ ನಾನ್ ಪ್ರಿಯರ ಬಾಯಲ್ಲಿ ನೀರು ತರಿಸುವುದು ಖಚಿತ. ಹಾಗೆ ಚಿಕನ್ ಅಗತ್ಯದಷ್ಟು ಸವಿದರೆ ದೇಹಕ್ಕೂ ಬಹಳ ಉತ್ತಮ. ಹಾಗೆ ಊಟದ ಜೊತೆಗೆ ಚಿಕನ್ ಸವಿಯುವುದು ಎಲ್ಲರ ಆಸೆಯಾಗಿರುತ್ತೆ. ಹೀಗಾಗಿ ನಾವಿಂದು ಚಿಕನ್‌ನಿಂದ ಮಾಡುವಂತಹ ವಿಭಿನ್ನ ಹಾಗೂ ವಿಶೇಷ ರೀತಿಯ ಖಾದ್ಯದ ಬಗ್ಗೆ ತಿಳಿದುಕೊಳ್ಳೋಣ.

ಇಂದು ಚಿಕನ್ ಪುದಿನ ಚಿಕನ್ ಮಾಡುವ ಕುರಿತಂತೆ ತಿಳಿಯೋಣ. ನೀವು ಚಿಕನ್ ಲಿವರ್ ಸವಿಯುವ ಮುಂದಿ ಆಗಿದ್ದರೆ ಪುದಿನ ಸೊಪ್ಪು ಹಾಕಿ ಮಾಡುವ ಲಿವರ್ ಎಷ್ಟು ರುಚಿ ನೀಡಲಿದೆ ಎಂಬುದು ತಿಳಿದಿರಬಹುದು. ಹಾಗೆ ನಾವಿಂದು ಈ ಪುದಿನ ಚಿಕನ್ ಗ್ರೇವಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಪುದಿನ ಚಿಕನ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ರೀತಿಯ ಚಿಕನ್ ಮಾಡಿದ್ರೆ ಯಾವುದೇ ಖಾದ್ಯದ ಜೊತೆಗೂ ಸವಿಯಬಹುದು.
ಪುದಿನ ಚಿಕನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
- ಚಿಕನ್
- ಪುದಿನ
- ಈರುಳ್ಳಿ
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ಕಾಳು ಮೆಣಸಿನ ಪುಡಿ
- ಕರಿಬೇವು
- ಚಕ್ರಮೊಗ್ಗು
- ದಾಲ್ಚಿನ್ನಿ ಅಥವಾ ಚಕ್ಕೆ
- ಲವಂಗ
- ಏಲಕ್ಕಿ
- ಶುಂಠಿ
- ಬೆಳ್ಳುಳ್ಳಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಪುದಿನ ಚಿಕನ್ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಬೆಳ್ಳುಳ್ಳಿ, ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಲವಂಗ, ಕಾಳು ಮೆಣಸು, ಪಲಾವ್ ಎಲೆ, ಚಕ್ಕೆ, ಚಕ್ರಮೊಗ್ಗು, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಕೂಡ ಹಾಕಿ ಫ್ರೈ ಮಾಡಿಕೊಳ್ಳಿ.
ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿದ ಬಳಿಕ ಚೆನ್ನಾಗಿ ತೊಳದು ಇಟ್ಟುಕೊಂಡಿರುವ ಚಿಕನ್ ಫೀಸ್‌ಗಳನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದರ ಮೇಲೆ ಅರಶಿಣ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಫ್ರೈ ಮಾಡಿಕೊಳ್ಳಬೇಕು. 5ರಿಂದ 6 ನಿಮಿಷದ ಬಳಿಕ ಇದಕ್ಕೆ ಮಿಕ್ಸಿ ಜಾರ್‌ನಲ್ಲಿ ರುಬ್ಬಿದ್ದ ಮಸಾಲೆಯನ್ನು ಹಾಕಿ.
ಹಾಗೆ ಸ್ವಲ್ಪವೇ ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಇದಕ್ಕೆ ಖಾರದ ಪುಡಿ, ಕರಿ ಮೆಣಸಿನ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಆಗಾಗ ತಳ ಹಿಡಿಯದಂತೆ ತಿರುಗಿಸುತ್ತಾ ಇರಿ. ಹಾಗೆ ಗಟ್ಟಿಯಾಗಿದೆ ಎನಿಸಿದರೆ ನೀರು ಕೂಡ ಹಾಕಿಕೊಳ್ಳಿ.
ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪುದಿನ ಚಿಕನ್ ಗ್ರೇವಿ ರೆಡಿಯಾಗುತ್ತದೆ. ಇದು ಊಟ, ಬಿರಿಯಾನಿ, ಚಪಾತಿ ಜೊತೆಗೆ ಸವಿಯಲು ಬಹಳ ರುಚಿ ನೀಡಲಿದೆ, ನೀವು ಕೂಡ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಈ ರುಚಿಯಲ್ಲಿ ಮಾಡಿದರೆ ಎಲ್ಲರಿಗೂ ಇಷ್ಟವಾಗೋದು ಖಚಿತ.



Click it and Unblock the Notifications