ಒಂದೇ ಒಂದು ಆಲೂಗಡ್ಡೆಯಿಂದ ಮಾಡಿ ಈ ದೋಸೆ..! 5 ನಿಮಿಷದಲ್ಲಿ ರೆಡಿಯಾಗುತ್ತೆ ತಿಂಡಿ

Posted By:

ಈಗ ಬೆಳಗ್ಗೆ ತಿಂಡಿ ಮಾಡೋದು ಏನು? ಹೇಗೆ ಮಾಡಬೇಕು ಅನ್ನೋದು ಪ್ರತಿಯೊಬ್ಬ ಗೃಹಿಣಿಯ ಪ್ರಶ್ನೆಯಾಗಿರುತ್ತೆ. ಯಾಕಂದ್ರೆ ಬೆಳಗ್ಗೆ ಎದ್ದಾಗ ನೂರಾರು ರೀತಿ ಸಮಸ್ಯೆಗಳಿರುತ್ತೆ. ಇರುವ ಕಡಿಮೆ ಸಮಯದಲ್ಲಿ ಬೇಗ ಬೇಗ ಕೆಲಸ ಮಾಡಬೇಕಾಗಿರುತ್ತೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಕೆಲಸಕ್ಕೆ ಕಳುಹಿಸುವುದು, ಪತಿಯ ಕೆಲಸಕ್ಕೆ ತಯಾರಿ ಹೀಗೆ ಕಡಿಮೆ ಸಮಯದಲ್ಲಿ ಒತ್ತಡದ ಕೆಲಸ ಮಾಡಬೇಕಾಗುತ್ತೆ.

ಹೀಗಾಗಿ ರಗಳೆಗಳೇ ಬೇಡ ಅಂತ ಅವರು ಒಂದು ದಿನ ಮೊದಲೇ ಮಾರನೆ ದಿನದ ಬೆಳಗ್ಗೆಯ ತಿಂಡಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿರುತ್ತಾರೆ, ಬಹುತೇಕ ಸಮಯದಲ್ಲಿ ಪೂರ್ವ ನಿಗಧಿಯಂತೆ ತಿಂಡಿ ಮಾಡಿರುತ್ತಾರೆ. ಕೆಲವೊಮ್ಮೆ ಮಾತ್ರವೇ ಬೆಳಗ್ಗೆ ಎದ್ದು ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತಾರೆ.

How To Make Potato Dosa Recipe In 5 Minutes At Home

ಆದ್ರೆ ಸುಲಭವಾಗಿ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ ಯಾವ ತಿಂಡಿ ಮಾಡಬಹುದು ಎಂಬುದನ್ನೇ ಅವರು ಮೊದಲು ಆಲೋಚಿಸುತ್ತಾರೆ. ಹಾಗೆ ರುಚಿಯಲ್ಲೂ ಬೊಂಬಾಟ್ ಆಗಿರಬೇಕು ಎಂಬುದು ಅವರ ಆಸೆಯಾಗಿರುತ್ತೆ. ಇಂತಹ ಗೃಹಿಣಿಯರಿಗಾಗಿಯೇ ನಾವಿಂದು ಒಂದೇ ಒಂದು ಆಲೂಗಡ್ಡೆ ಇದ್ದರೂ ಮಾಡಬಹುದಾದ ವಿಶೇಷ ರೆಸಿಪಿಯನ್ನ ನಿಮ್ಮ ಮುಂದಿಡುತ್ತಿದ್ದೇವೆ.

ಹೌದು ಒಂದು ಆಲೂಗಡ್ಡೆ ಹಾಗೂ ಕೆಲವೇ ವಸ್ತು ಇದ್ದರೂ ಸಾಕು ಈ ದೋಸೆ ಮಾಡಬಹುದು. ರುಚಿಯಲ್ಲೂ ತುಂಬಾನೆ ಚೆನ್ನಾಗಿರುವ ಜೊತೆಗೆ ಮಾಡೋಕೆ ಕೆಲವೇ ನಿಮಿಷಗಳು ಸಾಕಾಗುತ್ತದೆ. ಹಾಗಾದರೆ ಈ ದೋಸೆಯನ್ನ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಬೇಕು ಎಂಬ ಎಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಆಲೂ ದೋಸೆ ಮಾಡಲು ಬೇಕಾಗುವ ವಸ್ತುಗಳು

  • ಆಲೂಗಡ್ಡೆ (ಬೇಯಿಸಿದ ಮತ್ತು ತುರಿದ)-1
  • ಗೋಧಿ ಹಿಟ್ಟು - 1 ಕಪ್
  • ಇಂಗು - 1/4 ಟೀಸ್ಪೂನ್
  • ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
  • ಅರಿಶಿನ ಪುಡಿ - 1/4 ಟೀಸ್ಪೂನ್
  • ಕೆಂಪು ಮೆಣಸಿನ ಪುಡಿ - 1/4 ಟೀಸ್ಪೂನ್
  • ಕರಿಬೇವಿನ ಎಲೆಗಳು - 1 tbs
  • ಚಿಲ್ಲಿ ಫ್ಲೇಕ್ಸ್ - 1/2 ಟೀಸ್ಪೂನ್
  • ಹಸಿರು ಮೆಣಸಿನಕಾಯಿ (ಕತ್ತರಿಸಿದ) - 1
  • ಕೊತ್ತಂಬರಿ ಸೊಪ್ಪು - 2 ಚಮಚ
  • ಕ್ಯಾರೆಟ್ - 1
  • ಈರುಳ್ಳಿ - 1
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1/2 ಟೀಸ್ಪೂನ್
  • ಅಡುಗೆ ಎಣ್ಣೆ
  • ರುಚಿಗೆ ಉಪ್ಪು

ಆಲೂ ದೋಸೆ ಮಾಡುವ ವಿಧಾನ

ಮೊದಲು ಒಂದು ಆಲೂಗಡ್ಡೆಯನ್ನ ಬೇಯಿಸಿ ಅದರ ಸಿಪ್ಪೆ ತೆಗೆದು ಚೆನ್ನಾಗು ಪುಡಿ ಮಾಡಿ ಹಿಟ್ಟಿನಂತೆ ಮಾಡಿಕೊಳ್ಳಿ. ಅದನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಗೋಧಿ ಹಿಟ್ಟು, ಇಂಗು, ಗರಂ ಮಸಾಲ, ಖಾರದ ಪುಡಿ, ಅರಶಿನ, ಚಿಕ್ಕದಾಗಿ ಕತ್ತರಿಸಿಕೊಂಡ ಕರಿಬೇವು, ಚಿಲ್ಲಿ ಫ್ಲೇಕ್ಸ್, ಹಸಿಮೆಣಸು, ಕ್ಯಾರೆಟ್ (ತುರಿದಿರುವುದು) ಹಾಗೂ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ರೆಡಿ ಮಾಡಿಕೊಳ್ಳಿ. ತೆಳುವಾಗಿಯೂ, ದಪ್ಪವಾಗಿಯೂ ಇರಬಾರದು. ಹೀಗೆ ಹಿಟ್ಟು ರೆಡಿ ಮಾಡಿಕೊಳ್ಳಿ. ಇದು ಗೋಧಿ ಅಥವಾ ರಾಗಿ ದೋಸೆಗೆ ಮಾಡಿಕೊಳ್ಳುವ ಹಿಟ್ಟಿನಂತೆ ಆಗಿರುತ್ತದೆ.

ಬಳಿಕ ಕಾವಲಿ ಚೆನ್ನಾಗಿ ಕಾಯಲು ಇಟ್ಟು ಬಳಿಕ ಹಿಟ್ಟನ್ನು ಮಧ್ಯದಲ್ಲಿ ಹಾಕಿ ಮೇಲೆ ಮುಚ್ಚಿ 5 ನಿಮಿಷ ಕಾಯಲು ಬಿಡಬೇಕು ಒಂದು ಕಡೆ ರೋಸ್ಟ್‌ ಮಾಡಿ ಮತ್ತೊಂದು ಕಡೆ ಬೇಯಲು ಬಿಡಿ. ಹೀಗೆ ಎರಡೂ ಕಡೆ ಬೇಯಿಸಿ ಚಟ್ನಿ ಜೊತೆ ಸವಿಯಲು ಇಟ್ಟರೆ ಇದರ ರುಚಿ ಬೊಂಬಾಟ್ ಆಗಿರಲಿದೆ.

[ of 5 - Users]
Story first published: Monday, July 29, 2024, 11:55 [IST]
X
Desktop Bottom Promotion