Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ
ಯುಗಾದಿ ಹಬ್ಬ ಅಂದ್ರೆ ಅಲ್ಲಿ ಸಂಭ್ರಮ ಇದ್ದೇ ಇರಲಿದೆ. ಈ ಹಬ್ಬದಲ್ಲಿ ನೀವು ಹಲವು ರೀತಿಯ ಸಿಹಿ ತಿಂಡಿಯೊಂದಿಗೆ ಆಚರಿಸುವುದು ನೋಡಬಹುದು. ಬಹುತೇಕರು ಹೋಳಿಗೆ ಮಾಡುವುದು ಕಾಮನ್. ಹಾಗೆ ಯುಗಾದಿಯಲ್ಲಿ ಸಿಹಿ ಪಾಯಸ ಮಾಡುವುದು ಸಹ ನೋಡಿರುತ್ತೇವೆ. ಹಬ್ಬದ ಊಟದಲ್ಲಿ ಪಾಯಸ ಮಾಡಿಯೇ ಮಾಡುತ್ತಾರೆ. ಪಾಯಸದಲ್ಲಿ ಹತ್ತಾರು ಬಗೆ ಇವೆ. ಆದ್ರೆ ಸುಲಭದ ಹಾಗೆ ರುಚಿ ರುಚಿಯಾದ ಪಾಯಸ ಮಾಡುವ ಕುರಿತು ತಿಳಿದುಕೊಳ್ಳೋಣ.
ಪಾಯಸಗಳಲ್ಲಿ ನಾವಿಂದು ಸುಲಭವಾಗಿ ಮಾಡುವ ಹಾಗೆ ಎಲ್ಲರಿಗೂ ಇಷ್ಟವಾಗುವ ಗಸೆಗಸೆ ಪಾಯಸ ಮಾಡುವ ಕುರಿತು ತಿಳಿಯೋಣ. ಗಸೆ ಗಸೆಯಿಂದ ಮಾಡುವ ಈ ಪಾಯಸ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಹಬ್ಬದ ಸಂಭ್ರಮ ದುಪ್ಪಟ್ಟಾಗಿಸುವುದು ಖಚಿತ. ಹಾಗೆ ಇದನ್ನು ಮಾಡುವುದು ಕೂಡ ಬಹಳ ಸುಲಭ. ಹೀಗಾಗಿ ಈ ಯುಗಾದಿ ಹಬ್ಬದಲ್ಲಿ ಗಸೆಗಸೆ ಪಾಯಸ ಮಾಡುವುದು ಹೇಗೆ? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈ ಹಬ್ಬದ ಸಮಯದಲ್ಲಿ ಗಸೆ ಗಸೆ ಪಾಯಸ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳ ಅಗತ್ಯವಿದೆ? ಎಷ್ಟು ಸಮಯ ಹಿಡಿಯಲಿದೆ ಹಾಗೆ ಯಾವ ಪ್ರಮಾಣದಲ್ಲಿ ಪದಾರ್ಥಗಳ ಹಾಕಿ ಮಾಡಬೇಕು ಎಂಬ ಕುರಿತಾಗಿ ಇಲ್ಲಿ ತಿಳಿದುಕೊಳ್ಳಿ.
ಗಸೆ ಗಸೆ ಪಾಯಸ ಮಾಡಲು ಬೇಕಾಗುವ ವಸ್ತುಗಳು
- ಗಸೆ ಗಸೆ
- ತುಪ್ಪ
- ಗೋಡಂಬಿ
- ದ್ರಾಕ್ಷಿ
- ಬಾದಾಮಿ
- ಅಕ್ಕಿ
- ಹಾಲು
- ಏಲಕ್ಕಿ
ಗಸೆ ಗಸೆ ಪಾಯಸ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅಕ್ಕಿ ಹಾಕಿ ಹುರಿದುಕೊಳ್ಳಬೇಕು. 1 ನಿಮಿಷ ಹುರಿದು ಬಳಿಕ ಇದಕ್ಕೆ ಗಸೆಗಸೆ ಸಹ ಸೇರಿಸಿಕೊಂಡು ಮತ್ತೆ 1 ನಿಮಿಷ ಹುರಿದುಕೊಂಡು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಬೆಲ್ಲ ಹಾಕಿ ನೀರು ಸಹ ಹಾಕಿ ಕರಗಲು ಬಿಡಿ. ಈಗ ಇನ್ನೊಂದು ಮಿಕ್ಸಿ ಜಾರ್ಗೆ ತೆಂಗಿನಕಾಯಿ, ನೆನೆಸಿಟ್ಟ ಗೋಡಂಬಿ, ಬಾದಾಮಿ, ಏಲಕ್ಕಿ, ಹಾಗೆ ತಣ್ಣಗಾಗಿರುವ ಗಸೆಗಸೆ ಅಕ್ಕಿಯನ್ನು ಹಾಕಿ ರುಬ್ಬಿಕೊಳ್ಳಬೇಕು.
ಮೊದಲು ತರಿ ತರಿಯಾಗಿ ಪುಡಿ ಮಾಡಿಕೊಂಡು ಅನಂತರ ಸ್ವಲ್ಪ ಹಾಲು ಮತ್ತು ನೀರು ಹಾಕಿಕೊಂಡು ಪೇಸ್ಟ್ ರೂಪದಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ರುಬ್ಬಿದ ಈ ಮಿಶ್ರಣವನ್ನು ಒಲೆ ಮೇಲಿನ ಬೆಲ್ಲದ ನೀರಿಗೆ ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಇದಕ್ಕೆ ಸ್ವಲ್ಪ ಹಾಲು ಸಹ ಹಾಕಿಕೊಳ್ಳಿ. ಹಾಗೆ ಜಾರ್ಗೆ ನೀರು ಹಾಕಿ ತೊಳೆದು ಅದನ್ನು ಕೂಡ ಹಾಕಿಕೊಳ್ಳಿ.
ಈ ಮಿಶ್ರಣ ಕುದಿಬರಲು ಬಿಡಿ. 3ರಿಂದ 4 ನಿಮಿಷ ಕುದಿಬರಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇದು ಸ್ವಲ್ಪ ಗಟ್ಟಿಯಾಗುತ್ತದೆ. ಈಗ ಒಲೆ ಆಫ್ ಮಾಡಿ ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಗಸೆಗಸೆ ಪಾಯಸಕ್ಕೆ ಹಾಕಿಕೊಂಡು ಒಲೆ ಮೇಲೆ ಇಟ್ಟು 1 ನಿಮಿಷ ಹಾಗೆಯೆ ಬಿಸಿಯಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಗಸೆಗಸೆ ಪಾಯಸ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಈ ಪಾಯಸ ಮಾಡಿ ಸವಿದು ನೋಡಿ. ಇದೊಂದು ಸುಲಭದ ಹಾಗೆ ಎಲ್ಲರಿಗೂ ಇಷ್ಟವಾಗುವ ಪಾಯಸ. ಮಕ್ಕಳಿಗೂ ಇಷ್ಟವಾಗುವ ಜೊತೆಗೆ ಆರೋಗ್ಯಕ್ಕೂ ಸಹ ಇದು ಬಹಳ ಉತ್ತಮವಾಗಿರಲಿದೆ.



Click it and Unblock the Notifications
