Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
ಮಸಾಲೆ ಪೊಂಗಲ್ ಅಥವಾ ಖಾರಾ ಪೊಂಗಲ್ ಎಂದು ಕರೆಯಲಾಗುವ ಈ ತಿನಿಸು ದಕ್ಷಿಣ ಭಾರತೀಯರ ಖಾದ್ಯವಾಗಿದೆ. ಇದನ್ನು ವೆನ್ ಪೊಂಗಲ್ ಎಂದೂ ಸಹ ಕರೆಯುತ್ತಾರೆ. ಇದನ್ನು ಮುಖ್ಯವಾಗಿ ನೈವೇದ್ಯದ ತಿನಿಸನ್ನಾಗಿ ತಯಾರಿಸುತ್ತಾರೆ. ಮುಂಜಾನೆಯ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನಾಗಿಯೂ ಸೇವಿಸುತ್ತಾರೆ. ಇದರಲ್ಲಿ ತುಪ್ಪದ ಪೊಂಗಲ್ ಸಾಮಾನ್ಯವಾದದ್ದು. ಬಾಯಲ್ಲಿ ಇಟ್ಟರೆ ಕರಗುವಂತಹ ಈ ತಿಸಿಸು ದಕ್ಷಿಣ ಭಾರತದವರ ಅಚ್ಚು ಮೆಚ್ಚಿನ ಉಪಹಾರಗಳಲ್ಲಿ ಒಂದು ಎಂದು ಹೇಳಬಹುದು.
ಇಂದಿಗೂ ಹಲವು ದೇವಾಲಯದಲ್ಲಿ ಇದೇ ಪೊಂಗಲ್ ಪ್ರಸಾದವಾಗಿ ಭಕ್ತರ ಹೊಟ್ಟೆ ಸೇರುತ್ತಿದೆ. ಮಸಾಲೆಯ ಪೊಂಗಲ್‍ಅನ್ನು ಅನ್ನ ಹಾಗೂ ಹೆಸರು ಬೇಳೆಯ ಮಿಶ್ರಣದಿಂದ ಕೂಡಿರುತ್ತದೆ. ಇದರಲ್ಲಿ ಬೆರೆಸುವ ಮಸಾಲೆ ಮತ್ತು ತುಪ್ಪ ಇದರ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ದೇವರ ನೈವೇದ್ಯಕ್ಕೆ ಬಹಳ ಸುಲಭವಾಗಿ ತಯಾರಿಸಬಹುದು. ಆರೋಗ್ಯಕ್ಕೆ ಉತ್ತಮವಾದ ಈ ತಿನಿಸನ್ನು ನೀವು ಸಹ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.

ಹಾಗಾದ್ರೆ ಮಸಾಲೆ ಭರಿತ ಖಾರ ಪೊಂಗಲ್ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳೇನು? ಎಷ್ಟು ಸಮಯ ಹಿಡಿಯುತ್ತೆ. ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಮಸಾಲೆ ಪೊಂಗಲ್ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಬೇಳೆ - 3/4 ಕಪ್
- ಹಸಿ ಬಟಾಣಿ
- ಅಕ್ಕಿ -3/4 ಕಪ್
- ಹೆಸರು ಬೇಳೆ - ಅರ್ಧ ಕಪ್
- ಕ್ಯಾರೆಟ್
- ಜೀರಿಗೆ -1 ಟೀ ಚಮಚ
- ಶುಂಠಿ- 1 ಇಂಚು (ತುರಿದಿರುವುದು)
- ಕರಿಬೇವು/ಒಗ್ಗರಣೆ ಸೊಪ್ಪು- 8-9
- ಹಸಿ ಮೆಣಸಿನ ಕಾಯಿ - 5-6
- ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 1/2 ಕಪ್
- ಕಾಳು ಮೆಣಸಿನ ಪುಡಿ -3/4 ಟೀ ಚಮಚ
- ಗೋಡಂಬಿ - 8-10
- ಅರಿಶಿನ ಪುಡಿ-3/4 ಕಪ್
- ಉಪ್ಪು- 3/4 ಟೇಬಲ್ ಚಮಚ
- ತುಪ್ಪ- 1, 1/4 ಟೇಬಲ್ ಚಮಚ
- ನೀರು - 6ಕಪ್+ 1ಕಪ್
ಮಸಾಲೆ ಪೊಂಗಲ್ ಮಾಡುವ ವಿಧಾನ
ಒಂದು ಕುಕ್ಕರ್‌ನಲ್ಲಿ ಅಕ್ಕಿ ಹಾಕಿ, ಅದಕ್ಕೆ ಹೆಸರು ಬೇಳೆಯನ್ನು ಸೇರಿಸಿ, 3 ನಿಮಿಷಗಳ ಕಾಲ ಹುರಿಯಿರಿ. ಅದಕ್ಕೆ ಅಳತೆಗೆ ತಕ್ಕಷ್ಟು ಕಪ್ ನೀರನ್ನು ಸೇರಿಸಿ. ಒಮ್ಮೆ ತಿರುವಿ, ನಂತರ ಮುಚ್ಚಳವನ್ನು ಮುಚ್ಚಿ. ಕುಕ್ಕರ್ 4-5 ಸೀಟಿ ಕೂಗಲು ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ, ಬಿಸಿ ಮಾಡಿ.
ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ. ತುರಿದುಕೊಂಡ ಶುಂಠಿ ಮತ್ತು ಸೀಳಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ. ಒಮ್ಮೆ ಚೆನ್ನಾಗಿ ತಿರುವಿ. ಕಾಳು ಮೆಣಸಿನ ಪುಡಿ ಮತ್ತು ಗೋಡಂಬಿಯನ್ನು ಸೇರಿಸಿ. ನಂತರ ಅರಿಶಿನವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಸೇರಿಸಿ. ಒಂದು ಕಪ್ ನೀರನ್ನು ಸೇರಿಸಿ, ಎಲ್ಲಾ ಸಾಮಾಗ್ರಿಗಳು ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಶ್ರಗೊಳಿಸಿ.
ನಂತರ 5 ನಿಮಿಷಗಳ ಕಾಲ ಬೇಯಲು ಬಿಡಿ. ಹೆಚ್ಚಿಕೊಂಡ ಕೊತ್ತಂಬರಿಸೊಪ್ಪನ್ನು ಸೇರಿಸಿ, ಮಿಶ್ರಣ ಮಾಡಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಉರಿಯಿಂದ ಕೆಳಗಿಳಿಸಿ. ಒಂದು ಬೌಲ್‍ಗೆ ವರ್ಗಾಯಿಸಿ. ಇಷ್ಟಾದರೆ ನಿಮ್ಮ ಮುಂದೆ ಬಿಸಿ ಬಿಸಿ ಪೊಂಗಲ್ ರೆಡಿಯಾಗಿರುತ್ತದೆ. ನಂತರ ಇದನ್ನು ಬಿಸಿ ಇರುವಾಗಲೆ ಸವಿಯಲು ನೀಡಿ.
ಇದಕ್ಕೆ ನಿಮ್ಮಿಷ್ಟದ ತರಕಾರಿಯನ್ನು ಹಾಕಿ ಮಾಡಬಹುದು, ಈ ತರಕಾರಿಯನ್ನು ಬಳಸದೆಯೂ ಸಹ ಮಾಡಬಹುದು. ಗಮನಿಸಿ ನಿಮಗೆ ಹೆಚ್ಚು ಗಟ್ಟಿಯಾದ ಪೊಂಗಲ್ ಬೇಕಾದರೆ ಕಡಿಮೆ ನೀರು ಹಾಕಿ ಮಾಡಬೇಕು.



Click it and Unblock the Notifications