Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಒಂದು ವರ್ಷ ಇಟ್ಟರೂ ಹಾಳಾಗಲ್ಲ ಈ ಪುಳಿಯೋಗರೆ ಪುಡಿ..! ಮಾಡುವ ವಿಧಾನವೇನು?
ಸಾಮಾನ್ಯವಾಗಿ ನಾವು ಬೆಳಗ್ಗೆ ತಿಂಡಿಗೆ ಸುಲಭವಾಗಿ ಮಾಡಬಹುದಾದ ತಿಂಡಿಯನ್ನೇ ಆಯ್ಕೆ ಮಾಡಿಕೊಳ್ಳುವುದನ್ನು ನೋಡಿರುತ್ತೇವೆ. ಏಕೆಂದರೆ ಬೆಳಗ್ಗೆ ಕಡಿಮೆ ಸಮಯದಲ್ಲಿ ಗಡಿಬಿಡಿಯಲ್ಲಿ ತಿಂಡಿ ರೆಡಿ ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲರು ಸುಲಭವಾಗಿ ಯಾವ ತಿಂಡಿ ಮಾಡಬಹುದು ಎಂಬ ಆಲೋಚನೆಯಲ್ಲೇ ಇರುತ್ತಾರೆ. ಇನ್ನು ಕೆಲವು ಬಾರಿ ಬೆಳಗ್ಗೆ ತಿಂಡಿಗೆ ಹಿಂದಿನ ದಿನವೇ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.
ಇನ್ನು ಗಡಿ ಬಿಡಿಯ ಸಮಯದಲ್ಲಿ ತಿಂಡಿ 10 ನಿಮಿಷದಲ್ಲಿ ಮಾಡುವಂತಿದ್ದರೆ ಹೇಗೆ? ಹೌದು ಮೊದಲೇ ನಾವು ಸಿದ್ಧತೆ ನಡೆಸಿದ್ದರೆ ತಿಂಡಿ 10 ನಿಮಿಷದಲ್ಲಿ ಮಾಡಬಹುದು. ಅದರಲ್ಲೂ ನಾವು ಪುಳಿಯೋಗರೆ ಪುಡಿಯನ್ನು ಮೊದಲೇ ಮಾಡಿ ಇಟ್ಟಿದ್ದರೆ ಬೆಳಗ್ಗೆಯ ತಿಂಡಿ 10 ನಿಮಿಷದಲ್ಲಿ ಮಾಡಬಹುದು. ಅದ್ರೆ ಈಗ ಅಂಗಡಿಯಲ್ಲಿಯೂ ಈ ಪುಳಿಯೋಗರೆ ಪುಡಿ ಸಿಗುತ್ತದೆ. ಇದನ್ನು ತಂಡು ಮನೆಯಲ್ಲಿ ಮಾಡುತ್ತೇವೆ.

ಆದ್ರೆ ನಾವು ಮನೆಯಲ್ಲಿಯೇ ಮಾಡಿದ ಪುಡಿಯಿಂದ ತಿಂಡಿ ಮಾಡಿದರೆ ರುಚಿಯೂ ಹೆಚ್ಚಾಗುತ್ತದೆ. ಇನ್ನು ನಾವಿಂದು ಹೇಳುತ್ತಿರುವ ವಿಧಾನದಲ್ಲಿ ಪುಳಿಯೋಗರೆ ಪುಡಿ ಮಾಡಿಟ್ಟರೆ ಒಂದು ವರ್ಷದವರೆಗೂ ಮನೆಯಲ್ಲಿ ಶೇಖರಿಸಿಟ್ಟು ನಿಮಗೆ ಬೇಕಾದಾಗ ಪುಳಿಯೋಗರೆ ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಪುಳಿಯೋಗರೆ ಪುಡಿ ಮಾಡುವುದು ಹೇಗೆ?
ಮನೆಯಲ್ಲಿ ಪುಳಿಯೋಗರೆ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುಳಿಯೋಗರೆ ಪುಡಿ ಮಾಡಲು ಬೇಕಾಗುವ ವಸ್ತುಗಳು
- ಒಣ ಮೆಣಸು
- ಕರಿಬೇವು
- ಇಂಗು
- ಕಡಲೆ ಬೇಳೆ
- ಕಡಲೆ ಬೀಜ
- ಮೆಂತ್ಯ
- ಸಾಸಿವೆ
- ಜೀರಿಗೆ
- ಒಣ ಕೊಬ್ಬರಿ
- ಎಳ್ಳು
- ಕೊತ್ತಂಬರಿ ಕಾಳು
- ಉದ್ದಿನ ಬೇಳೆ
- ಹುಣಸೆಹುಳಿ
- ಬೆಲ್ಲ
- ಉಪ್ಪು
ಪುಳಿಯೋಗರೆ ಪುಡಿ ಮಾಡುವ ವಿಧಾನ
ಮೊಲದು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ. ಬಳಿಕ ಇದಕ್ಕೆ ಒಣ ಮೆಣಸು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಘಾಟು ಬರುವಂತೆ ಹುರಿಯಿರಿ, ಗುಂಟೂರು ಮೆಣಸು ಹಾಕಿದರೆ ಉತ್ತಮ. ಸಣ್ಣ ಉರಿಯಲ್ಲಿ ಹೀಗೆ ಮಾಡಿ. ಬಳಿಕ ಕರಿಬೇವು, ಇಂಗು ಹಾಕಿ 3 ನಿಮಿಷ ಫ್ರೈ ಮಾಡಿ. ಈಗ ಈ ಮಸಾಲೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ.
ಈಗ ಇದೇ ಪಾತ್ರೆಗೆ ಮೆಂತ್ಯ, ಸಾಸಿವೆ, ಕರಿಮೆಣಸು ಸಹ ಜಾಕಿ ಫ್ರೈ ಮಾಡಿ. 3 ನಿಮಿಷ ಫ್ರೈ ಮಾಡಿ ಮೊದಲ ತೆಗದಿಟ್ಟ ಮೆಣಸಿನ ಜೊತೆಗೆ ಹಾಕಿಕೊಳ್ಳಿ. ಈಗ ಇದೇ ಪಾತ್ರೆಗೆ ಕಪ್ಪು ಎಳ್ಳು ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿ ಅದೇ ಪಾತ್ರೆಗೆ ಹಾಕಿಕೊಳ್ಳಿ.
ಈಗ ಧನಿಯಾ ಅಥವಾ ಕೊತ್ತಂಬರಿ ಕಾಳನ್ನು ಇದೇ ಪಾತ್ರೆಗೆ ಹಾಕಿ ಫ್ರೈ ಮಾಡಿಕೊಳ್ಳಿ. 3ರಿಂದ 4 ನಿಮಿಷ ಫ್ರೈ ಮಾಡಿಕೊಂಡು ಬಳಿಕ ಇದನ್ನು ಸಹ ಅದೇ ಪಾತ್ರೆಗೆ ಹಾಕಿಕೊಳ್ಳಿ. ಈಗ ಮತ್ತೆ 50 ಗ್ರಾಂ ಜೀರಿಗೆ ಸಹ ಹಾಕಿ ಫ್ರೈ ಮಾಡಿ. ಇಲ್ಲಿ ಎಲ್ಲಾ ವಸ್ತುಗಳನ್ನು ಬೇರೆ ಬೇರೆಯಾಗಿಯೇ ಫ್ರೈ ಮಾಡಿಕೊಂಡು ಒಂದೇ ಪಾತ್ರೆಗೆ ಹಾಕಿಕೊಳ್ಳಿ.
ಈಗ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆ ಹಾಕಿಕೊಂಡು 10 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈಗ ಇದನ್ನು ಬೇರೆ ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಅರ್ಧ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಒಣ ಕೊಬ್ಬರಿಯನ್ನು ಫ್ರೈ ಮಾಡಿ ಬೇರೆ ಬೌಲ್‌ಗೆ ಹಾಕಿಟ್ಟುಕೊಳ್ಳಿ. 100 ಗ್ರಾಂ ಹುಣಸೆ ಹುಳಿಯನ್ನು ಸಹ ಫ್ರೈ ಮಾಡಿಕೊಳ್ಳಿ. 5 ನಿಮಿಷ ಫ್ರೈ ಮಾಡಿಕೊಂಡರೆ ಸಾಕು.
ಒಂದು ಪಾತ್ರೆಯಲ್ಲಿ ಇಟ್ಟಿರು ಎಲ್ಲಾ ಹುರಿದ ಪದಾರ್ಥವನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಕಡಲೆ ಬೇಳೆ ಉದ್ದಿನ ಬೇಳೆ ಸಹ ಪುಡಿ ಮಾಡಿಕೊಂಡು ಒಂದೇ ಪಾತ್ರೆಗೆ ಹಾಕಿಕೊಳ್ಳಿ. ಹಾಗೆ ಹುಣಸೆ ಹಣ್ಣನ್ನು ಸಹ ಪುಡಿ ಮಾಡಿಕೊಳ್ಳಿ. ಇದಕ್ಕೆ 4 ಸ್ಪೂನ್ ಬೆಲ್ಲದ ಪುಡಿ ಸಹ ಸೇರಿಸಿಕೊಳ್ಳಿ. ಇದಕ್ಕೆ ಉಪ್ಪು ಹಾಕಿ ಮತ್ತೆ ಪುಡಿ ಮಾಡಿಕೊಳ್ಳಿ. ಕೊಬ್ಬರಿ ಸಹ ಪುಡಿ ಮಾಡಿಕೊಳ್ಳಿ. ಈಗ ಪುಡಿ ಮಾಡಿದ ಎಲ್ಲಾ ವಸ್ತುಗಳನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ. ಇದಕ್ಕೆ ಕಡಲೆ ಬೀಜ ಸಹ ಹಾಕಿ ಫ್ರೈ ಮಾಡಿ. 3 ನಿಮಿಷದ ಬಳಿಕ ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಬ್ಯಾಡಗಿ ಮೆಣಸಿನ ಪುಡಿ ಸಹ ಹಾಕಿ ಒಲೆ ಆಫ್ ಮಾಡಿಕೊಂಡು ಪೌಂಡರ್ ಮಾಡಿಕೊಂಡ ಪುಡಿಯನ್ನು 2 ನಿಮಿಷ ಒಲೆ ಮೇಲೆ ಮಿಕ್ಸ್ ಮಾಡಿದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಘಮಘಮಿಸುವ ಪುಳಿಯೋಗರೆ ಪೌಡರ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಈ ರೀತಿ ಮಾಡಿದ ಪುಡಿಯನ್ನು ವರ್ಷಗಳ ಕಾಲ ಇಡಬಹುದು.



Click it and Unblock the Notifications