Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್‌ಗೆ ಇಲ್ಲಿದೆ 3 ನಿಮಿಷದ ಅವಲಕ್ಕಿ ಉಪ್ಪಿಟ್ಟು: ಮಾಡೋದು ಹೇಗೆ?
ನೀವು ನಿತ್ಯ ಬೆಳಗ್ಗೆ ಎದ್ದ ತಕ್ಷಣ ಇಂದು ಯಾವ ತಿಂಡಿ ಮಾಡಬೇಕು ಎಂಬ ಅವಸರದಲ್ಲಿದ್ದರೆ ಆಗ ಬಹುತೇಕ ಮಂದಿ ಸುಲಭವಾಗಿ ಹಾಗೆ ಕಡಿಮೆ ವಸ್ತುಗಳ ಹಾಕಿ ಮಾಡುವಂತಹ ಖಾದ್ಯ ಯಾವುದು ಎಂದು ಆಲೋಚಿಸುತ್ತಾರೆ. ಇಂತಹ ಸಮಯದಲ್ಲಿ ನಿಮ್ಮ ನೆನಪಿಗೆ ಹಲವು ಖಾದ್ಯಗಳ ಹೆಸರು ಬರಬಹುದು. ಅದ್ರಲ್ಲೂ ಚಿತ್ರಾನ್ನ, ಉಪ್ಪಿಟ್ಟು, ಅವಲಕ್ಕಿ ಗೊಜ್ಜು ಮಾಡುವುದು ಮೊದಲ ಆಯ್ಕೆ ಆಗಬಹುದು.
ನೀವು ಯಾವುದೇ ಖಾದ್ಯ ಮಾಡಲು ಮುಂದಾದರೂ ಕೂಡ ಒಂದಿಷ್ಟು ಸಮಯವಂತು ಹಿಡಿಯಲಿದೆ. ಆದ್ರೆ ನಾವಿಂದು ಸುಲಭವಾಗಿ 3 ನಿಮಿಷದ ಒಳಗೆ ಮಾಡುವಂತಹ ಈ ಅವಲಕ್ಕಿ ಉಪ್ಪಿಟ್ಟಿನ ಕುರಿತಾಗಿ ತಿಳಿದುಕೊಳ್ಳೋಣ ಹಲವರು ಈ ಅವಲಕ್ಕಿ ಉಪ್ಪಿಟ್ಟು ಸವಿದಿರಬಹುದು. ಇಲ್ಲವೆ ಅವಲಕ್ಕಿಯಿಂದ ಮಾಡುವಂತಹ ವಿವಿಧ ಖಾದ್ಯಗಳನ್ನಂತು ಮಾಡಿರುತ್ತೀರಿ.

ಹೀಗಾಗಿ ನಾವಿಂದು ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡುವ ಈ ಅವಲಕ್ಕಿ ಉಪ್ಪಿಟ್ಟಿನ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಈ ಅವಲಕ್ಕಿ ಉಪ್ಪಿಟ್ಟು ಅತ್ಯಂತ ರುಚಿಕರ ಹಾಗೆ ಮಾಡುವುದು ಕೂಡ ಬಹಳ ಸುಲಭ. ನೀವು ಕೂಡ 3 ನಿಮಿದಷದಲ್ಲಿ ಇದನ್ನು ಮಾಡಬಹುದು. ಹಾಗಾದ್ರೆ ಇಲ್ಲಿ ಈ ಅವಲಕ್ಕಿ ಉಪ್ಪಿಟ್ಟು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಅವಲಕ್ಕಿ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು
- ದಪ್ಪ ಅವಲಕ್ಕಿ - ಕಪ್
- ಸಾಸಿವೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕಡಲೆ ಬೀಜ
- ಕರಿಬೇವು
- ಈರುಳ್ಳಿ
- ಹಸಿ ಮೆಣಸು
- ತೆಂಗಿನಕಾಯಿ
- ನಿಂಬೆ ರಸ
- ಕೊತ್ತಂಬರಿ ಸೊಪ್ಪು
- ಇಂಗು
- ಉಪ್ಪು
- ಎಣ್ಣೆ
ಅವಲಕ್ಕಿ ಉಪ್ಪಿಟ್ಟು ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ಗೆ ಅವಲಕ್ಕಿಯನ್ನು ಹಾಕಿಕೊಂಡು ತೊಳೆದು ಬಳಿಕ ನೀರು ಬಸಿದು ಅವಲಕ್ಕಿಗೆ ಮುಚ್ಚಿ ಇಡಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕಡಲೆ ಬೀಜ ಹಾಕಿಕೊಂಡು 1 ನಿಮಿಷ ಣ್ಣ ಉರಿಯಲ್ಲಿ ಫ್ರೈ ಮಾಡಿ.
ನಂತರ ಕರಿಬೇವು, ಕತ್ತರಿಸಿಕೊಂಡಿರುವ ಈರುಳ್ಳಿ, ಸಣ್ಣದಾಗಿ ಹೆಚ್ಚಿರುವ ಹಸಿ ಮೆಣಸು, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಫ್ರೈ ಆಗಲು ಬಿಡಿ. ನಂತರ ಈಗ ನೆನೆಸಿಟ್ಟಿರುವ ಅವಲಕ್ಕಿಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಆಗಲು ಬಿಡಿ.
ಈಗ ತುರಿದ ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೊನೆಯಲ್ಲಿ ನಿಂಬೆ ರಸ ಹಾಕಿ ಹಾಗೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಕೊನೆಯಲ್ಲಿ ಒಲೆ ಆಫ್ ಮಾಡಿಕೊಂಡು ರುಚಿ ನೋಡಿ. ಇಷ್ಟಾದರೆ 3 ನಿಮಷದಲ್ಲಿ ಮಾಡಿ ಮುಗಿಸುವ ಈ ಅವಲಕ್ಕಿ ಉಪ್ಪಿಟ್ಟು ರೆಡಿಯಾಗುತ್ತದೆ. ನೀವು ಸಹ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ಸವಿದು ನೋಡಿ. ಮಕ್ಕಳಿಗೂ ಇದು ಬಹಳ ಇಷ್ಟವಾಗುತ್ತೆ. ಮಾಡೋದು ಕೂಡ ತುಂಬಾನೆ ಸುಲಭ.
ಹಾಗೆ ಕಡಿಮೆ ವಸ್ತುಗಳ ಬಳಸಿ ಮಾಡುವುದರಿಂದ ಕಡಿಮೆ ಸಮಯದಲ್ಲಿಯೂ ಮಾಡಿ ಮುಗಿಸಬಹುದು ನಿಮಗೆ ಬೆಳಗ್ಗೆ ತಿಂಡಿ ಮಾಡಲು ಸಮಯ ಇಲ್ಲದಾಗ ಈ ತಿಂಡಿಯನ್ನು ಮಾಡಬಹುದು. ಇಲ್ಲವೆ ಇದೇ ಅವಲಕ್ಕಿಯಲ್ಲಿ ಗೊಜ್ಜು ಸಹ ಮಾಡಿ ಸವಿಯಬಹುದು.



Click it and Unblock the Notifications