Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಲವು ದಿನ ಇಟ್ಟು ಸವಿಯಬಹುದು ಈ ಪೈನಾಪಲ್ ಗೊಜ್ಜು: ಮಾಡೋದು ಹೇಗೆ?
ನೀವು ತಿಂಡಿ ಸವಿಯಲು ಬೆಳಗ್ಗೆ ಹಲವು ಬಗೆಯ ಚಟ್ನಿ, ಗೊಜ್ಜು ಮಾಡಿ ಸವಿದಿರುತ್ತೀರಿ. ನಿತ್ಯವೂ ಬೇರೆ ಬೇರೆ ಚಟ್ನಿ, ಗೊಜ್ಜು ಮಾಡುವುದು ಅಂದರೆ ಎಲ್ಲರಿಗೂ ಒಂದು ಹೊರೆ ಇದ್ದಂತೆ. ಹೀಗಾಗಿ ಕೆಲವರು ಒಮ್ಮೆ ಮಾಡುವ ಗೊಜ್ಜು ಅಥವಾ ಚಟ್ನಿಯು ಹಲವು ದಿನಗಳ ಕಾಲ ಸವಿಯಲು ಬರುವಂತೆ ಮಾಡುತ್ತಾರೆ. ಆದ್ರೆ ಎಲ್ಲಾ ಚಟ್ನಿ, ಗೊಜ್ಜುಗಳನ್ನು ಹಲವು ದಿನಗಳ ಕಾಲ ಇಡಲು ಸಾಧ್ಯವಿಲ್ಲ. ಬಹುಬೇಗ ಅವು ಹಾಳಾಗುತ್ತವೆ.
ಆದ್ರೆ ನಾವಿಂದು ಸುಲಭವಾಗಿ ಹಲವು ದಿನಗಳ ಕಾಲ ಇಟ್ಟು ಸವಿಯಬಹುದಾದ ಗೊಜ್ಜನ್ನು ಮಾಡುವ ಕುರಿತು ತಿಳಿದುಕೊಳ್ಳೋಣ. ಹೌದು ನೀವೆಲ್ಲಾ ಅನಾನಸ್ ಹಣ್ಣಿನಿಂದ ಅದ್ಭುತ ರುಚಿಯಲ್ಲಿ ಗೊಜ್ಜು ಮಾಡಿರಬಹುದು. ಇಲ್ಲವೆ ಮದುವೆ ಮನೆಯಲ್ಲಿ, ಶುಭ ಕಾರ್ಯಕ್ಕೆ ಹೋದಾಗ ಅಲ್ಲಿ ಸವಿದಿರಬಹುದು. ಈ ಅನಾನಸ್‌ನಿಂದ ಮಾಡಲಾಗುವ ಗೊಜ್ಜು ಹುಳಿ ಹಾಗೂ ಸಿಹಿಯ ನಡುವೆ ಬಾಯಲ್ಲಿ ನೀರು ತರಿಸುತ್ತೆ.

ಈ ಪೈನಾಪಲ್ ಗೊಜ್ಜು ಮಾಡೋದು ಕೂಡ ತುಂಬಾನೆ ಸುಲಭ. ಇದನ್ನು ಉಪ್ಪಿನ ಕಾಯಿಯಂತೆ ಸವಿಯಬಹುದು. ಹಾಗೆ ತಿಂಡಿಗೆ ಊಟಕ್ಕೆ ಎಲ್ಲದ್ದಕ್ಕೂ ಅತ್ಯುತ್ತಮ ರುಚಿ ನೀಡಲಿದೆ. ಇನ್ನು ಕೆಲವೊಂದಿಷ್ಟು ದಿನ ಈ ಗೊಜ್ಜು ಇಟ್ಟು ಸವಿಯಬಹುದು. ಬಹುಬೇಗ ಇದು ಕೆಡುವುದಿಲ್ಲ. ಹಾಗಾದ್ರೆ ಈ ಗೊಜ್ಜು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಪೈನಾಪಲ್ ಗೊಜ್ಜು ಸುಲಭವಾಗಿ ಕಡಿಮೆ ಸಮಯಲ್ಲಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಅನಾನಸ್ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅನಾನಸ್ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಪೈನಾಪಲ್
ಒಣ ಕೊಬ್ಬರಿ - ಅರ್ಧ ಕಪ್
ಬೆಲ್ಲ
ಒಣ ಮೆಣಸು
ಹುಣಸೆ ಹಣ್ಣು
ಉದ್ದಿನ ಬೇಳೆ
ಕಾಳು ಮೆಣಸು
ಮೆಂತ್ಯ ಕಾಳು
ಅರಿಶಿಣದ ಪುಡಿ
ಎಣ್ಣೆ
ಸಾಸಿವೆ
ಕರಿಬೇವಿನ ಸೊಪ್ಪು
ಉಪ್ಪು
ಅನಾನಸ್ ಗೊಜ್ಜು ಮಾಡುವ ವಿಧಾನವೇನು?
ಮೊದಲು ಒಂದು ಪೈನಾಪಲ್ ಅನ್ನು ಚೆನ್ನಾಗಿ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ಸ್ವಲ್ಪ ಹುಣಸೆ ಹಣ್ಣನ್ನು ಕೂಡ ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿ ನೀರು ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ. ಅನಂತರ ಇದಕ್ಕೆ ಮೆಂತ್ಯ ಹಾಗೂ ಕಾಳು ಮೆಣಸು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದಿನ ಬೇಳೆ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಒಣ ಮೆಣಸು ಹಾಗೂ ತುರಿದುಕೊಂಡಿರುವ ಒಣ ಕೊಬ್ಬರಿ ಕೂಡ ಇದಕ್ಕೆ ಹಾಕಿ, ಹಾಗೆ ಅರಶಿಣ ಪುಡಿ ಹಾಕಿಕೊಂಡು ಮತ್ತೆ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಈ ಪದಾರ್ಥ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಮಿಕ್ಸಿಗೆ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಚಟ್ನಿಯಂತೆ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಬಾಣಲೆ ಮತ್ತೆ ಒಲೆ ಮೇಲೆ ಇಟ್ಟು ಬಿಸಿಯಾದಾಗ ಈಗ ಹುಣಸೆ ಹಣ್ಣನ್ನು ಹಿಂಡಿಕೊಂಡು ಅದರ ನೀರನ್ನು ಈ ಬಾಣಲೆಗೆ ಹಾಕಿ ಹಾಗೆ ಸ್ವಲ್ಪ ಬೆಲ್ಲವನ್ನು ಪುಡಿ ಮಾಡಿ ಹಾಕಿಕೊಳ್ಳಿ. ಹಾಗೆ ಇದಕ್ಕೆ ಕತ್ತರಿಸಿಕೊಂಡಿರುವ ಅನಾನಸ್ ಹಣ್ಣನ್ನು ಮತ್ತು ಉಪ್ಪನ್ನು ಹಾಕಿಕೊಳ್ಳಿ. ಅನಂತರ 10 ನಿಮಿಷ ಕುದಿಯಲು ಬಿಡಬೇಕು. ಆಗಾಗ ಮಿಕ್ಸ್ ಮಾಡುತ್ತಾ ಇರಬೇಕು.
ಈಗ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆ ಹಾಗೂ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ 10 ನಿಮಿಷ ಕುದಿಯಲು ಬಿಟ್ಟರೆ ಈ ಗೊಜ್ಜು ರೆಡಿಯಾಗುತ್ತೆ.



Click it and Unblock the Notifications