Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ಇಟ್ಟರೆ ಕರಗುವ ಮೃದುವಾದ ಉಪ್ಪಿಟ್ಟು..! ಮಾಡುವ ವಿಧಾನ ಇಲ್ಲಿದೆ..!
ಬೆಳಗ್ಗೆ ತಿಂಡಿಗೆ ನೀವು ಉಪ್ಪಿಟ್ಟು ಮಾಡುವ ಆಲೋಚನೆಯಲ್ಲಿರಬಹುದು. ಆಧ್ರೆ ಉಪ್ಪಿಟ್ಟು ಅಂದ್ರೆ ಕೆಲವರು ಇಷ್ಟಪಡುವುದಿಲ್ಲ. ಏಕೆಂದರೆ ಉಪ್ಪಿಟ್ಟನ್ನು ಬೆಳಗ್ಗೆ ಸವಿಯಲು ಅವರು ಇಷ್ಟಪಡುವುದಿಲ್ಲ. ಆದ್ರೆ ಮತ್ತೆ ಕೆಲವರಿಗೆ ಉಪ್ಪಿಟ್ಟು ಬಹಳ ರುಚಿಯ ಇಷ್ಟದ ಖಾದ್ಯ ಆಗಿರುತ್ತೆ. ಬೆಳಗ್ಗೆ ಮಾತ್ರವಲ್ಲ ಸಂಜೆ ಸ್ನ್ಯಾಕ್ಸ್ ಸಮಯದಲ್ಲು ಕೂಡ ಹಲವರು ಸವಿಯಲು ಇಷ್ಟಪಡುತ್ತಾರೆ.
ಉಪ್ಪಿಟ್ಟನ್ನು ಹಲವು ರೀತಿಯಲ್ಲಿ ಮಾಡುತ್ತಾರೆ. ಒಂದೊಂದು ವಿಧವು ಒಂದೊಂದು ರುಚಿ ನೀಡಲಿದೆ. ಉಪ್ಪಿಟ್ಟಿಗೆ ಹಾಕು ಮಸಾಲೆಗಳು ಅದರ ರುಚಿಯನ್ನು ಹೆಚ್ಚಿಸುತ್ತವೆ. ಮಸಾಲೆ ಉಪ್ಪಿಟ್ಟು, ಕಾಳುಗಳ ಹಾಕಿ ಮಾಡುವಂತಹ ಉಪ್ಪಿಟ್ಟು, ರವೆ ಉಪ್ಪಿಟ್ಟು, ಅವರೆಕಾಳು ಉಪ್ಪಿಟ್ಟು ಹೀಗೆ ಒಂದಿಷ್ಟು ವಿಧಾನಗಳು ಕಣ್ಣ ಮುಂದೆ ಬರಲಿವೆ.

ಆದರೆ ಇಂದು ನಾವು ಈ ಉಪ್ಪಿಟ್ಟು ಬಾಯಲ್ಲಿ ಇಟ್ಟರೆ ಕರಗುವಂತೆ ಅತ್ಯಂತ ಮೃದುವಾಗಿ ಅದ್ಭುತ ರುಚಿಯಲ್ಲಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಉಪ್ಪಿಟ್ಟನ್ನು ಮಾಡುವಾಗ ಮೃದುವಾಗಿ ಬರಬೇಕು ಎಂಬ ಆಸೆ ಇರುತ್ತೆ. ಆದ್ರೆ ಅಳತೆಯಲ್ಲಿ ಕೊಂಚ ತಪ್ಪಾದರೂ ಕೂಡ ಉಪ್ಪಿಟ್ಟು ಹಾಳಾಗುತ್ತದೆ. ಹಾಗಾದ್ರೆ ನಾವಿಂದು ಮೃದುವಾಗಿ ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ನೋಡೋಣ.
ಮೃದು ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ರವೆ
ಹಸಿ ಮೆಣಸು
ಸಾಸಿವೆ
ಈರುಳ್ಳಿ
ಉದ್ದಿನ ಬೇಳೆ
ಕಡಲೆ ಬೇಳೆ
ಕರಿಬೇವು
ಬಟಾಣಿ
ಎಣ್ಣೆ
ಉಪ್ಪು
ಮೃದು ಉಪ್ಪಿಟ್ಟು ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅಳತೆ ಕಪ್‌ನಲ್ಲಿ ಮೂರುವರೆ ಅಥವಾ 4 ಕಪ್ ನೀರು ಹಾಕಿ ಬಿಸಿಯಾಗಲು ಬಿಡಿ. ಇನ್ನೊಂದು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅಳತೆ ಕಪ್‌ನಲ್ಲಿಯೇ ಒಂದು ಕಪ್ ರವೆ ತೆಗೆದುಕೊಂಡು ಇದಕ್ಕೆ ಹಾಕಿ ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ರವೆಯನ್ನ ಚೆನ್ನಾಗಿ ಹುರಿದುಕೊಳ್ಳಿ. ರವೆಯಿಂದ ಒಂದು ಘಮ ಘಮ ಎನ್ನುವಂತೆ ಸುವಾಸನೆ ಬರಬೇಕು. ಈಗ ರವೆಯನ್ನು ತೆಗೆದು ಮತ್ತೊಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಎಣ್ಣೆ ಹಾಕಿಕೊಳ್ಳಿ. ಈ ಉಪ್ಪಿಟ್ಟಿಗೆ ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಹಸಿ ಮೆಣಸು ಕೂಡ ಸಣ್ಣದಾಗಿ ಹೆಚ್ಚಿಕೊಂಡು ಚೆನ್ನಾಗಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಬಟಾಣಿ ಹಾಕಿಕೊಳ್ಳಿ. ಅನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಹಾಕಿಕೊಳ್ಳಿ. ದೊಡ್ಡದಾದ 2 ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಇನ್ನೊಂದು ಪಾತ್ರೆಯಲ್ಲಿರುವ ಬಿಸಿ ನೀರನ್ನು ತೆಗೆದುಕೊಂಡು ಈ ಬಾಣಲೆಗೆ ಹಾಕಿಕೊಳ್ಳಿ. ಇದು ಕುದಿಯಲು ಆರಂಭಿಸಿದಾಗ ಉಪ್ಪು ಹಾಕಿಕೊಳ್ಳಿ. ರವೆ ಹಾಕುವ ಮುನ್ನವೇ ಉಪ್ಪು ಹಾಕಿ ಕಲಸಿಕೊಳ್ಳಿ. ಈಗ ಫ್ರೈ ಮಾಡಿರುವ ರವೆಯನ್ನು ಇದಕ್ಕೆ ಹಾಕಿ ನಿಧಾನವಾಗಿ ತಿರುಗಿಸಿಕೊಳ್ಳಿ. 1 ನಿಮಿಷದ ಬಳಿಕ ಸಣ್ಣ ಉರಿ ಇಟ್ಟು ಮುಚ್ಚಳ ಮುಚ್ಚಿ, 3 ನಿಮಿಷದಲ್ಲಿ ಮೃದುವಾದ ಉಪ್ಪಿಟ್ಟು ರೆಡಿಯಾಗುತ್ತದೆ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಂಡು ಹಾಕಿ ಒಮ್ಮೆ ಮಿಕ್ಸ್ ಮಾಡಿ 1 ನಿಮಿಷ ಬಿಟ್ಟರೆ ನಿಮ್ಮ ಮುಂದೆ ಮೃದುವಾದ ಉಪ್ಪಿಟ್ಟು ರೆಡಿಯಾಗುತ್ತದೆ. ಇದರ ಮೇಲೆ ಒಂದು ಸ್ಪೂನ್ ತುಪ್ಪ ಬಳಸಿದರೆ ಅದರ ರುಚಿಗೆ ಬಾಯಲ್ಲಿ ನೀರು ಬರುವುದು ಖಚಿತ.



Click it and Unblock the Notifications