Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಾಳು ಮೆಣಸಿನ ರಸಂ ರೆಸಿಪಿ: ಈ ರಸಂ ಕುಡಿದರೆ ಕೆಮ್ಮು, ಶೀತ ಓಡಿ ಹೋಗುತ್ತೆ ನೋಡಿ
ಮಳೆಗಾಲ ಜೊತೆಗೆ ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ, ಈ ಸಮಯದಲ್ಲಿ 'ನೀವು ಆರೋಗ್ಯಕ್ಕಾಗಿ ಕಡೆಗೆ ಗಮನಹರಿಸುವುದು ಒಳ್ಳೆಯದು. ಕಷಾಯ, ರಸಂ, ಕಾಳು ಮೆಣಸಿನ ರಸಂ ಇವೆಲ್ಲಾ ಕೆಮ್ಮು, ಗಂಟಲು ಕೆರೆತ, ಶೀತ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಇಲ್ಲಿ ಕಾಳು ಮೆಣಸಿನ ರಸಂ ಹಾಗೂ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
ಕಾಳು ಮೆಣಸು 2 ಚಮಚ (ತುಂಬಾ ಖಾರ ಇಷ್ಟಪಡುವುದಾದರೆ ಒಂದು ಚಮಚ ಕೂಡ ಹೆಚ್ಚು
ಬಳಸಬಹುದು)
ಚಮಚ ಜೀರಿಗೆ
ಹಣ್ಣಾದ ಟೊಮೆಟೊ 2-3
2 ಬೆಳ್ಳುಳ್ಳಿ
ಸ್ವಲ್ಪ ಸಾಸಿವೆ
2 ಒಣ ಮೆಣಸು
1 ಚಮಚ ಜೀರಿಗೆ
ಸ್ವಲ್ಪ ಕರಿಬೇವು
ಸ್ವಲ್ಪ ಹುಣಸೆಹಣ್ಣು
ನೀರು
1/2 ಕಪ್ ಬೇಳೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ 1 ಚಮಚ
ಉಪ್ಪು
ಕಾಳು ಮೆಣಸಿನ ರಸಂ ಮಾಡುವ ವಿಧಾನ
ನೀವು ಕಾಳು ಮೆಣಸು ಸ್ವಲ್ಪ ಹುರಿದು ನಂತರ ಕುಟ್ಟಿ ಪುಡಿ ಮಾಡಿ, ಬೆಳ್ಳುಳ್ಳಿ
ಕೂಡ ಅಷ್ಟೇ ಜಜ್ಜಿ, ಜೀರಿಗೆ ಕೂಡ ರೋಸ್ಟ್ ಮಾಡಿ ಪುಡಿ ಮಾಡಿ.
ನೀವು ಟೊಮೆಟೊವನ್ನು ನೀರಿನಲ್ಲಿ ಹಾಕಿ ಬೇಯಿಸಿ
ನಂತರ ಅದನ್ನು ಸಿಪ್ಪೆ ಸುಲಿದು ಒಂದು ಬೌಲ್‌ಗೆ ಹಾಕಿ ಮ್ಯಾಶ್ ಮಾಡಿ
ಈಗ ನೀವು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ , ಸಾಸಿವೆ
ಚಟ್ ಪಟ್ ಶಬ್ದ ಮಾಡುವಾಗ ಜಜ್ಜಿದ ಕಾಳು ಮೆಣಸು, ಒಣಮೆಣಸು, ಬೆಳ್ಳುಳ್ಳಿ,
ಜೀರಿಗೆ ಹಾಕಿ ಟೊಮೆಟೊ ಪೇಸ್ಟ್ ಹಾಕಿ, ನಂತರ, ಉಪ್ಪು, ಅರಿಶಿಣ ಹಾಕಿ ಸ್ವಲ್ಪ
ನೀರು ಸೇರಿಸಿ ಕುದಿಸಿ, ಚೆನ್ನಾಗಿ ಕುದಿ ಬಂದಾಗ ಅದಕ್ಕೆ ಕೊತ್ತಂಬರಿ ಸೊಪ್ಪಿನಿಮದ
ಅಲಂಕರಿಸಿದರೆ ಕಾಳು ಮೆಣಸಿನ ರಸಂ ರೆಡಿ.
ಬೇಳೆ ಹಾಕಿ ಮಾಡುವ ಕಾಳು ಮೆಣಸಿನ ಸಾರು
ನೀವು ಬೇಳೆ ಮತ್ತು ಟೊಮೆಟೊಗೆ ಸ್ವಲ್ಪ ನೀರು ಹಾಕಿ, ಉಪ್ಪು ಹಾಕಿ,
ಬೆಳ್ಳುಳ್ಳಿ, ಕಾಳು ಮೆಣಸು, ಜೀರಿಗೆ ಪುಡಿ ಎಲ್ಲಾ ರೋಸ್ಟ್ ಮಾಡಿ ಜಜ್ಜಿ ಹಾಕಿ
ಬೇಯಿಸಿ
ನಂತರ ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ
ಸೇರಿಸಿ, ಬಳಿಕ ಈ ಬೇಯಿಸಿದ ರಂಸ ಹಾಕಿ ಸ್ವಲ್ಪ ಅರಿಶಿಣ ಪುಡಿ, ಕಾಶ್ಮೀರಿ ಖಾರದ
ಪುಡಿ ಸೇರಿಸಿ ಕುದಿಸಿದರೆ ಕಾಳು ಮೆಣಸಿನ ಸಾರು ರೆಡಿ. ರೆಡಿಯಾದ ಸಾರಿಗೆ ಸ್ವಲ್ಪ
ಕೊತ್ತಂಬರಿ ಸೊಪ್ಪು ಉದುರಿಸಿ ಸರ್ವ್ ಮಾಡಿ.
ಈ ರಸಮ ನೀವು ಹಾಗೆಯೇ ಸೇವಿಸಬಹುದು ಅಥವಾ ಅನ್ನದ ಜೊತೆ ಹಾಕಿ ತಿನ್ನಬಹುದು. ಇದರ ಸೇವನೆ ಮಾಡುವುದರಿಂದ ಶೀತ, ಕೆಮ್ಮು, ಗಂಟಲು ಕೆರೆತ ಕಡಿಮೆಯಾಗುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಹಾಗಾಗಿ ಮಳೆಗಾಲಕ್ಕೆ , ಚಳಿಗಾಲಕ್ಕೆ ಈ ರೆಸಿಪಿ ತುಂಬಾನೇ ಒಳ್ಳೆಯದು.
ಅಲ್ಲದೆ ಈ ರಸಂ ಸೇವನೆ ಜೀರ್ಣಕ್ರಿಯೂ ತುಂಬಾನೇ ಒಳ್ಳೆಯದು.



Click it and Unblock the Notifications