Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಿಂಗಳ ಕಾಲ ಇಡಬಹುದಾದ ಶೇಂಗಾ ಚಟ್ನಿ ಪುಡಿ ಮಾಡಿ..! ರೆಸಿಪಿ ಇಲ್ಲಿದೆ
ಊಟಕ್ಕೆ ಚಟ್ನಿ ಇದ್ದರೆ ಅದರ ರುಚಿ ಹೆಚ್ಚಾಗುತ್ತೆ. ಅದ್ರಲ್ಲೂ ತಿಂಡಿ ಜೊತೆಗೆ ಯಾವುದಾದರು ಚಟ್ನಿಯೊಂದು ಇರಲೇಬೇಕು. ಆದ್ರೆ ನಿತ್ಯವು ಚಟ್ನಿಮಾಡಲು ಯಾರಿಗೂ ಸಮಯ ಇರುವುದಿಲ್ಲ. ಹೀಗಾಗಿ ಒಮ್ಮೆ ಮಾಡುವ ಚಟ್ನಿ ಹಲವು ದಿನಗಳ ಕಾಲ ಬರುವಂತೆ ಇದ್ದರೆ ಉತ್ತಮ.
ಹೀಗಾಗಿ ಒಂದು ದಿನ ಮಾಡಿ ಹಲವು ದಿನಗಳ ವರೆಗೆ ಇಡಬಹುದಾದ ಶೇಂಗಾ ಚಟ್ನಿ ಪುಡಿ ಮಾಡುವು ಕುರಿತು ನಾವು ತಿಳಿದುಕೊಳ್ಳೋಣ. ಶೇಂಗಾ ಚಟ್ನಿ ಪುಡಿ ಮಾಡಿದರೆ ಊಟದ ಜೊತೆ ಎಲ್ಲಾ ತಿಂಡಿಯ ಜೊತೆಯೂ ಕೂಡ ಅದನ್ನು ಸವಿಯಬಹುದು. ಅದರಲ್ಲೂ ಬೆಳಗ್ಗಿನ ತಿಂಡಿಗೆ ಇದು ಹೇಳಿ ಮಾಡಿಸಿದ ಚಟ್ನಿಯಾಗಿದೆ.

ದೋಸೆ, ಚಪಾತಿ, ಇಡ್ಲಿ ಹೀಗೆ ಎಲ್ಲಾ ತಿಂಡಿ ಜೊತೆಯೂ ಇದನ್ನು ಸವಿಯಬಹುದು. ಅಷ್ಟು ರುಚಿಕರ ಹಾಗೂ ಬಹಳಷ್ಟು ದಿನ ಇಟ್ಟು ಸಹ ಸವಿಯಬಹುದು. ಹಾಗಾದ್ರೆ ನಾವಿಂದು ಈ ಶೇಂಗಾ ಚಟ್ನಿ ಪುಡಿ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳೇನು? ಯಾವ ವಸ್ತುಗಳ ಬಳಸಿ ಮಾಡಬೇಕು ಎಷ್ಟು ದಿನ ಇಟ್ಟು ಸವಿಯಬಹುದು ಎಂಬ ಎಲ್ಲಾ ಮಾಹಿತಿ ತಿಳಿದುಕೊಳ್ಳೋಣ.
ಶೇಂಗಾ ಪುಡಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
ಶೇಂಗಾ
ಬೆಳ್ಳುಳ್ಳಿವ- 3
ಹಸಿಮೆಣಸು - 4
ಕರಿಬೇವು
ಖಾರದ ಪುಡಿ
ಜೀರಿಗೆ
ಹುಣಸೆ ಹುಳಿ
ಬೆಲ್ಲ
ಉಪ್ಪು
ಎಣ್ಣೆ
ಶೇಂಗಾ ಚಟ್ನಿ ಪುಡಿ ಮಾಡುವ ವಿಧಾನ
ಮೊದಲು ಈ ಶೇಂಗಾವನ್ನು ಚೆನ್ನಾಗಿ ಹುರಿದು ಅದರ ಸಿಪ್ಪೆ ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆಗೆ ಜೀರಿಗೆ, ಕರಿಬೇವು ಹಾಕಿಕೊಂಡು 20 ಸೆಕೆಂಡ್ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಹುಣಸೆಹುಳಿ ಹಾಕಿ.
ಈಗ ಮಿಕ್ಸಿ ಜಾರ್‌ಗೆ ಶೇಂಗಾ ಹಾಗೂ ಬೆಲ್ಲ, ಬೆಳ್ಳುಳ್ಳಿ, ಖಾರದ ಪುಡಿ, ಉಪ್ಪು, ಹಾಗೂ ಬಿಸಿ ಮಾಡಿಕೊಂಡ ಹುಣಸೆಹುಳಿ, ಕರಿಬೇವು, ಜೀರಿಗೆಯನ್ನು ಹಾಕಿಕೊಳ್ಳಿ.
ಬಳಿಕ ಇದನೆಲ್ಲಾ ಚೆನ್ನಾಗಿ ರುಬ್ಬಿಕೊಳ್ಳಿ. ಆದರೆ ರುಬ್ಬುವ ವೇಳೆ ನೀರು ಹಾಕಲೇ ಬೇಡಿ. ತರಿ ತರಿಯಾಗಿ ರುಬ್ಬಿಕೊಂಡರೆ ಸಾಕು. 10 ನಿಮಿಷದೊಳಗೆ ಈ ಪುಡಿ ರೆಡಿಯಾಗುತ್ತದೆ. ಈಗ ನಿಮ್ಮ ಮುಂದೆ ಶೇಂಗಾ ಚಟ್ನಿ ಪುಡಿ ರೆಡಿಯಾಗಿರುತ್ತದೆ. ನಾವು ಮೊದಲೇ ಹೇಳಿದಂತೆ ಇದನ್ನು ನೀವು ತಿಂಗಳುಗಳ ಕಾಲ ಗಾಳಿಯಾಡದ ಸಿಲ್ವರ್ ಪಾತ್ರೆಯಲ್ಲಿ ಇಡಬಹುದು.
ಇದನ್ನು ತಿಂಡಿ ಊಟದ ಜೊತೆಗೆ ಸೈಡ್ಸ್ ಆಗಿ ಹಾಕಿಕೊಳ್ಳಬಹುದು. ತಿಂಡಿಯಾದರೆ ಇದಕ್ಕೆ ಸ್ವಲ್ಪ ಮೊಸರು ಹಾಕಿಯೂ ಸವಿಯುತ್ತಾರೆ. ಇತ್ತ ಈ ಶೇಂಗವನ್ನು ಬಡವರ ಬದಾಮಿ ಎನ್ನಲಾಗುತ್ತದೆ ಏಕೆಂದತೆ ಈ ಶೇಂಗಾದಲ್ಲಿ ಹಲವು ರೀತಿಯ ಆರೋಗ್ಯಕರ ಅಂಶಗಳಿವೆ. ಇದೇ ಶೇಂಗಾದಿಂದ ಮಾಡುವ ಪೀನಟ್ ಬಟರ್‌ನಲ್ಲಿ ಹೆಚ್ಚು ಪ್ರೋಟೀನ್ ಹಾಗೂ ವಿಟಮಿನ್ ಸಿಗುತ್ತದೆ. ಹೀಗಾಗಿಯೇ ಇದನ್ನ ಬಡವರ ಬಾದಾಮಿ ಎಂದು ಕರೆಯಲಾಗಿದೆ.



Click it and Unblock the Notifications