Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೇಪರ್ ಅವಲಕ್ಕಿ ಒಗ್ಗರಣೆ ಈ ರೀತಿ ಮಾಡಿದ್ರೆ ಒಂಚೂರು ಉಳಿಯಲ್ಲ..! 5 ನಿಮಿಷ ಸಾಕು
ನೀವೆಲ್ಲರು ಬೆಳಗ್ಗೆ ತಿಂಡಿಗೆ ಈ ಅತ್ಯಂತ ಸರಳವಾಗಿ ಮಾಡಬಹುದಾದ ತಿಂಡಿಯನ್ನು ಮಾಡಿಯೇ ಮಾಡಿರುತ್ತೀರಿ. ಸರಳವಾಗಿ ಮಾಡುವ ತಿಂಡಿ ಎಂದಾಗ ನಿಮಗೆ ಹತ್ತು ಹಲವು ಖಾದ್ಯ ನೆನಪಿಗೆ ಬರಬರಬಹುದು. ಅದರಲ್ಲಿ ಚಿತ್ರಾನ್ನ, ಪಲಾವ್ ಸೇರಿ ಹಲವು ಖಾದ್ಯ ಕಡಿಮೆ ಸಮಯದಲ್ಲಿ ಮಾಡಬಹುದು. ಹಾಗೆ ಅವಲಕ್ಕಿ ಕೂಡ ಕಡಿಮೆ ಸಮಯದಲ್ಲಿ ಮಾಡಬಹುದಾದ ಒಂದು ತಿಂಡಿಯಾಗಿದೆ.
ಅವಲಕ್ಕಿಗೆ ಒಗ್ಗರಣೆ ಹಾಕಿ ಮಾಡುವಂತಹ ಅತ್ಯಂತ ರುಚಿಕರ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಅವಲಕ್ಕಿಯನ್ನ ನೆನೆಸಿ ಅದಕ್ಕೆ ಒಗ್ಗರಣೆ ಹಾಕಿ ಮಾಡಲಾಗುತ್ತದೆ. ಇನ್ನೊಂದು ಕಡೆ ಪೇಪರ್ ಅವಲಕ್ಕಿಗೆ ಒಗ್ಗರಣೆ ಹಾಕಿ ಬೊಂಬಾಟ್ ರುಚಿಯಲ್ಲಿ ಅವಲಕ್ಕಿ ಮಾಡಲಾಗುತ್ತದೆ. ಈ ರೀತಿಯ ತಿಂಡಿ ನೀವು ಯಾವುದಾದರು ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವುದನ್ನು ನೋಡಿರಬಹುದು.

ಏಕೆಂದರೆ ಈ ಅವಲಕ್ಕಿಗೆ ಒಗ್ಗರಣೆ ಹಾಕಿ ಮಾಡುವ ತಿಂಡಿಯನ್ನ ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಅದು ಹಾಳಾಗುವುದಿಲ್ಲ. ಹೀಗಾಗಿ ಸಂಜೆಯ ಸ್ನ್ಯಾಕ್ಸ್‌ಗೆ ಹಾಗೆ ಬೆಳಗ್ಗೆ ತಿಂಡಿಗೆ ಮಾಡುತ್ತಾರೆ. ಅದರಲ್ಲೂ ಗಡಿಬಿಡಿಯಲ್ಲಿ ಬೆಳಗ್ಗೆ ಎಲ್ಲಿಯಾದರು ಹೋಗುವುದಾದರೆ ಇದನ್ನು ಥಟ್ ಅಂತ 5 ನಿಮಿಷದಲ್ಲಿ ಮಾಡಿ ಸವಿಯಬಹುದು.
ಹಾಗಾದ್ರೆ ನಾವಿಂದು ಕೂಡ ಈ ಅವಲಕ್ಕಿ ಒಗ್ಗರಣೆ ಮಾಡುವ ಕುರಿತು ತಿಳಿದುಕೊಳ್ಳೋಣ. ಹಾಗೆ ಅವಲಕ್ಕಿ ಒಗ್ಗರಣೆ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪೇಪರ್ ಅವಲಕ್ಕಿ ಒಗ್ಗರಣೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪೇಪರ್ ಅವಲಕ್ಕಿ
- ನೆಲಗಡಲೆ
- ಹುರಿಗಡಲೆ
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ತೆಂಗಿನಕಾಯಿ ತುರಿ
- ಒಣ ಮೆಣಸಿನಕಾಯಿ
- ಹಸಿರು ಮೆಣಸಿನಕಾಯಿ
- ಜೀರಿಗೆ
- ಸಾಸಿವೆ
- ಕರಿಬೇವಿನ ಎಲೆ
- ಸಕ್ಕರೆ
- ಉಪ್ಪು ಎಣ್ಣೆ
ಪೇಪರ್ ಅವಲಕ್ಕಿ ಒಗ್ಗರಣೆ ಮಾಡುವುದು ಹೇಗೆ?
ಮೊದಲು ಅರ್ಧ ಕೆಜಿ ಪೇಪರ್ ಅವಲಕ್ಕಿಯನ್ನು ಜರಡಿ ಹಿಡಿದುಕೊಂಡು ಅದರ ಪುಡಿಯನ್ನು ಬೇರೆ ಮಾಡಿಕೊಳ್ಳಬೇಕು. ನಂತರ ಅದನ್ನು ಬಿಸಿ ಮಾಡಿಕೊಳ್ಳಬೇಕು. ಒಂದು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಹುರಿದುಕೊಳ್ಳುವುದು ಬೇಡ ಅಂದ್ರೆ ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು. 5 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ.
ಈಗ ಒನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಅದಕ್ಕೆ ಶೇಂಗಾ ಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಶೇಂಗಾ ಫ್ರೈ ಆದ ಬಳಿಕ ಎಣ್ಣೆಯಿಂದ ತೆಗೆದು ಒಂದು ಬೌಲ್‌ಗೆ ಹಾಕಿ ಇಡಿ. ಬಳಿಕ ಇದೇ ಎಣ್ಣೆಗೆ ಹುರಿಗಡಲೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಸಹ ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಅದೇ ಎಣ್ಣೆಗೆ ತೆಂಗಿನಕಾಯಿಯನ್ನು ಹಾಕಿ. ತೆಂಗಿನಕಾಯಿ ತುರಿ ಬಳಸಬೇಡಿ, ಕಾಯಿಯನ್ನು ದೊಡ್ಡದಾಗಿ ಹೆಚ್ಚಿರುವುದನ್ನು ಹಾಕಿ ಬ್ರೌನ್ ಕಲರ್‌ಗೆ ತಿರುಗಿದಾಗ ಎತ್ತಿಕೊಳ್ಳಿ. ಈಗ ಇದೇ ಎಣ್ಣೆಗೆ ಸಾಸಿವೆ ಹಾಕಿಕೊಳ್ಳಿ, ನಂತರ ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಿಧಾನವಾಗಿ ಫ್ರೈ ಮಾಡಿದ ಬಳಿಕ ಇದಕ್ಕೆ ಕರಿಬೇವು ಹಾಕಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಅರಶಿಣ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಈಗ ಈ ಮಿಶ್ರಣವನ್ನು ಈಗ ಒಲೆ ಆಫ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಅವಲಕ್ಕಿ ಮೇಲೆ ಹಾಕುತ್ತಾ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಒಗ್ಗರಣೆ ಹಾಕಿ ಮಿಕ್ಸ್ ಮಾಡಿದ ಬಳಿಕ ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿಕೊಂಡು ಮಿಕ್ಸ್ ಮಾಡಿದರೆ ರುಚಿ ರುಚಿಯ ಒಗ್ಗರಣೆ ಅವಲಕ್ಕಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿ ಒಗ್ಗರಣೆ ಅವಲಕ್ಕಿ ಮಾಡಲು ಟ್ರೈ ಮಾಡಿ.



Click it and Unblock the Notifications