Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಕಪ್ ಉದ್ದಿನ ಬೇಳೆ ಇದ್ರೆ 100 ಹಪ್ಪಳ ಮಾಡಬಹುದು..! ಹೇಗೆ ಗೊತ್ತಾ?
ಊಟದ ಜೊತೆಗೆ ನಮಗೆ ಯಾವುದಾದರು ಪಲ್ಯ, ತಿಂಡಿ ಇದ್ದೆ ಊಟ ತುಂಬಾ ಚೆನ್ನಾಗಿರಲಿದೆ. ಅಲ್ಲದೆ ಊಟದ ಜೊತೆಗೆ ಹಪ್ಪಳ ಸವಿಯುವುದು ಕೂಡ ನಮಗೆ ಅಭ್ಯಾಸ ಇರುತ್ತದೆ. ಊಟದ ಜೊತೆಗೆ ಒಂದು ಹಪ್ಪಳ ಇದ್ದರೆ ಅದರ ರುಚಿ ದುಪ್ಪಟ್ಟಾಗುವುದು ಖಚಿತ. ಹಾಗೆ ನಾವು ಶುಭ ಕಾರ್ಯದ ದಿನದಲ್ಲಿ ಹಪ್ಪಳ ಮಾಡಿಯೇ ಮಾಡುತ್ತಾರೆ. ಹಪ್ಪಳ ಅಂದ್ರೆ ಮಕ್ಕಳಿಗಂತು ಎಲ್ಲಿಲ್ಲದ ಪ್ರೀತಿ.
ನಾವು ಸಾಮಾನ್ಯವಾಗಿ ಹಪ್ಪಳವನ್ನು ಅಂಗಡಿಯಿಂದ ತಂದು ಎಣ್ಣೆಯಲ್ಲಿ ಕರಿದು ಸವಿಯುತ್ತೇವೆ. ಇತ್ತೀಚಿಗೆ ಹಪ್ಪಳದಲ್ಲಿ ಹಲವು ರೀತಿಯ ರುಚಿಯಲ್ಲಿ ಹಪ್ಪಳಗಳು ಸಿಗುತ್ತವೆ. ಅದರಲ್ಲಿ ಹುರಿಗಡಲೆ, ಮೈದಾ ಹಪ್ಪಳ ಸೇರಿ ಕೆಲವು ಹಣ್ಣುಗಳ ಬಳಸಿ ಮಾಡಿರುವ ಹಪ್ಪಳಗಳ ನಾವು ಸವಿದಿರುತ್ತೇವೆ. ಆದ್ರೆ ಮನೆಯಲ್ಲಿ ಮಾಡಿ ಸವಿಯುವುದು ಬಹಳ ಕಡಿಮೆ.

ಆದ್ರೆ ನಾವಿಂದು ಮನೆಯಲ್ಲೇ ಕುಳಿತು ಹಪ್ಪಳ ಮಾಡಿ ಸವಿಯುವ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದೇವೆ. ಹೌದು ಕೆಲವೇ ವಸ್ತುಗಳನ್ನು ಬಳಸಿ ರುಚಿ ರುಚಿಯ ಹಪ್ಪಳ ಮನೆಯಲ್ಲೇ ಮಾಡಬಹುದು. ಹಾಗಾದ್ರೆ ಉದ್ದಿನ ಬೇಳೆಯನ್ನು ಬಳಸಿ ಮನೆಯಲ್ಲಿ ಹಪ್ಪಳ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಉದ್ದಿನ ಬೇಳೆ ಹಪ್ಪಳ ಮಾಡುವುದು ಹೇಗೆ? ಉದ್ದಿನ ಬೇಳೆ ಹಪ್ಪಳ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಉದ್ದಿನ ಬೇಳೆ ಹಪ್ಪಳ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದಿನ ಬೇಳೆ- 1 ಕಪ್
- ಬೇಕಿಂಗ್ ಪೌಡರ್
- ಎಣ್ಣೆ
- ಉಪ್ಪು
ಉದ್ದಿನ ಬೇಳೆ ಹಪ್ಪಳ ಮಾಡುವುದು ಹೇಗೆ?
ಮೊದಲು ಉದ್ದಿನ ಬೇಳೆಯನ್ನು ಒಣಗಿಸಿಕೊಂಡಿರಬೇಕು, ಇಲ್ಲವೆ ಒಂದು 5 ನಿಮಿಷಗಳ ಕಾಲ ಒಲೆಯಲ್ಲಿ ಪಾತ್ರೆ ಇಟ್ಟು ಉದ್ದಿನ ಬೇಳೆ ಹುರಿದುಕೊಳ್ಳಬೇಳು. ನಂತರ ಉದ್ದಿನ ಬೇಳೆಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ನುಣ್ಣಗೆ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ಹಾಗೆ ಇದನ್ನು ಜರಡಿ ಹಿಡಿದು ನುಣ್ಣಗೆ ಹಿಟ್ಟನ್ನು ತೆಗೆದುಕೊಳ್ಳಬೇಕು.
ಈಗ ಈ ಹಿಟ್ಟಿಗೆ ಬೇಕಿಂಗ್ ಪೌಡರ್ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಗಟ್ಟಿಯಾಗಿ ಹದ ಮಾಡಿಕೊಳ್ಳಿ. ತುಂಬಾ ನೀರು ಹಾಕಿಕೊಳ್ಳದೆ ಹದ ಮಾಡಿ. ಒಂದು ಸ್ಪೂನ್ ಎಣ್ಣೆ ಹಾಲಿ 5ರಿಂದ 7 ನಿಮಿಷ ಚೆನ್ನಾಗಿ ಹದ ಮಾಡಿಕೊಳ್ಳಬೇಕು. ಈ ಹಿಟ್ಟು ತುಂಬಾ ಮೃದುವಾಗಿ ಬರುವಂತೆ ಹದ ಮಾಡಿಕೊಳ್ಳಬೇಕು. ಹಾಗೆ ಹಿಟ್ಟು ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿರಬೇಕು.
ಈಗ ಹಿಟ್ಟಿನಿಂದ ಉಂಡೆಗಳ ಮಾಡಿಕೊಳ್ಳಬೇಕು. ನಲ್ಲಿಕಾಯಿ ಗಾತ್ರದಲ್ಲಿ ಹಿಟ್ಟನ್ನು ಉಂಡೆ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. ಲಟ್ಟಿಸುವಾಗ ಹಿಟ್ಟು ಅಂಟುತ್ತಿದ್ದರೆ ಗೋಧಿ ಹಿಟ್ಟನ್ನು ಮೇಲೆ ಸಿಂಪಡಿಸಿ ಲಟ್ಟಿಸಿಕೊಳ್ಳಿ. ಹೀಗೆ ಎಲ್ಲಾ ಉಂಡೆಗಳನ್ನು ಲಟ್ಟಿಸಿಕೊಂಡು ಒಂದು ಕಡೆ ಇಡಿ. ನಂತರ ಹಪ್ಪಳವನ್ನು ಬಿಸಿಲಿನಲ್ಲಿ ಅಥವಾ ಪೇಪರ್ ಮೇಲೆ ಹಾಕಿ ಒಣಗಿಸಿಕೊಳ್ಳಬೇಕು.
ಹಪ್ಪಳಗಳು ಒಂದೆರಡು ದಿನದಲ್ಲಿ ಒಣಗುತ್ತವೆ, ಇದನ್ನು ನೀವು ಎಣ್ಣೆಗೆ ಹಾಕಿ ಸವಿಯಬಹುದು. ನೀವು ಕೂಡ ಮನೆಯಲ್ಲಿ ಈ ಹಪ್ಪಳವನ್ನು ಒಮ್ಮೆ ಮಾಡಿ ನೋಡಿ.



Click it and Unblock the Notifications