Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
ಪನೀರ್ ಅಂದರೆ ಇಷ್ಟಪಡದೇ ಇರುವಂತಹ ಜನರು ತುಂಬಾ ಕಡಿಮೆ. ಪನೀರ್ ನಿಂದ ಮಾಡಿದಂತಹ ಖಾದ್ಯಗಳು ತುಂಬಾ ರುಚಿ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯದು. ಪನೀರ್ ಚಿಲ್ಲಿ, ಪನೀರ್ ಮಂಚೂರಿ, ಪನೀರ್ ಸ್ಯಾಂಡ್ ವಿಚ್, ಪನೀರ್ ಪರಾಟ, ಬಟರ್ ಪನೀರ್ ಮಸಾಲ, ಪನೀರ್ ಗೀ ರೋಸ್ಟ್ ಇತ್ಯಾದಿಗಳು ಬಾಯಿಯಲ್ಲಿ ನೀರೂರಿಸುವಂತೆ ಮಾಡುತ್ತೆ.
ಇನ್ನು ಪನೀರ್ ಪೇಪ್ಪರ್ ಫ್ರೈ ಸವಿಯಲು ಸಿಕ್ಕಾಪಟ್ಟೆ ರುಚಿಯ ಖಾದ್ಯ ಎನಿಸಿದೆ. ಪನೀರ್ ಮೂಲಕ ಮಾಡಬಹುದಾದ ಈ ಪೆಪ್ಪರ್ ಫ್ರೈ ಮಸಲಾ ಬಾಯಿ ರುಚಿಗೆ ಹೇಳಿ ಮಾಡಿಸಿದ ಖಾದ್ಯ, ಬರಿ ಬಾಯಿಗೆ ಸವಿಯಬಹುದು. ಜೊತೆಗೆ ಪರೋಟ, ಚಪಾತಿ, ಅನ್ನ, ಪಾಲವ್ ಸೇರಿ ಎಲ್ಲಾ ರೀತಿಯ ಖಾದ್ಯದ ಜೊತೆಯೂ ಚಪ್ಪರಿಸಿ ತಿನ್ನಬಹುದು.

ಫ್ರೀ ಟೈಮ್‌ನಲ್ಲಿ ನೀವೇನಾದ್ರು ಒಳ್ಳೆಯ ಖಾದ್ಯ ಮಾಡಬೇಕು ಅಂದುಕೊಂಡ್ರೆ ಈ ಪನೀರ್ ಪೆಪ್ಪರ್ ಫ್ರೈಗೆ ಮೊದಲ ಆಧ್ಯತೆ ಕೊಡಿ. ಈ ಫ್ರೈ ಮಾಡಲು ಹಲವು ವಿಧಾನಗಳಿವೆ ಆದ್ರೆ ನಾವಿಂದು ಡ್ರೈ ಪೆಪ್ಪರ್ ಫ್ರೈ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಪೆಪ್ಪರ್ ಡ್ರೈ ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ ಎಂಬ ಕುರಿತ ವಿವರಣೆಯನ್ನು ನೋಡೋಣ.
ಪನೀರ್ ಪೆಪ್ಪರ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ಪನೀರ್ - 200 ಗ್ರಾಂ
- ಈರುಳ್ಳಿ (ಕತ್ತರಿಸಿದ) - 3
- ಹಸಿರು ಮೆಣಸಿನಕಾಯಿ - 4
- ಕ್ಯಾಪ್ಸಿಕಂ- 1/2
- ಕರಿಮಣಸು - 1 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ಸೋಕಾಳು- 1/4 ಟೀಸ್ಪೂನ್
- ಲವಂಗ- 1
- ದಾಲ್ಚಿನ್ನಿ- 1
- ಕೊತ್ತಂಬರಿ ಕಾಳು- 1/2 ಟೀಸ್ಪೂನ್
- ಕೆಂಪು ಮೆಣಸಿನಕಾಯಿ - 3
- ಕರಿಬೇವು - 2 tbs
- ಅರಿಶಿನ ಪುಡಿ - 1/4 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಪನೀರ್ ಪೆಪ್ಪರ್ ಫ್ರೈ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕದೆಯೆ ಅದಕ್ಕೆ ಕರಿಮೆಣಸು, ಸೋಂಕಾಳು, ಜೀರಿಗೆ, ಸೋಂಕಾಳು, ಲವಂಗ, ಚಕ್ಕೆ, ಕೊತ್ತಂಬರಿ ಕಾಳು, ಒಣಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿ ಬಳಿಕ ತೆಗೆದು ಅದನ್ನು ಮತ್ತೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.
ಬಳಿಕ ಅದೇ ಪಾತ್ರೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಉಪ್ಪು, ಹಸಿ ಮೆಣಸು, ಕರಬೇವಿನ ಸೊಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಅರ್ಧ ಕಪ್ ಕ್ಯಾಪ್ಸಿಕಂ, ಹಾಕಿ ಫ್ರೈ ಮಾಡಿ. ಇದನ್ನು ಸಣ್ಣ ಉರಿಯಲ್ಲಿ ಬಿಟ್ಟು ಇನ್ನೊಂದು ಕಡೆ ಫ್ರೈ ಮಾಡಿಕೊಂಡಿರುವ ಮಸಾಲೆಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಬಳಿಕ ರುಬ್ಬಿಕೊಂಡ ಮಸಾಲೆಯನ್ನು ಒಲೆ ಮೇಲಿರುವ ಪಾತ್ರೆಗೆ ಹಾಕಿಕೊಂಡು ಮಿಶ್ರಣ ಮಾಡಿ. ಬಳಿಕ ಅದಕ್ಕೆ ಪನೀರ್ ಅನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಪನೀರ್ ಅನ್ನು ಸಣ್ಣದಾಗಿಯೂ ಹೆಚ್ಚಿಕೊಳ್ಳಬಹುದು. ಅಥವಾ ದೊಡ್ಡ ದೊಡ್ಡ ಚೌಕಾಕಾರದಲ್ಲೂ ಹೆಚ್ಚಿಕೊಳ್ಳಬಹುದು. ಪನೀರ್ ಬೇಗ ಬೇಯುತ್ತದೆ. ಹೀಗಾಗಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 2ರಿಂದ 3 ನಿಮಿಷದಲ್ಲಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪನೀರ್ ಫ್ರೈ ಸವಿಯಲು ಸಿದ್ಧವಾಗುತ್ತದೆ.



Click it and Unblock the Notifications