Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನ್ನದ ಜೊತೆಗೆ ಅದ್ಬುತ ರುಚಿಯ ಪಾಲಕ್ ತಂಬುಳಿ ಮಾಡಿ.! ನಿತ್ಯ ಸವಿಯಲು ಮುಂದಾಗೋದು ಪಕ್ಕ!
ಬೇಸಿಗೆಯ ಕಾಲದಲ್ಲಿ ದೇಹ ತಂಪಾಗಿಸುವಂತಹ ಹಲವು ರೀತಿ ಖಾದ್ಯ, ಹುಳಿ, ಸಾರು ಮಾಡಿ ಸವಿಯುವುದು ಸಾಮಾನ್ಯ. ಇನ್ನು ಊಟದ ಜೊತೆಗೆ ನೀವು ಯಾವುದಾದರು ತಂಪಿನ ಹುಳಿ ಮಾಡಲು ಆಲೋಚಿಸುತ್ತಿದ್ದರೆ ನಿಮ್ಮ ಅಡುಗೆ ರುಚಿ ಹೆಚ್ಚಿಸುವ ಹಲವು ಖಾದ್ಯ ನಿಮಗೆ ಹೊಳೆಯಬಹುದು. ಅದರಲ್ಲೂ ತಂಬುಳಿಗಳ ಮಾಡಿ ಸವಿಯುವುದು ಎಲ್ಲರ ಮೆಚ್ಚಿನ ಆಯ್ಕೆ ಆಗಬಹುದು.
ಯಾವುದೇ ತುಂಬುಳಿ ಮಾಡಲು ಕಡಿಮೆ ವಸ್ತುಗಳು, ಕಡಿಮೆ ಮಸಾಲೆ ಬಳಸುವುದು ದೇಹಕ್ಕೆ ಇದು ಬಹಳ ಉತ್ತಮ. ತಂಬುಳಿ ನಿಮ್ಮ ದೇಹವನ್ನು ತಂಪಾಗಿಸಲಿದೆ. ಹಾಗೆ ತಂಬುಳಿಯಲ್ಲಿ ಹಲವು ಬಗೆಗಳಿವೆ. ನಾವಿಂದು ಪಾಲಕ್ ಸೊಪ್ಪಿನ ತಂಬುಳಿ ಮಾಡುವ ಕುರಿತು ತಿಳಿದುಕೊಳ್ಳೋಣ. ಪಾಲಕ್ ದೇಹಕ್ಕೆ ತಂಪು ನೀಡುವಂತಹ ಸೊಪ್ಪಾಗಿದೆ. ಹಾಗೆ ಅತ್ಯುತ್ತಮ ಕ್ಯಾಲ್ಸಿಯಂ, ಕಬ್ಭಿಣಾಂಶ ಹೆಚ್ಚಾಗಿದೆ.

ಅದರಲ್ಲೂ ತಂಬುಳಿ ದೇಹಕ್ಕೆ ಬಹಳ ತಂಪಾಗುತ್ತದೆ. ಹಾಗೆ ಊಟದ ರುಚಿಯನ್ನೂ ಕೂಡ ಹೆಚ್ಚಿಸಲಿದೆ. ನೀವು ಯಾವುದೇ ತರಕಾರಿ, ಅಥವಾ ಕೆಲವೇ ವಸ್ತುಗಳ ಬಳಸಿಕೊಂಡು ಮಾಡಬಹುದಾಗಿದೆ. ಹಾಗಾದ್ರೆ ಪಾಲಕ್ ಸೊಪ್ಪಿನಿಂದ ಮಾಡುವಂತಹ ಘಮ ಘಮಿಸುವ ಈ ತಂಬುಳಿ ಕುರಿತು ನಾವಿಂದು ತಿಳಿದುಕೊಳ್ಳೋಣ. ಪಾಲಕ್ ಸೊಪ್ಪಿನ ಈ ತಂಬುಳಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಹಿಡಿಯಲಿದೆ ಎನ್ನುವುದು ನಾವಿಂದು ತಿಳಿದುಕೊಳ್ಳೋಣ.
ಪಾಲಕ್ ಸೊಪ್ಪಿನ ತಂಬುಳಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪಾಲಕ್ ಸೊಪ್ಪು- 1 ಕಟ್ಟು
- ತುಪ್ಪ - 1 ಚಮಚ
- ಕಾಳು ಮೆಣಸು - 1 ಚಮಚ
- ಜೀರಿಗೆ - 1 ಚಮಚ
- ಒಣ ಮೆಣಸು
- ಸಾಸಿವೆ
- ಉದ್ದಿನ ಬೇಳೆ
- ಕರಿಬೇವು
- ಬೆಳ್ಳುಳ್ಳಿ - 6,
- ಹಸಿ ಮೆಣಸಿನಕಾಯಿ - 1 ಚಮಚ
- ಕೊತ್ತಂಬರಿ ಸೊಪ್ಪು
- ಮೊಸರು
- ಉಪ್ಪು
- ಎಣ್ಣೆ
ಪಾಲಕ್ ಸೊಪ್ಪಿನ ತಂಬುಳಿ ಮಾಡುವುದು ಹೇಗೆ?
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಜೀರಿಗೆ, ಕಾಳು ಮೆಣಸು, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷದ ಬಳಿಕ ತೊಳೆದುಕೊಂಡಿರುವ ಪಾಲಕ್ ಸೊಪ್ಪನ್ನು ಇಡಿಯಾಗಿ ಹಾಕಿ, ಹಾಗೆ ಕೊತ್ತಂಬರಿ ಸೊಪ್ಪು ಕೂಡ ಹಾಕಿ ಫ್ರೈ ಮಾಡಿಕೊಳ್ಳಿ.
ಇದು ಚೆನ್ನಾಗಿ ಫ್ರೈ ಆಗಿ ಸೊಪ್ಪು ಬಾಡಿಕೊಳ್ಳಬೇಕು ಹೀಗಾಗಿ 2ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿ. ಪಾತ್ರೆಯ ಬಿಸಿಯಲ್ಲಿ ಸ್ವಲ್ಪ ಬಾಡಿಕೊಂಡರೆ ಸಾಕು, ಈಗ ಈ ಎಲ್ಲಾ ಮಸಾಲೆಗಳ ತಣ್ಣಗಾಗಲು ಬಿಡಿ. ಈ ವಸ್ತುಗಳು ತಣ್ಣಗಾದ ಬಳಿಕ ಈಗ ಒಂದು ಮಿಕ್ಸಿ ಜಾರ್‌ಗೆ ಈ ಎಲ್ಲಾ ವಸ್ತುಗಳ ತುಂಬಿಸಿಕೊಳ್ಳಿ.
ನಂತರ ಸಣ್ಣದಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಈ ಮಸಾಲೆಯನ್ನು ಬದಿಗಿಟ್ಟುಕೊಂಡು ಒಂದು ಪಾತ್ರೆಯಲ್ಲಿ ಈಗ ಅರ್ಧ ಲೀಟರ್ ಮೊಸರು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಗಟ್ಟಿ ಮಜ್ಜಿಗೆಯಂತೆ ಆಗಬೇಕು ಹೀಗಾಗಿ ಸ್ವಲ್ಪ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಈಗ ಮಿಕ್ಸಿಯಲ್ಲಿ ರುಬ್ಬಿರುವ ಈ ಮಸಾಲೆಗಳನ್ನು ಮಜ್ಜಿಗೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ತುಪ್ಪ ಅಥವಾ ಎಣ್ಣೆ ಹಾಕಿಕೊಂಡು ಸಾಸಿವೆ, ಜೀರಿಗೆ ಉದ್ದಿನಬೇಳೆ, ಕರಿಬೇವು, ಒಣ ಮೆಣಸು, ಇಂಗು ಹಾಕಿ ಒಗ್ಗರಣೆ ಮಾಡಿ ಈಗ ತಂಬುಳಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ತಂಪು ತಂಪಿನ ತಂಬುಳಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ತಂಬುಳಿ ಮಾಡಿ ನೋಡಿ. ಅನ್ನದ ಜೊತೆಗೆ ಸವಿಯಲು ಅಮೃತದ ರುಚಿ ನೀಡಲಿದೆ.



Click it and Unblock the Notifications