Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಪಾತಿ, ಅನ್ನ, ದೋಸೆಗೆ ಈರುಳ್ಳಿ-ಟೊಮೆಟೋ ಚಟ್ನಿ..! ಮಾಡೋದು ಸುಲಭ..!
ಬೆಳಗ್ಗೆಯ ತಿಂಡಿಯ ಜೊತೆಗೆ ಒಂದು ಚಟ್ನಿ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಆದ್ರೆ ಯಾವ ಕಾಂಬಿನೇಷನ್ ಚಟ್ನಿ ಯಾವ ತಿಂಡಿಗೆ ರುಚಿಕರವಾಗಿರುತ್ತೆ ಅನ್ನೋದು ಮಾತ್ರ ಗೊತ್ತಿರಲ್ಲ. ಏಕೆಂದರೆ ನಾವು ಬಹುತೇಕ ಎಲ್ಲಾ ಖಾದ್ಯಕ್ಕೂ ತೆಂಗಿನ ಕಾಯಿ ಚಟ್ನಿ ಮಾಡುತ್ತೇವೆ. ಇದು ಚಪಾತಿ, ದೋಸೆ, ಇಡ್ಲಿ ಸೇರಿ ಎಲ್ಲಾ ಬಗೆಯ ಖಾದ್ಯಕ್ಕೂ ರುಚಿ ತರುತ್ತದೆ. ಹೀಗಾಗಿ ನಾವು ಹೊಸ ರುಚಿಯ ಹೊಸ ಬಗೆಯ ಚಟ್ನಿ ಮಾಡುವುದಿಲ್ಲ ಯಾವಾಗಲು ಇದೇ ಚಟ್ನಿ ಮಾಡುತ್ತಿರುತ್ತೇವೆ.
ಆದ್ರೆ ಚಪಾತಿ, ದೋಸೆ, ಇಡ್ಲಿ ಸೇರಿದಂತೆ ಎಲ್ಲಾ ಖಾದ್ಯದ ಜೊತೆಗೆ ಸರಿಯಾಗಿ ಹಿಡಿಸುವ ಚಟ್ನಿ ಅಂದ್ರೆ ಅದು ಟೊಮೆಟೋ, ಈರುಳ್ಳಿ ಚಟ್ನಿಯಾಗಿದೆ. ಇದರ ರುಚಿಯನ್ನ ನೀವು ಒಮ್ಮೆ ನೋಡಿದರೆ ಮತ್ತೆಂದಿಗೂ ನೀವು ಕಾಯಿ ಚಟ್ನಿ ಮಾಡಲು ಮನಸ್ಸಾಗಲ್ಲ. ಅಷ್ಟೊಂದು ರುಚಿಕರ ಚಟ್ನಿ ಇದಾಗಿದೆ.

ಹಾಗೆ ಈ ಟೊಮೆಟೋ ಈರುಳ್ಳಿ ಚಟ್ನಿ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಸುಲಭವಾಗಿ ಕಡಿಮೆ ವಸ್ತು ಹಾಕಿ ಗಡಿಬಿಡಿಯ ನಡುವೆಯೇ ಮಾಡಿ ಬಿಡಬಹುದು. ಹಾಗಾದ್ರೆ ನಾವಿಂದು ಈ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ? ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ ನೋಡಿ.
ಈರುಳ್ಳಿ, ಟೊಮೆಟೋ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಈರುಳ್ಳಿ - 2
- ಟೊಮೆಟೋ -3
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಪುದಿನ ಸೊಪ್ಪು
- ಹಸಿಮೆಣಸಿನ ಕಾಯಿ
- ಒಣ ಮೆಣಸಿನಕಾಯಿ
- ಎಣ್ಣೆ
- ಬೆಳ್ಳುಳ್ಳಿ
- ಶುಂಠಿ
- ಹುಣಸೆಹಣ್ಣು
- ಸಾಸಿವೆ
- ಉಪ್ಪು
ಈರುಳ್ಳಿ, ಟೊಮೆಟೋ ಚಟ್ನಿ ಮಾಡುವ ವಿಧಾನ
ಮೊದಲು ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿ ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಒಣ ಮೆಣಸು 4, ಹೆಚ್ಚಿರುವ 2 ಈರುಳ್ಳಿ ಹಾಕಿಕೊಂಡು 5 ನಿಮಿಷ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಚೆನ್ನಾಗಿ ಬೇಯಬೇಕು. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಕೊತ್ತಂಬರಿ, ಪುದಿನ ಸೊಪ್ಪು, ಕರಿಬೇವಿನ ಸೊಪ್ಪು ಸಹ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಹುಣಸೆ ಹುಳಿ, ತೆಂಗಿನ ತುರಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಆದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದನ್ನು ರುಬ್ಬಿಕೊಳ್ಳಬೇಕು. ರುಬ್ಬುವಾಗ ಉಪ್ಪು ಹಾಕಿಕೊಳ್ಳಿ. ಹಾಗೆ ನೀರು ಸಹ ಯಾವ ಹದಕ್ಕೆ ಬೇಕೋ ಆ ರೀತಿ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ನಂತರ ರುಬ್ಬಿದ ಚಟ್ನಿ ಒಂದು ಬೌಲ್‌ಗೆ ಹಾಕಿಕೊಳ್ಳಿ. ಈಗ ಇಂದು ಸಣ್ಣ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಗೂ ಕರಿಬೇವು ಬಿಸಿ ಮಾಡಿಕೊಂಡು ಈ ಚಟ್ನಿಗೆ ಹಾಕಿಕೊಂಡರೆ ರುಚಿ ರುಚಿಯ ಚಟ್ನಿ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಚಟ್ನಿ ಮಾಡಿ ನೋಡಿ. ಇದು ಚಪಾತಿ, ಇಡ್ಲಿ, ದೋಸೆ ಸೇರಿ ಅನ್ನಕ್ಕೂ ಕೂಡ ಬಳಸಬಹುದು. ಇದರ ರುಚಿಯನ್ನು ಒಮ್ಮೆ ಸವಿದು ನೋಡಿ.



Click it and Unblock the Notifications