Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ನಿಮಿಷದಲ್ಲಿ ಥಟ್ ಎಂದು ಮಾಡಿ ಈರುಳ್ಳಿ ರೈಸ್..!
ನೀವು ಬೆಳಗ್ಗೆ ತಿಂಡಿ ಸಮಯಕ್ಕೆ ರುಚಿ ರುಚಿಯಾಗಿ ಯಾವುದಾದರು ಖಾದ್ಯ ಸವಿಯಲು ಬಹಳ ಇಷ್ಟಪಡುವ ಮಂದಿ ಆಗಿರಬಹುದು. ಆದ್ರಲ್ಲೂ ರೈಸ್‌ನಿಂದ ಮಾಡುವಂತಹ ಬಗೆ ಬಗೆಯ ಖಾದ್ಯಗಳ ಸವಿಯಲು ನಿಮಗೂ ಇಷ್ಟವಾಗಬಹುದು. ಸಾಮಾನ್ಯವಾಗಿ ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ, ಟೊಮೆಟೋ ಬಾತ್, ವಾಂಗೀಬಾತ್ ಹೀಗೆ ರೈಸ್ ಬಳಸಿ ಮಾಡುವಂತಹ ವಿವಿಧ ರೀತಿಯ ಖಾದ್ಯಗಳು ನಿಮ್ಮ ಬಾಯಲ್ಲಿ ನೀರು ತರಿಸಬಹುದು.
ಹೀಗೆ ಉಳಿದ ರೈಸ್‌ನಿಂದಲೂ ಬಗೆ ಬಗೆಯ ಖಾದ್ಯಗಳ ಮಾಡಿ ಸವಿಯುವುದುಂಟು. ಹಾಗೆ ಅದಕ್ಕಿಂತಲೂ ವಿಶೇಷವಾಗಿ ಬೆಳಗ್ಗೆ ತಿಂಡಿಗೆ ಸವಿಯಲು ರುಚಿ ರುಚಿಯ ಈರುಳ್ಳಿ ರೈಸ್ ಮಾಡಿ ಸವಿಯುವ ಕುರಿತು ತಿಳಿಯೋಣ. ಬೆಳಗ್ಗೆ ತಿಂಡಿ ಮಾಡಲು ಸಮಯ ಇಲ್ಲದಿದ್ದರೆ ಅಥವಾ ಗಡಿಬಿಡಿಯಲ್ಲಿದ್ದಾಗ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ರೈಸ್ ಮಾಡಬಹುದು.

ಸಾಮಾನ್ಯವಾಗಿ ಬೆಳಗ್ಗೆ ಥಟ್ ಎಂದು ಮಾಡಬಹುದಾದ ತಿಂಡಿ ಅಂದ್ರೆ ಅದು ಈ ಈರುಳ್ಳಿ ರೈಸ್. ಹಾಗಾದ್ರೆ ಇದನ್ನು ಮಾಡುವುದು ಹೇಗೆ? ಈ ಈರುಳ್ಳಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಈರುಳ್ಳಿ
ಅನ್ನ
ಖಾರದ ಪುಡಿ
ಹುಣಸೆ ಹುಳಿ
ಬೆಲ್ಲ
ರಸಂ ಪುಡಿ ಇಲ್ಲವೆ ಸಾಂಬಾರ್ ಪುಡಿ
ಅರಶಿಣ
ಒಣ ಮೆಣಸು
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಈರುಳ್ಳಿ ರೈಸ್ ಮಾಡುವುದು ಹೇಗೆ?
ಮೊದಲಿಗೆ ಅನ್ನ ಇಲ್ಲದಿದ್ದರೆ ಅನ್ನ ಮಾಡಿಕೊಳ್ಳಿ. ಹಳೆಯ ಅನ್ನದಿಂದಲೂ ಈ ರೈಸ್ ಮಾಡಬಹುದು. ಈಗ ಎರಡರಿಂದ ಮೂರು ಈರುಳ್ಳಿಗಳನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ, ಜೀರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕರಿಬೇವು, ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಅರಶಿಣ, ಉಪ್ಪು, ಹಾಗೆ ರಸಂ ಪುಡಿ ಇದ್ದರೆ ಹಾಕಿಕೊಳ್ಳಿ. ಇದಿಲ್ಲದಿದ್ದರೆ ಖಾದ ಪುಡಿ, ಧನಿಯಾ ಪುಡಿ ಸ್ವಲ್ಪ ಹಾಕಿಕೊಳ್ಳಬಹುದು. ಒಮ್ಮೆ ಮಿಕ್ಸ್ ಮಾಡಿಕೊಂಡ ಬಳಿಕ ಈಗ ಹುಣಸೆ ಹುಳಿಯ ನೀರು, ಹಾಗೆ ಬೆಲ್ಲದ ಪುಡಿಯನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 2 ನಿಮಿಷ ಮಿಕ್ಸ್ ಮಾಡಿದ ಬಳಿಕ ಅನ್ನ ಹಾಕಬೇಕು.
ಅನ್ನವನ್ನು ಹುಡಿ ಹುಡಿಯಾಗಿ ಮಾಡಿಕೊಂಡು ಅನ್ನವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಸಾಲೆ ಚೆನ್ನಾಗಿ ಹಿಡಿದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈರುಳ್ಳಿ ರೈಸ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಅದ್ರಲ್ಲೂ ಬೆಳಗ್ಗೆ ಗಡಿಬಿಡಿಯಲ್ಲಿ ಈ ರೈಸ್ ಥಟ್ ಅಂತ ಮಾಡಿ ನೋಡಿ. ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಈ ರೈಸ್ ಅದ್ಭುತ ರುಚಿ ನೀಡಲಿದೆ.
ಈ ರೈಸ್ ಮಾಡಲು 5 ನಿಮಷವೂ ಸಮಯ ಹಿಡಿಯೋದಿಲ್ಲ. ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಥಟ್ ಎಂದು ರೆಡಿ ಮಾಡಿಕೊಳ್ಳಬಹುದು. ಮಾಡೋದು ಕೂಡ ಸುಲಭವಾಗಿದೆ. ರಾತ್ರಿ ರೈಸ್ ಉಳಿದಾಗಲೂ ಕೂಡ ಇದನ್ನು ಮಾಡಿ ಸವಿಯಬಹುದು. ನೀವು ಒಮ್ಮೆ ಮಾಡಿ ಸವಿದರೆ ಪದೇ ಪದೇ ಮಾಡಲು ಮುಂದಾಗೋದು ಖಚಿತ.



Click it and Unblock the Notifications