Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ
ಬೆಳಗ್ಗೆ ಎದ್ದ ಕೂಡಲೇ ಹಲವರು ರುಚಿ ರುಚಿಯ ಖಾದ್ಯಗಳ ಸವಿಯೋಕೆ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ರೈಸ್‌ನಿಂದ ಮಾಡುವ ಖಾದ್ಯಗಳು ಅದ್ರೆ ಹಲವು ಬಗೆಗಳು ನೆನಪಿಗೆ ಬರಲಿದೆ. ಅದ್ರಲ್ಲೂ ಪಲಾವ್, ಪುಳಿಯೋಗರೆ, ರೈಸ್ ಬಾತ್, ಚಿತ್ರಾನ್ನ ಸೇರಿದಂತೆ ಹಲವು ಬಗೆಯ ರೈಸ್‌ನಿಂದ ಮಾಡುವ ಖಾದ್ಯಗಳನ್ನು ನಿತ್ಯ ಸವಿಯೋದು ಕಾಮನ್. ಆದ್ರೆ ನಾವಿಂದು ಉಳಿದ ಅನ್ನದಿಂದಲೇ ವಿಶೇಷ ಬಗೆಯ ರುಚಿ ರುಚಿಯಾದ ರೈಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಹಿಂದಿನ ದಿನ ಉಳಿದ ರೈಸ್‌ನಿಂದ ಚಿತ್ರಾನ್ನ, ಪುಳಿಯೋಗರೆ ಸೇರಿ ಕೆಲವೊಂದು ತಿನಿಸುಗಳ ಮಾಡಬಹುದು. ಹಾಗೆ ಈ ಈರುಳ್ಳಿ ಅನ್ನ ಸಹ ಮಾಡಿ ಸವಿಯಬಹುದು. ಚಿತ್ರಾನ್ನಕ್ಕಿಂತ ಅದ್ಭುತ ರುಚಿ ತರುವ ಈ ರೈಸ್ ನೀವು ಸಹ ಮನೆಯಲ್ಲಿ ಮಾಡಿ ಸವಿದು ನೋಡಿ. ಬೆಳಗ್ಗೆ ತಿಂಡಿಗೆ ಮಾತ್ರವಲ್ಲ ಮಧ್ಯಾಹ್ನದ ಬಾಕ್ಸ್‌ಗೂ ಸಹ ಇದು ರುಚಿ ನೀಡುವ ಖಾದ್ಯ.
ಹಾಗಾದ್ರೆ ಉಳಿದ ಅನ್ನ ಬಳಸಿಕೊಂಡು ಈ ಮಸಾಲ ಈರುಳ್ಳಿ ರೈಸ್ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಈ ಈರುಳ್ಳಿ ರೈಸ್ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ
- ಅನ್ನ
- ಒಣ ಮೆಣಸು
- ಸಾಸಿವೆ
- ಕಡಲೆ ಬೇಳೆ
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಎಣ್ಣೆ
- ಉಪ್ಪು
- ಕರಿಬೇವು
ಈರುಳ್ಳಿ ರೈಸ್ ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಇದಕ್ಕೆ ಸಾಸಿವೆ, ಕಡಲೆ ಬೇಳೆ, ಬೆಳ್ಳುಳ್ಳಿ, ಹಸಿ ಮೆಣಸು, ಒಣ ಮೆಣಸನ್ನು ಒಂದೊಂದಾಗಿ ಹಾಕಿಕೊಂಡು ಫ್ರೈ ಆಗಲು ಬಿಡಿ. ನಂತರ ಇದಕ್ಕೆ ಈರುಳ್ಳಿ ಹಾಕಿಕೊಂಡು ಹಾಗೆ ಕರಿಬೇವು ಹಾಕಿ 2 ನಿಮಿಷ ಫ್ರೈ ಆಗಲು ಬಿಡಿ. ಹಾಗೆ ಇದಕ್ಕೆ ಖಾರದ ಪುಡಿ, ಅರಶಿಣ, ಗರಂ ಮಸಾಲ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಇದಕ್ಕೆ ಹುಣಸೆ ಹುಳಿಯ ನೀರನ್ನು ಹಾಕಿಕೊಳ್ಳಬೇಕು ನಂತರ ಸಣ್ಣ ಉರಿಯಲ್ಲಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಇದು ಗೊಜ್ಜಿನ ಹದಕ್ಕೆ ಬರಬೇಕು. ಈಗ ಹಿಂದಿನ ದಿನ ಉಳಿದಿದ್ದ ಅನ್ನವನ್ನು ಹಾಕಿಕೊಳ್ಳಿ. ಅಥವಾ ಬೆಳಗ್ಗೆ ಸಹ ಅನ್ನ ರೆಡಿ ಮಾಡಿಕೊಳ್ಳಬಹುದು. ಸಣ್ಣ ಉರಿಯಲ್ಲಿ ಅನ್ನವನ್ನು ಮಿಕ್ಸ್ ಮಾಡುತ್ತಾ ಇರಬೇಕು. 2 ನಿಮಿಷ ಮಿಕ್ಸ್ ಮಾಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
ಕೊನೆಯಲ್ಲಿ ಉಪ್ಪು ರುಚಿ ನೋಡಿ ಬೇಕಿದ್ದರೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈರುಳ್ಳಿ ರೈಸ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ರೈಸ್ ಥಟ್ ಅಂತ ರೆಡಿ ಮಾಡಿಕೊಂಡು ಸವಿದು ನೋಡಿ. ಮಧ್ಯಾಹ್ನದ ಬಾಕ್ಸ್‌ಗೂ ಇದು ಹೇಳಿ ಮಾಡಿಸಿದ ತಿಂಡಿಯಾಗಲಿದೆ. ಮಕ್ಕಳಿಗೂ ಸಹ ಇದು ಇಷ್ಟವಾಗುತ್ತೆ.



Click it and Unblock the Notifications
