Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನ್ನ-ಚಪಾತಿ ಊಟದೊಂದಿಗೆ ಫಸ್ಟ್ ಕ್ಲಾಸ್ ರುಚಿಯ ಪಾಲಕ್ ಈರುಳ್ಳಿ ಚಟ್ನಿ!
vಊಟದೊಂದಿಗೆ ನೀವು ರುಚಿ ರುಚಿಯಾದ ಚಟ್ನಿ, ಪಲ್ಯ ಇರಬೇಕು ಎಂದು ಭಾವಿಸುತ್ತೀರಿ, ಹಾಗೆ ಅಡುಗೆ ಮನೆಯಲ್ಲಿ ಈ ರೀತಿ ವಿಶೇಷ ರುಚಿಯ ಖಾದ್ಯಗಳ ಮಾಡಿದ್ದರೆ ಊಟದ ರುಚಿ ದುಪ್ಪಟ್ಟಾಗುತ್ತೆ. ಇನ್ನು ಊಟದೊಂದಿಗೆ ನೀವು ಆರೋಗ್ಯಕರವಾದ ಯಾವುದಾದು ಖಾದ್ಯ ಸವಿಯಲು ನೀವು ಇಷ್ಟಪಡುತ್ತಿದ್ದರೆ ನಾವಿಂದು ಪಾಲಕ್ ಈರುಳ್ಳಿ ಚಟ್ನಿ ಮಾಡುವ ಕುರಿತು ತಿಳಿಸುತ್ತಿದ್ದೇವೆ.
ಪಾಲಕ್ ಸೊಪ್ಪು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ಆಹಾರ. ಇನ್ನು ಅನ್ನೊಂದಿಗೆ, ಚಪಾತಿಯೊಂದಿಗೆ ಸವಿಯಲು ಈ ಈರುಳ್ಳಿ, ಪಾಲಕ್ ಚಟ್ನಿ ಮಾಡಿದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಚಿತ. ಹಾಗೆ ಈ ಚಟ್ನಿಯನ್ನು ಸುಲಭವಾಗಿ, ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು.

ಈ ಚಟ್ನಿಯನ್ನು ಅನ್ನ, ಚಪಾತಿಯೊಂದಿಗೆ ಸೇರಿ ಹಲವು ಖಾದ್ಯಗಳೊಂದಿಗೆ ಸವಿಯಲು ರುಚಿಯಾಗಿರಲಿದೆ. ಹಾಗೆ ಇದನ್ನು ಕೆಲವೇ ವಸ್ತುಗಳ ಬಳಸಿ ಮಾಡಬಹುದು. ಹಾಗಾದ್ರೆ ಪಾಲಕ್ ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾಲಕ್ ಈರುಳ್ಳಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳೇನು?
- ಪಾಲಕ್ ಸೊಪ್ಪು
- ಈರುಳ್ಳಿ
- ಖಾರದ ಪುಡಿ
- ಬೆಳ್ಳುಳ್ಳಿ
- ಎಣ್ಣೆ
- ಸಾಸಿವೆ
- ಕರಿಬೇವಿನ ಸೊಪ್ಪು
- ಬ್ಯಾಡಿಗೆ ಮೆಣಸಿನ ಕಾಯಿ
- ಇಂಗು
- ಉದ್ದಿನ ಬೇಳೆ
- ಎಣ್ಣೆ
- ಉಪ್ಪು
ಪಾಲಕ್ ಈರುಳ್ಳಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹಚ್ಚಿಕೊಳ್ಳಬೇಕು. ಎಷ್ಟು ಸಣ್ಣದಾಗಿ ಹೆಚ್ಚಿಕೊಳ್ಳಲು ಸಾಧ್ಯವೋ ಅಷ್ಟು ಸಣ್ಣದಾಗಿ ಹೆಚ್ಚಿಕೊಳ್ಳಿ. ಹಾಗೆ 2ರಿಂದ 3 ಈರುಳ್ಳಿಯನ್ನು ಕೂಡ ಸಣ್ಣದಾಗಿ ಹೆಚ್ಚಿಕೊಂಡು ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ ಹಾಗೆ ಖಾರದ ಪುಡಿ, ಉಪ್ಪ, ಬೆಳ್ಳುಳ್ಳಿ ಹಾಕಿಕೊಂಡು ನುಣ್ಣಗೆ ರುಬ್ಬಕೊಳ್ಳಬೇಕು. ನೀರು ಹಾಕದೆಯೇ ರುಬ್ಬಿಕೊಳ್ಳಬೇಕು
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಬೇಕು. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ, ಕರಿಬೇವು, ಬ್ಯಾಡಗಿ ಮೆಣಸು, ಇಂಗು, ಹಾಕಿ ಬಿಸಿ ಮಾಡಿ. ಈಗ 1 ಸ್ಪೂನ್ ಉದ್ದಿನ ಬೇಳೆ ಹಾಕಿ. ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಈರುಳ್ಳಿ ಪೇಸ್ಟ್ ಅನ್ನು ಇದಕ್ಕೆ ಹಾಕಿ 3 ನಿಮಿಷಗಳ ಕಾಲ ಹುರಿದುಕೊಳ್ಳಿ.
3ರಿಂದ 4 ನಿಮಿಷದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿದ್ದ ಪಾಲಕ್ ಸೊಪ್ಪನ್ನು ಸಹ ಹಾಕಿಕೊಂಡು ಕಲಸಿಕೊಳ್ಳಿ. ಕೈ ಬಿಡದೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು, ಅರಶಿಣ, ಧನಯಾ ಪುಡಿ, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ ಬಳಿಕ ಕೊತ್ತಂಬರಿ ಸೊಪ್ಪು ಹಾಕಿಕೊಂಡು 5 ನಿಮಿಷ ಮುಚ್ಚಳ ಮುಚ್ಚಿ ಇಡಿ. ಉರಿ ಸಣ್ಣದಾಗಿ ಇರಲಿ.
ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ಈರುಳ್ಳಿ ಚಟ್ನಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಊಟದೊಂದಿಗೆ ಬಹಳ ರುಚಿ ನೀಡಲಿದೆ. ಹಾಗೆ ಎಲ್ಲರಿಗೂ ಇಷ್ಟವಾಗುವ ಖಾದ್ಯ ಇದಾಗಿರಲಿದೆ. ಇದನ್ನು ಮಾಡುವುದು ಕೂಡ ಬಹಳ ಸುಲಭ ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು.



Click it and Unblock the Notifications