Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅದ್ಭುತ ರುಚಿಯ ಈರುಳ್ಳಿ ಕುರ್ಮ ಮಾಡುವುದು ಹೇಗೆ? ಇಲ್ಲಿದೆ 4 ನಿಮಿಷದ ರೆಸಿಪಿ
ವಿಶೇಷ ದಿನದ ಸಮಯದಲ್ಲಿ ಅಥವಾ ವಿಭಿನ್ನವಾಗಿ ಬೆಳಗ್ಗೆಯ ಖಾದ್ಯವನ್ನು ಮಾಡುವ ದಿನದಂದು ನೀವು ರೈಸ್‌ನಿಂದ ಮಾಡುವ ಹಲವು ತಿಂಡಿ ಮಾಡಿರುತ್ತೀರಿ. ಇನ್ನು ಈ ಸಮಯದಲ್ಲಿ ರೈಸ್‌ನೊಂದಿಗೆ ಸವಿಯಲು ಅಥವಾ ಪಲಾವ್, ರೈಸ್‌ಬಾತ್‌ನೊಂದಿಗೆ ಯಾವುದಾದರು ರುಚಿ ರುಚಿಯಾದ ಖಾದ್ಯವನ್ನು ಸವಿಯಲು ನೀವು ಬಯಸೋದು ಕಾಮನ್.
ಇಂತಹ ಖಾದ್ಯಗಳ ಪೈಕಿ ನಾವಿಂದು ಈರುಳ್ಳಿ ಕುರ್ಮ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಈರುಳ್ಳಿ ಕುರ್ಮವನ್ನು ನೀವು ಎಲ್ಲಾ ತಿಂಡಿಯೊಂದಿಗೆ ಹಾಗೆ ಊಟದ ಜೊತೆಗೆ ಸವಿಯಬಹುದು. ನೀವು ಸಹ ತರಕಾರಿಯಿಂದ ಮಾಡುವ ಹಲವು ರುಚಿಯ ಕುರ್ಮ ಮಾಡಿ ಸವಿದಿರುತ್ತೀರಿ. ಹಾಗೆ ಹೊಸ ಹೊಸ ಬಗೆಯಲ್ಲಿ ರೆಸಿಪಿಗಳ ಮಾಡಿ ಸವಿದಿರುತ್ತೀರಿ.

ಈ ಈರುಳ್ಳಿ ಕುರ್ಮ ಎಲ್ಲಾ ತಿಂಡಿಯೊಂದಿಗೆ ಮಾಡಿ ಸವಿಯಬಹುದು, ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ಕಡಿಮೆ ವಸ್ತುಗಳ ಬಳಸಿಕೊಂಡು ಅತ್ಯಂತ ಸುಲಭವಾಗಿ ಮಾಡಿ ಮುಗಿಸಬಹುದು. ಹಾಗಾದ್ರೆ ಈ ಈರುಳ್ಳಿ ಕುರ್ಮ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ಕುರ್ಮ ಮಾಡಲು ಅಗತ್ಯ ವಸ್ತುಗಳು
- ಈರುಳ್ಳಿ
- ಇಂಗು
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಧನಿಯಾ ಪುಡಿ
- ಖಾರದ ಪುಡಿ
- ಅರಶಿಣ
- ಉಪ್ಪು
- ಎಣ್ಣೆ
- ಸಾಂಬಾರ್ ಪುಡಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಬೆಲ್ಲ
ಈರುಳ್ಳಿ ಕುರ್ಮ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಸ್ವಲ್ಪ ಹೆಚ್ಚಾಗಿ ಬಳಸಿ ಹಾಗೆ ಬಿಸಿಯಾದ ಎಣ್ಣೆಗೆ ಜೀರಿಗೆ, ಸಾಸಿವೆ, ಇಂಗು, ಮೆಂತ್ಯ, ಕರಿಬೇವು ಹಾಕಿ ಬಿಸಿ ಮಾಡಿ. ಈಗ ಹೆಚ್ಚಿಕೊಂಡಿರುವ 4 ಈರುಳ್ಳಿಯನ್ನು ಸಹ ಇದಕ್ಕೆ ಹಾಕಿ ಬಳಿಕ ಒಂದು ಬೆಳ್ಳುಳ್ಳಿ ಸಹ ಹಾಕಿ 1 ನಿಮಿಷ ಹುರಿದುಕೊಳ್ಳಿ.
ತದನಂತರ ಖಾರದ ಪುಡಿ, ಅರಶಿಣ, ಧನಿಯಾ ಪುಡಿ, ಸಾಂಬಾರ್ ಪುಡಿ, ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳುತ್ತಾ ಇರಿ. ಇದಾದ ಬಳಿಕ 2 ಟೊಮೆಟೋವನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಅದರ ಪೇಸ್ಟ್ ಮಾಡಿಕೊಂಡು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮತ್ತೆ ಮುಚ್ಚಿ 2 ನಿಮಿಷ ಕುದಿಬರಲು ಬಿಡಿ.
ಇದರಿಂದ ಹಸಿ ವಾಸನೆ ಹೋದ ಬಳಿಕ ನೆನೆಸಿಟ್ಟಿರುವ ಹುಣಸೆ ಹುಳಿಯ ರಸವನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ. ಹಾಗೆ ಮಿಶ್ರಣ ಮಾಡಿಕೊಳ್ಳುತ್ತಾ ಇದಕ್ಕೆ 1 ಚಮಚ ಬೆಲ್ಲ ಹಾಕಿಕೊಂಡು ಕರಗಲು ಬಿಡಿ. ಕೊನೆಯಲ್ಲಿ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿದ್ದ ಕೊತ್ತಂಬರಿ ಸೊಪ್ಪು ಸಹ ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈರುಳ್ಳಿ ಕುರ್ಮ ಸಿದ್ದವಾಗುತ್ತೆ.
ಇದಕ್ಕೆ ಈರುಳ್ಳಿಯನ್ನು ಸ್ವಲ್ಪ ದೊಡ್ಡದಾಗಿ ಹೆಚ್ಚಿಕೊಂಡರೆ ಸಾಕಾಗುತ್ತದೆ. ಎಲ್ಲಾ ಅಡುಗೆಯೊಂದಿಗೂ ಇದು ಅದ್ಭುತ ರುಚಿ ನೀಡಲಿದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications