Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕ್ರಿಸ್ಪಿಯಾಗಿ ನಿಮಿಷದಲ್ಲಿ ಈರುಳ್ಳಿ ಬೋಂಡಾ ರೆಡಿ..! ಸಿಂಪಲ್ ರೆಸಿಪಿ ಇಲ್ಲಿದೆ
ಬೆಳಗ್ಗೆ ತಿಂಡಿ ಅಥವಾ ಸಂಜೆ ಟೀ ಜೊತೆ ಬಿಸಿಬಿಸಿಯಾದ ಬಜ್ಜೆ ಇಲ್ಲವೆ ಬೋಂಡಾ ಇದ್ದರೆ ಅದರ ರುಚಿಯೇ ಬೇರೆ. ನೀವು ಸಹ ಇದನ್ನೇ ಬಯಸುತ್ತೀರಿ. ಹೊರಗೆ ಹೋಟೆಲ್‌ನಲ್ಲಿ ಟೀ ಕುಡಿಯುವವರು ಈ ರೀತಿ ಬೋಂಡಾ ಬಜ್ಜಿಯನ್ನ ಆರ್ಡರ್ ಮಾಡಲು ಇಷ್ಟಪಡುತ್ತಾರೆ. ಆದ್ರೆ ಮನೆಯಲ್ಲೇ ನಾವು ಈ ರುಚಿಯ ಬೋಂಡಾ ಬಜ್ಜಿ ಮಾಡಬಹುದು.
ಹೌದು ಬೆಳಗ್ಗೆ ತಿಂಡಿಗೆ ಇಲ್ಲವೆ ಸಂಜೆ ಸ್ನ್ಯಾಕ್ಸ್‌ನಂತೆ ಸೇವಿಸಲು ಈರುಳ್ಳಿ ಬೋಂಡಾ ಒಳ್ಳೆಯ ತಿಂಡಿಯಾಗಿದೆ. ಈ ಈರುಳ್ಳಿ ಬೋಂಡಾವನ್ನು ಮಾಡುವುದು ತುಂಬಾನೆ ಸುಲಭ. ಮನೆಯಲ್ಲಿ ಫಟಾಫಟ್ ಎಂದು ಮಾಡಬಹುದು. ರುಚಿಯು ಸಹ ಯಾವುದು ಸರಿಸಾಟಿಯಿಲ್ಲ. ಹೀಗಾಗಿ ನಾವಿಂದು ಮನೆಯಲ್ಲಿ ಈರುಳ್ಳಿ ಬೋಂಡಾ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಈ ಈರುಳ್ಳಿ ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳೇನು? ಅದರನ್ನು ಮಾಡುವ ಪಾಕವಿಧಾನವೇನು ಎಂಬುದನ್ನು ಈ ಲೇಖನದಲ್ಲಿ ನಾವಿಂದು ತಿಳಿದುಕೊಳ್ಳೋಣ. ಈ ರೆಸಿಪಿಯನ್ನು ಮನೆಯಲ್ಲಿ ಇರುವ ವಸ್ತುಗಳನ್ನೇ ಬಳಸಿಕೊಂಡು ಮಾಡಬಹುದು.
ಈರುಳ್ಳಿ ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು-2 ಕಪ್
- ಅಕ್ಕಿ ಹಿಟ್ಟು-1 ಕಪ್
- ಈರುಳ್ಳಿ-2
- ಆಲೂಗಡ್ಡೆ-2
- ಜೀರಿಗೆ
- ಮೊಸಲು-ಅರ್ಧ ಕಪ್
- ನೀರು-ಅರ್ಧ ಕಪ್
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹಸಿಮೆಣಸು
- ಶುಂಠಿ
- ಅಡುಗೆ ಸೋಡಾ
- ಉಪ್ಪು
ಈರುಳ್ಳಿ ಬೋಂಡಾ ಮಾಡುವ ವಿಧಾನ
ಈರುಳ್ಳಿ ಬೋಂಡಾ ಮಾಡಲು ಮೊದಲು ಪಾತ್ರಯನ್ನು ತೆಗೆದುಕೊಂಡು ಅದಕ್ಕೆ 1 ಕಪ್ ಮೈದಾ ಹಿಟ್ಟು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು, ಜೀರಿಗೆ, ಮೊಸರು, ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಉಪ್ಪು ಹಾಕಿ ಮತ್ತೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಕಾಲು ಟೀ ಸ್ಪೂನ್ ಸೋಡಾ ಹಾಕಿ ಮಿಶ್ರಣ ಮಾಡಿ. ಇದಾದ ನಂತರ ಹಿಟ್ಟಿಗೆ 2 ಆಲೂಗಡ್ಡೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದರ ಪೇಸ್ಟ್‌ನಂತೆ ಮಾಡಿಕೊಂಡು ಈ ಹಿಟ್ಟಿಗೆ ಹಾಕಿ. ಬಳಿಕ ಮತ್ತೆ 1 ಕಪ್ ಮೈದಾ ಹಿಟ್ಟು ಹಾಕಿ ಕಲಸಿಕೊಳ್ಳಿ. ಇದಾದ ಮೇಲೆ ಹಿಟ್ಟು ತೆಳುವಾಗಿದ್ದರೆ ಮತ್ತೆ ನೀವು ಎಷ್ಟು ಬೇಕೋ ಅಷ್ಟು ಹಿಟ್ಟನ್ನು ಹಾಕಿಕೊಳ್ಳಬಹುದು. ಹಿಟ್ಟು ಸರಿಯಾಗಿ ಬರುವಂತೆ ನೀರನ್ನು ಅಳತೆ ಮಾಡಿಕೊಳ್ಳುತ್ತಾ ಸೇರಿಸಿ.
ಇದಾದ ಬಳಿಕ ಈರುಳ್ಳಿಯನ್ನು ಚೆನ್ನಾಗಿ ಸ್ಲೈಸ್ ಮಾಡಿಕೊಂಡು ಅದನ್ನು ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಮೇಲೆ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಎಣ್ಣೆಯಲ್ಲಿ ಬಿಡಿ. ಈರುಳ್ಳಿ ಬೋಂಡಾವನ್ನು ಎರಡು ಕಡೆ ಬೇಯಿಸಿ, ಗೋಲ್ಡನ್ ಕಲರ್ ಬರುವವರೆಗೆ ಕಾಯಿಸಿದರೆ ಅದು ತುಂಬಾನೆ ಕ್ರಿಸ್ಪಿಯಾಗಿರುತ್ತೆ.
ತುಂಬಾ ಗರಿ ಗರಿ ಬೇಕೆಂದರೆ ಜಾಸ್ತಿ ಹೊತ್ತು ಎಣ್ಣೆಯಲ್ಲಿ ಕರಿಯಿರಿ, ಹೀಗೆ ಕರಿದರೆ 1-2 ದಿನ ಇಡಬಹುದು, ಇಲ್ಲಾ ಅಂದರೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ, ಆದರೆ ಈರುಳ್ಳಿ ಹಾಗೂ ಹಿಟ್ಟು ಬೆಂದಿರಬೇಕು, ಬೇಗ ತೆಗೆಯಬೇಡಿ. ಮಧ್ಯಮ ಉರಿಯಲ್ಲಿಟ್ಟು ಕರಿದರೆ ಉತ್ತಮ. ಇದಕ್ಕೆ ಆಲೂಗಡ್ಡೆ ಹಾಕುವುದರಿಂದ ಬೇಗನೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಹೀಗಾಗಿ ಬೋಂಡಾವನ್ನು ನಿಧಾನವಾಗಿ ಕಾಯಿಸಿ. ಈ ಬೋಂಡಾ ಕರಿದ ಬಳಿಕ ಒಳ್ಳೆ ರುಚಿಯ ಟೀ ಇಲ್ಲವೆ ಕಾಫಿ ಜೊತೆ ಸವಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.



Click it and Unblock the Notifications