Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಇಷ್ಟದ ಈರುಳ್ಳಿ ಬಜ್ಜಿ ಮಾಡೋದು ಹೇಗೆ? 2 ಈರುಳ್ಳಿ ಇದ್ರೆ ಸಾಕು..!
ಸಂಜೆ ಸಮಯದಲ್ಲಿ ಟೀ ಕಾಫಿ ಜೊತೆಗೆ ಸವಿಯಲು ಒಂದಿಷ್ಟು ಸ್ನ್ಯಾಕ್ಸ್‌ಗಳಿದ್ದರೆ ಚೆನ್ನಾಗಿರುತ್ತೆ. ಅದ್ರಲ್ಲೂ ಈಗಿನ ಚಳಿ ಚಳಿಯ ಸಮಯದಲ್ಲಿ ನೀವು ಅದ್ಭುತ ರುಚಿಯಲ್ಲಿ ಯಾವುದಾರು ಬೋಂಡಾ, ಬಜ್ಜಿ, ಪಕೋಡ ಹೀಗೆ ಯಾವುದಾದರು ಕರಿದ ತಿಂಡಿಗಳ ಮಾಡಿ ಸವಿಯಲು ಮುಂದಾಗುತ್ತೀರಿ. ಮನೆಯಲ್ಲಿ ಮಾಡಿ ಸವಿಯಬಹುದಾದ ಕೆಲವೊಂದು ಸ್ನ್ಯಾಕ್ಸ್‌ಗಳು ನಮಗೆ ಅದ್ಭುತ ರುಚಿ ನೀಡುತ್ತವೆ.
ಮನೆಯಲ್ಲೇ ಮಾಡಿ ಎಲ್ಲರು ಜೊತೆಗೆ ಸವಿಯುವಂತಹ ಕೆಲವೇ ಸ್ನ್ಯಾಕ್ಸ್‌ಗಳಲ್ಲಿ ಈರುಳ್ಳಿ ಬಳಸಿ ಮಾಡುತಂಹ ಬಜ್ಜಿ ಕೂಡ ಒಂದು. ಬಿಸಿ ಬಿಸಿಯಾಗಿ ಈರುಳ್ಳಿ ಬಜ್ಜಿ ಸವಿಯುತ್ತಾ ಟೀ ಕುಡಿಯುವುದೇ ಒಂದು ಅದ್ಭುತ. ಹೀಗಾಗಿ ಸಂಜೆ ಸಮಯದಲ್ಲಿ ಬಜ್ಜಿ ಹೋಟೆಲ್‌ಗಳು, ರಸ್ತೆ ಬದಿಯಲ್ಲಿ ನೀಡಲಾಗುವಂತಹ ಈ ಬಜ್ಜಿಗಳನ್ನು ಸವಿಯಲು ಜನರು ಸಾಲಾಗಿ ನಿಂತಿರುತ್ತಾರೆ.

ಆದ್ರೆ ನಾವಿಂದು ಈ ಬಜ್ಜಿಯನ್ನು ಮನೆಯಲ್ಲೇ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಹಾಗಾದ್ರೆ ಈ ಈರುಳ್ಳಿ ಬಜ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ.?, ಮಾಡುವಾಗ ಯಾವೆಲ್ಲಾ ರೀತಿ ಕ್ರಮ ತೆಗೆದುಕೊಳ್ಳಬೇಕು? ಎಂಬುದು ಮುಖ್ಯವಾಗಿ ನಾವಿಂದು ತಿಳಿಯೋಣ. ಹಾಗೆ ಇದಕ್ಕೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ನೋಡೋಣ.
ಈರುಳ್ಳಿ ಬಜ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಈರುಳ್ಳಿ (ಕತ್ತರಿಸಿದ) - 2
ಮೈದಾ ಹಿಟ್ಟು - 1 1/4 ಕಪ್
ಅಕ್ಕಿ ಹಿಟ್ಟು - 1/4 ಕಪ್
ಜೀರಿಗೆ - 1/2 ಟೀಸ್ಪೂನ್
ಮೊಸರು - 1/2 ಕಪ್
ಕರಿಬೇವಿನ ಎಲೆ - 2 tbs
ಕೊತ್ತಂಬರಿ ಸೊಪ್ಪು - 2 tbs
ಹಸಿ ಮೆಣಸಿನಕಾಯಿ - 3
ಶುಂಠಿ - 1 ಟೀಸ್ಪೂನ್
ಅಡುಗೆ ಸೋಡಾ - 1/4 ಟೀಸ್ಪೂನ್
ರುಚಿಗೆ ಉಪ್ಪು
ಎಣ್ಣೆ
ನೀರು
ಈರುಳ್ಳಿ ಬಜ್ಜಿ ಮಾಡುವ ಸುಲಭದ ವಿಧಾನ ಇಲ್ಲಿದೆ
ಮೊದಲು ಒಂದು ಬೌಲ್‌ಗೆ ಮುಕ್ಕಾಲು ಕಪ್ ಮೈದಾ ಹಿಟ್ಟು ಹಾಕಿಕೊಳ್ಳಿ. ಅನಂತರ ಇದಕ್ಕೆ ಕಾಲು ಕಪ್ ಅಕ್ಕಿ ಹಿಟ್ಟು, ಜೀರಿಗೆ, ಅರ್ಧ ಕಪ್ ಮೊಸರು, ಅರ್ಧ ಕಪ್ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ಗಟ್ಟಿಯಾದ ಹಿಟ್ಟಾಗಬೇಕು. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿ ಮೆಣಸು ಸಣ್ಣದಾಗಿ ಹೆಚ್ಚಿಕೊಂಡು ಹಾಕಿ, ಹಾಗೆ ಶುಂಠಿ, ಉಪ್ಪು ನೀರು ಹಾಕಿ ಮಿಕ್ಸ್ ಮಾಡಿ.
ನೀರನ್ನು 2 ಸ್ಪೂನ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸೋಡಾ ಕೂಡ ಹಾಕಿ ಮಿಕ್ಸ್ ಮಾಡಿ. ಅನಂತರ ಮತ್ತೆ ಅರ್ಧ ಕಪ್ ಮತ್ತೆ ಮೈದಾ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಹದ ಮಾಡಿಕೊಳ್ಳಿ. ಹಿಟ್ಟು ದಪ್ಪ ಎನಿಸಿದರೆ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಹದ ಮಾಡಿಕೊಳ್ಳಿ. ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ, ಅನಂತರ ಮೂರು ಸ್ಪೂನ್ ಬಿಸಿ ಮಾಡಿದ ಎಣ್ಣೆ ಹಾಕಿ ಕಲಸಿಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಅನಂತರ ಒಂದೊಂದೇ ಉಂಡೆಯನ್ನು ಈ ಬಾಣಲೆಗೆ ಹಾಕಿಕೊಂಡು ಕರಿಯಲು ಬಿಡಿ. 4ರಿಂದ 5 ನಿಮಿಷ ಕರಿದುಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಸಂಜೆ ವೇಳೆ ಸವಿಯಲು ಸ್ನ್ಯಾಕ್ಸ್ ರೆಡಿಯಾಗುತ್ತದೆ. ಇದನ್ನು ನೀವು ಬೆಳಗ್ಗೆ ತಿಂಡಿಗೂ ಮಾಡಬಹುದು. ಹಾಗೆ ಒಂದಿಷ್ಟು ದಿನ ಇಟ್ಟು ಕೂಡ ಸವಿಯಬಹುದು.



Click it and Unblock the Notifications