Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿತ್ತಲಲ್ಲಿ ಸಿಗುವ ಒಂದೆಲಗ ಸೊಪ್ಪಿನಿಂದ ರುಚಿ ರುಚಿ ಚಟ್ನಿ ಮಾಡಿ..! ಹೇಗೆ ಗೊತ್ತಾ?
ಬ್ರಾಹ್ಮಿ (Bacopa monnieri) ಎಂದು ಕರೆಯಲ್ಪಡುವ ಅಥವಾ ಒಂದೆಲಗ ಸೊಪ್ಪಿನ ಬಗ್ಗೆ ನೀವು ಕೇಳಿರುತ್ತೀರಿ. ಇವು ನಿಮ್ಮ ಮನೆಯ ಹಿತ್ತಲ್ಲಲಿ ಬೆಳೆಯುತ್ತವೆ. ಮಾರುಕಟ್ಟೆಯಲ್ಲೂ ಇವು ಲಭ್ಯವಿರುತ್ತವೆ. ನೆಲಮಟ್ಟದಲ್ಲಿ ಬೆಳೆಯುವ ಚಿಕ್ಕ ಗಿಡವಾಗಿದ್ದು ಸಾಮಾನ್ಯವಾಗಿ ನೀರು ನಿಂತಿರುವಲ್ಲೆಲ್ಲಾ ಹುಲುಸಾಗಿ ಬೆಳೆಯುತ್ತದೆ. ಇದರ ಎಲೆಗಳು ನೀರು ತುಂಬಿಕೊಂಡು ದಪ್ಪನಾಗಿ ದಟ್ಟ ಹಸಿರು ಬಣ್ಣ ಹೊಂದಿದ್ದರೆ ಹೂವುಗಳು ಬಿಳಿಯ ಬಣ್ಣದ್ದಾಗಿದ್ದು ಐದು ಎಸಳುಗಳಿಂದ ಕೂಡಿವೆ. ಈ ಎಲೆ ಮತ್ತು ಹೂವುಗಳಲ್ಲಿ ಅದ್ಭುತವಾದ ಔಷಧೀಯ ಗುಣಗಳಿಂದ ಹೆಚ್ಚು ಫೇಮಸ್ ಆಗಿದೆ.

ಈ ಎಲೆಗಳಿಂದ ಚಟ್ನಿ ಸಹ ಮಾಡಬಹುದು. ಬೆಳಗ್ಗೆಯ ತಿಂಡಿಗೆ ಇಲ್ಲವೆ ಊಟಕ್ಕೂ ಈ ಚಟ್ನಿ ಬಲು ರುಚಿ ನೀಡುತ್ತದೆ. ಇದರಲ್ಲಿ ಔಷಧಿ ಗುಣವಿರುವ ಜೊತೆಗೆ ರುಚಿಗೂ ಎತ್ತಿದ ಕೈ ಇದಾಗಿದೆ. ಆರ್ಯುವೇದದಲ್ಲಿ ಈ ಸೊಪ್ಪಿಗೆ ಇನ್ನಿಲ್ಲದ ಪ್ರಾಮುಖ್ಯತೆ ಇದೆ. ಹಬ್ಬ ಹರಿದಿನಗಳಲ್ಲಿ ಈ ಸೊಪ್ಪಿನ ಚಟ್ನಿ ಮಾಡುವುದು ರೂಢಿಯಾಗಿದೆ.
ಹಾಗಾದ್ರೆ ಒಂದೆಲಗ ಸೊಪ್ಪಿನ ಚಟ್ನಿ ಮಾಡುವುದು ಹೇಗೆ? ಒಂದೆಲಗ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಈ ಚಟ್ನಿಯ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಒಂದೆಲಗ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
(ಒಬ್ಬರಿಗೆ ಅಥವಾ ಇಬ್ಬರಿಗೆ ಸಾಕುಗುವ ಚಟ್ನಿ)
- ಒಂದೆಲಗ ಸೊಪ್ಪು- 1 ಕಪ್
- ಉದ್ದಿನ ಬೇಳೆ - 1 ಟೀಸ್ಪೂನ್
- ಕಡಲೆ ಬೇಳೆ - 1 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 2
- ಕೆಂಪು ಮೆಣಸಿನಕಾಯಿ - 4
- ಈರುಳ್ಳಿ - 2
- ಬೆಳ್ಳುಳ್ಳಿ - 1
- ಜೀರಿಗೆ - 1 ಟೀಸ್ಪೂನ್
- ಟೊಮೆಟೊ - 1
- ತೆಂಗಿನಕಾಯಿ - 3 ಚಮಚ
- ಕೊತ್ತಂಬರಿ ಸೊಪ್ಪು - 2 tbs
- ಹುಣಸೆಹುಳಿ-1/2 tbs
- ಸಾಸಿವೆ - 1/4 ಟೀಸ್ಪೂನ್
- ಇಂಗು - 1/4 ಟೀಸ್ಪೂನ್
- ಕರಿಬೇವಿನ ಎಲೆಗಳು - 1 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಒಂದೆಲಗ ಸೊಪ್ಪಿನ ಚಟ್ನಿ ಮಾಡುವ ವಿಧಾನ
ಮೊದಲು ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಉದ್ದಿನ ಬೇಳೆ ಹಾಗೂ ಕಡಲೆ ಬೇಳೆ ಹಾಕಿ. ಇದನ್ನು ಫ್ರೈ ಮಾಡಕೊಳ್ಳುತ್ತಾ ಹಸಿರು ಮೆಣಸು, ಕೆಂಪು ಮೆಣಸು, ಜೀರಿಗೆ, ಈರುಳ್ಳಿ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಳ್ಳಿ.
ಇನ್ನೊಂದೆಡೆ ಒಂದೆಲಗ ಸೊಪ್ಪನ್ನು ನೀರಿನಲ್ಲಿ ಹಾಕಿ ತೊಳೆದುಕೊಳ್ಳಿ. ಬಳಿಕ ಎಲೆಯನ್ನು ಫ್ರೈ ಮಾಡಲು ಹಾಕಿ. ಇದರ ಜೊತೆ ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಈ ವೇಳೆ ಉರಿ ಮಧ್ಯಮವಾಗಿರಲಿ. ಇದಕ್ಕೆ ತೆಂಗಿನ ಕಾಯಿ ಸಣ್ಣದಾಗಿ ಕತ್ತರಿಸಿ ಹಾಕಿ, ಹುಣಸೆ ಹುಳಿ, ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಫ್ರೈ ಮಾಡಿ ಉರಿ ಆಫ್ ಮಾಡಿ ತಣ್ಣಗಾಗಲು ಇಡಿ.

ಇದು ತಣ್ಣಗಾದ ಬಳಿಕ ಸಣ್ಣ ಮಿಕ್ಸಿ ಜಾರ್ಗೆ ಹಾಕಿಕೊಂಡು ಉಪ್ಪು ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಪಾತ್ರೆಯಲ್ಲಿ ಎಣ್ಣೆ ಇಟ್ಟು ಜೀರಿಗೆ, ಕರಬೇವಿನ ಎಲೆ ಹಾಕಿ ತಕ್ಷಣ ರುಬ್ಬಿಕೊಂಡ ಚಟ್ನಿಯನ್ನು ಒಗ್ಗರಣೆಗೆ ಹಾಕಿ ಉರಿಯನ್ನು ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಒಂದೆಲಗ ಸೊಪ್ಪಿನ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಕಡಿಮೆ ಸಮಯದಲ್ಲಿ ಈ ಚಟ್ನಿ ಮಾಡಬಹುದು.



Click it and Unblock the Notifications